2011ರಲ್ಲಿ, ತಮಿಳು ನಟ ಮತ್ತು ನಿರ್ದೇಶಕ ರಾಘವ ಲಾರೆನ್ಸ್ ಅವರು ಅಭಿನಯಿಸಿರುವ ಕಾಂಚನ ಸಿನಿಮಾ ಹಿಟ್ ಆಗಿತ್ತು. ಇದು ಕನ್ನಡದಲ್ಲಿ ʻಕಲ್ಪನಾʼ ಹೆಸರಿನಲ್ಲಿ ಸಿನಿಮಾ ರಿಮೇಕ್ ಆಯಿತು. ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳೆಬ್ಬಿಸಿದ ತಮಿಳು ಚಿತ್ರ ಕಾಂಚನ ವಿವಿಧ ಭಾಷೆಗಳಲ್ಲಿ ರೀಮೇಕ್ ಆಗಿ ಯಶಸ್ವಿ ಪ್ರದರ್ಶನ ಕಂಡಿತು. ಇದರಲ್ಲಿ ಶರತ್‌ಕುಮಾರ್ ನಟನೆಯು ಸಹ ಮೆಚ್ಚುಗೆಗೆ ಪಾತ್ರವಾಯಿತು. ಆರ್ ಶರತ್‌ಕುಮಾರ್ ಪಾತ್ರದ ದತ್ತು ಪುತ್ರಿಯಾಗಿ ನಟಿಸಿದ ಗೀತಾ ಪಾತ್ರ ಕೂಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು. ಗೀತಾಳ ಪಾತ್ರ ಮಂಗಳ ಮುಖಿಯಾಗಿದ್ದು, ಈ ಪಾತ್ರವನ್ನು ಮಂಗಳಮುಖಿ ಪ್ರಿಯಾ (Transgender Actress Priya) ನಟಿಸಿದ್ದಾರೆ. ಆದರೀಗ ಪ್ರಿಯಾ ಅವರು ಆ ಪಾತ್ರದ ಬಗ್ಗೆ ಸಮಾಧಾನ ಹೊರಹಾಕಿದ್ದಾರೆ.
ಪ್ರಿಯಾ ಸಿನಿಮಾದಲ್ಲಿ ತಮ್ಮ ನಟನೆಗೆ ನ್ಯಾಯ ಒದಗಿಸಿದ್ದರು. ಈ ಸಿನಿಮಾ ಬಳಿಕ ಪ್ರಿಯಾ ಅವರು ಮುಂಬರುವ ಚಿತ್ರಗಳಲ್ಲಿ ಜನರು ಅವರನ್ನು ಹೆಚ್ಚು ನೋಡಲು ನಿರೀಕ್ಷಿಸುತ್ತಿದ್ದರು. ಆದರೆ, ಅದು ಆಗಲಿಲ್ಲ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಕಾಂಚನ ಸಿನಿಮಾದಲ್ಲಿ ನಟಿಸಿದ್ದು ನನ್ನ ಜೀವನದಲ್ಲಿ ಮಾಡಿದ ಒಂದು ದೊಡ್ಡ ತಪ್ಪು ಎಂದು ನಿರ್ಧಾರ ಎಂದು ಪ್ರಿಯಾ ಹೇಳಿದ್ದಾರೆ.
ʻʻಚಿತ್ರದ ಆಫರ್ ಬರುವವರೆಗೂ ಸಾಮಾನ್ಯ ಮಂಗಳಮುಖಿಯರ ಜೀವನದಂತೆ ಬದುಕುತ್ತಿದ್ದೆ. ಸಿನಿಮಾ ರಿಲೀಸ್ ಆದ ಮೇಲೆ ನನಗೆ ಎಲ್ಲಿಯೂ ಕೆಲಸ ಸಿಗುತ್ತಿರಲಿಲ್ಲ. ಇಂದಿಗೂ ಕಷ್ಟವಾಗುತ್ತಿದೆ. ಈಗಾಗಲೇ ನನ್ನ ಬಳಿ ಸಾಕಷ್ಟು ಹಣವಿದೆ ಎಂದು ಜನ ಭಾವಿಸಿದ್ದರು. ಕೇವಲ ಮಂಗಳಮುಖಿ ಪಾತ್ರಗಳನ್ನು ಮಾತ್ರ ಮಾಡಲು ಅವಕಾಶ ನೀಡುವುದರಿಂದ ಸಿನಿಮಾಗಳಲ್ಲಿ ಯಾವುದೇ ಬೇರೆ ಪಾತ್ರಗಳು ಸಿಗಲಿಲ್ಲ. ಜೀವನ ಚೆನ್ನಾಗಿಯೇ ಹೋಗುತ್ತಿದೆ ಆದರೆ ಕಾಂಚನಾ ಸಿನಿಮಾದಿಂದ ತೊಂದರೆಯಂತೂ ಆಗಿದೆʼʼ ಎಂದು ಪ್ರಿಯಾ ಹೇಳಿದರು.
ಇದನ್ನೂ ಓದಿ: Ghajini Actress Asin: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ ವೈವಾಹಿಕ ಬದುಕಿನಲ್ಲಿ ಬಿರುಕು!
ಕಾಂಚನಾ ಕ್ರೇಜ್ ವಿದೇಶದವರೆಗೂ ಹಬ್ಬಿತ್ತು. ಹಲವಾರು ಭಾಷೆಗಳಿಗೆ ರಿಮೇಕ್ ಆಗಿತ್ತು. ಈ ಸಿನಿಮಾ ಕನ್ನಡದಲ್ಲಿ ಕಲ್ಪನಾ, ಶ್ರೀಲಂಕಾದಲ್ಲಿ ಮಾಯಾ ಎಂದು, ಬಂಗಾಳಿ ಬಾಂಗ್ಲಾದೇಶದಲ್ಲಿ ಮಾಯಾಬಿನಿ ಮತ್ತು ಹಿಂದಿಯಲ್ಲಿ ಲಕ್ಷ್ಮಿ ಸೇರಿದಂತೆ ಹಲವಾರು ಭಾಷೆಯಲ್ಲಿ ರೀಮೇಕ್ ಮಾಡಲಾಗಿದೆ.