ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮಿ (Yami Gautami) ಅವರು ಸದ್ಯ ತಮ್ಮ ʼಓಎಂಜಿ 2ʼ ಸಿನಿಮಾದ ಪ್ರಚಾರ ಕೆಲಸದಲ್ಲಿ ಬಿಜಿ ಇದ್ದಾರೆ. ಅದರ ಕಾರ್ಯಕ್ರಮವೊಂದಕ್ಕೆ ಅವರು ಕಡು ನೇರಳೆ ಬಣ್ಣದ ಕುರ್ತಾ ಸೆಟ್ ಧರಿಸಿ ಬಂದಿದ್ದರು. ಬರೋಬ್ಬರಿ 44 ಸಾವಿರ ರೂ. ಬೆಲೆಯ ಆ ಕುರ್ತಾ ಸೆಟ್ ಅನ್ನು ಯಾಮಿಗೂ ಮೊದಲು ನಟಿ ದೀಪಿಕಾ ಪಡುಕೋಣೆ ಅವರು ಧರಿಸಿದ್ದರು.
ಯಾಮಿ ಅವರು ಕಡು ನೇರಳೆ ಬಣ್ಣದ ಬಂಧೇಜ್ ಸಿಲ್ಕ್ ಸೂಟ್ ಅನ್ನು ಧರಿಸಿದ್ದರು. ರಾ ಮ್ಯಾಂಗೋ ಕಂಪನಿಯ ಆ ಡ್ರೆಸ್‌ನ ಜತೆಯಲ್ಲಿ ಚಿನ್ನದ ಕಿವಿ ಓಲೆ ಮತ್ತು ಉಂಗುರಗಳನ್ನು ಧರಿಸಿದ್ದರು. ಹೈ ಹೀಲ್ಸ್‌ನೊಂದಿಗೆ ತೊಟ್ಟಿದ್ದ ನಟಿ ಲೈಟ್ ಮೇಕಪ್ ಮಾಡಿಸಿಕೊಂಡಿದ್ದರು. ಕೂದಲನ್ನು ಫ್ರೀ ಆಗಿ ಬಿಟ್ಟುಕೊಂಡು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಅಂದ ಹಾಗೆ ಯಾಮಿ ಅವರು ತೊಟ್ಟಿದ್ದ ರೀತಿಯ ಕುರ್ತಾ ಸೆಟ್ ಅನ್ನು ನಟಿ ದೀಪಿಕಾ ಪಡುಕೋಣೆ ಅವರು ಈ ಹಿಂದೆಯೇ ತೊಟ್ಟಿದ್ದರು. 2021ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನ ದೇವಾಲಯಕ್ಕೆ ಭೇಟಿ ನೀಡುವಾಗ ತೊಟ್ಟಿದ್ದರು. ಆದರೆ ಅವರು ಇದೇ ರೀತಿಯ ರಾಣಿ ಪಿಂಕ್ ಬಣ್ಣದ ಕುರ್ತಾ ಸೆಟ್ ಅನ್ನು ಧರಿಸಿದ್ದರು. ಆಗ ಅವರು ಡ್ರೆಸ್‌ಗೆ ಮ್ಯಾಚ್ ಆಗುವ ರೀತಿಯಲ್ಲಿ ಗೋಲ್ಡ್ ಜುಮುಕಿ, ಕಂಚು ಮತ್ತು ಚಿನ್ನದ ಬಣ್ಣದ ಜುಟ್ಟಿಯನ್ನು ತೊಟ್ಟಿದ್ದರು. ಮಿನಿಮಮ್ ಮೇಕಪ್‌ನಲ್ಲಿದ್ದ ಅವರು ಮಧ್ಯ ಬೈತಲೆ ತೆಗೆದು ಕೂದಲನ್ನು ಹಿಂದೆ ಜುಟ್ಟಿನ ರೀತಿಯಲ್ಲಿ ಕಟ್ಟಿಕೊಂಡಿದ್ದರು.
ದೀಪಿಕಾ ಪಡುಕೋಣೆ ಅವರು ಕೂಡ ರಾ ಮ್ಯಾಂಗೋ ಬ್ರ್ಯಾಂಡ್‌ನದ್ದೇ ಕುರ್ತಾ ಸೆಟ್ ಅನ್ನು ಧರಿಸಿದ್ದರು. ನೀವು ಬೇಕಾದರೂ ಈ ರೀತಿಯ ಕುರ್ತಾ ಸೆಟ್ ಅನ್ನು ರಾ ಮ್ಯಾಂಗೋ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದೆ. ಕಂಪನಿಯು ಈ ಡ್ರೆಸ್‌ಗೆ ಸುಷ್ಮಾ ಅಂಡ್ ಡಿನಾ ಎನ್ನುವ ಹೆಸರನ್ನು ಕೊಟ್ಟಿದೆ. ಈ ಕುರ್ತಾ ಸೆಟ್ ದೀಪಿಕಾ ಅವರು ತೊಟ್ಟಿದ್ದ ರಾಣಿ ಪಿಂಕ್ ಬಣ್ಣದಲ್ಲಿ ಹಾಗೆಯೇ ಯಾಮಿ ಗೌತಮಿ ಅವರು ತೊಟ್ಟಿದ್ದ ಕಡು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ. ಈ ಕುರ್ತಾ ಸೆಟ್‌ನ ಬೆಲೆಯನ್ನು 44,800 ರೂ. ಎಂದು ಕಂಪನಿ ನಿಗದಿ ಮಾಡಿದೆ.
ಈ ರೇಷ್ಮೆ ಬಂಧೇಜ್ ಸೂಟ್ ಸೆಟ್ ಉದ್ದವಾದ ಕುರ್ತಾ ಹಾಗೂ ಅದೇ ರೀತಿಯ ಪ್ಯಾಂಟ್ ಅನ್ನು ಹೊಂದಿದೆ. ವಿ ಶೇಪ್ ನೆಕ್‌ಲೈನ್ ಇರುವ ಇದರಲ್ಲಿ ಉದ್ದ ತೋಳುಗಳಿವೆ. ಇದರಲ್ಲಿ ಕೈಯಿಂದ ಕಸೂತಿ ಮಾಡಿರುವ ನವಿಲಿನ ಮೋಟಿಫ್‌ಗಳಿವೆ.
ಇದನ್ನೂ ಓದಿ: Viral Video : ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಬೀಡಿಯ ಹೊಗೆ; ನಿಂತೇ ಹೋಯ್ತು ರೈಲು!
ಯಾಮಿ ಗೌತಮಿ ಅಭಿನಯದ ಒಎಂಜಿ 2 ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತ್ ರೈ ನಿರ್ದೇಶನದ ಈ ಸಿನಿಮಾ ಅಕ್ಷಯ್ ಕುಮಾರ್ ಅವರ ಒಎಂಜಿ ಸಿನಿಮಾದ ಸೀಕ್ವೆಲ್ ಆಗಿದೆ. ಈ ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ.