ವೈರಲ್ ನ್ಯೂಸ್
Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರು ಯುವತಿಯೊಬ್ಬರ ಕೆನ್ನೆಗೆ ಬಾರಿಸಿದ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ವಾರಾಣಸಿ: ಸರ್ಕಾರಿ ಅಧಿಕಾರಿಗಳು ಮತ್ತು ಜನ ಸಾಮಾನ್ಯರ ನಡುವೆ ನಡೆಯುವ ಜಗಳದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡಿ, ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಯುವತಿಯೊಬ್ಬಳ ಕೆನ್ನೆಗೆ ಬಾರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ವಾರಾಣಸಿಯ ಹಳ್ಳಿಯೊಂದರಲ್ಲಿ ಆಸ್ತಿ ವಿಚಾರದಲ್ಲಿ ಜಗಳ ನಡೆದಿತ್ತು. ಇದೇ ವಿಚಾರದಲ್ಲಿ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಯು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಆಸ್ತಿಗೆ ಸಂಬಂಧಿಸಿದ ಯುವತಿಯೊಬ್ಬಳು ಮಹಿಳಾ ಅಧಿಕಾರಿಗಳೊಂದಿಗೆ ವಾದ ಮಾಡಲಾರಂಭಿಸಿದಳು. ಸರ್ಕಾರದಿಂದ ಬಂದಿರುವ ಆರ್ಡರ್‌ನ ನಕಲು ಕಾಪಿಯನ್ನು ಕೊಡಿ ಎಂದು ಆ ಅಧಿಕಾರಿಯನ್ನು ಯುವತಿ ಕೇಳಲಾರಂಭಿಸಿದಳು. ಇದೇ ವಿಚಾರಕ್ಕೆ ಅಧಿಕಾರಿ ಮತ್ತು ಯುವತಿಯ ನಡುವೆ ಜಗಳವಾಗಿದೆ. ಸಿಟ್ಟಿನಿಂದಾಗಿ ಅಧಿಕಾರಿಯು ಯುವತಿಯೆ ಕೆನ್ನೆಗೆ ಬಾರಿಸಿದ್ದಾಳೆ.
ಇದನ್ನೂ ಓದಿ: Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ!
ಯುವತಿ ಕೂಡ ಅಧಿಕಾರಿ ಮೇಲೆ ಕೈ ಎತ್ತಲು ಮುಂದಾಗಿದ್ದು, ಆಗ ಅಲ್ಲಿದ್ದ ಪೊಲೀಸರು ಮಧ್ಯೆ ಬಂದು ಜಗಳ ನಿಲ್ಲಿಸಿದ್ದಾರೆ. ಈ ಘಟನೆಯನ್ನು ಅಲ್ಲಿದ್ದ ಹಲವರು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೊ ಎಲ್ಲೆಡೆ ಹರಿದಾಡಿದ್ದು, ಭಾರೀ ವೈರಲ್ ಆಗಿದೆ.
ಘಟನೆಯ ಕುರಿತಾಗಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಜನರು ವಿಡಿಯೊ ಬಗ್ಗೆ ಹಲವಾರು ರೀತಿಯ ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಯುವತಿಯ ಕೆನ್ನೆಗೆ ಹೊಡೆದ ಸರ್ಕಾರಿ ಅಧಿಕಾರಿಯದ್ದೇ ತಪ್ಪು ಎಂದು ಅನೇಕರು ಕಮೆಂಟ್‌ಗಳಲ್ಲಿ ದೂರಲಾರಂಭಿಸಿದ್ದಾರೆ. ಇನ್ನು ಅನೇಕರು ವಿಡಿಯೊದಲ್ಲಿ ಯುವತಿಯ ವರ್ತನೆಯನ್ನು ನೋಡಿ ಯುವತಿಯದ್ದೇ ತಪ್ಪಿರಬೇಕು ಎಂದು ಆರೋಪಿಸಲಾರಂಭಿಸಿದ್ದಾರೆ. ಕೆಲವರು ಸರ್ಕಾರಿ ಅಧಿಕಾರಿ ತನ್ನ ಕೆಲಸದ ದರ್ಪದಿಂದಾಗಿ ಈ ರೀತಿ ವರ್ತಿಸಿದ್ದಾರೆ ಎಂದು ಬೈಯಲಾರಂಭಿಸಿದ್ದಾರೆ.
ಇದನ್ನೂ ಓದಿ: Viral Video : ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಬೀಡಿಯ ಹೊಗೆ; ನಿಂತೇ ಹೋಯ್ತು ರೈಲು!
ಇದೇ ರೀತಿಯ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ವ್ಯಕ್ತಿಯೊಬ್ಬ ತಿರುಪತಿಯಿಂದ ಸಿಕಂದರಾಬಾದ್‌ಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಟಿಕೆಟ್ ಇಲ್ಲದೆ ಹತ್ತಿ, ಅದರ ಶೌಚಾಲಯದೊಳಗೆ ಬೀಡಿ ಸೇದಿದ ಘಟನೆ ನಡೆದಿತ್ತು. ಅದರಿಂದಾಗಿ ರೈಲಿನಲ್ಲಿ ಫೈರ್ ಅಲಾರಾಂ ಹೊಡೆದುಕೊಂಡಿದ್ದು, ಪ್ರಯಾಣಿಕರು ಗಾಬರಿ ಬಿದ್ದಿದ್ದರು. ಕೊನೆಗೆ ರೈಲ್ವೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದ ದೃಶ್ಯದ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದೂ ಕೂಡ ವೈರಲ್ ಆಗಿತ್ತು.
ಕ್ರಿಕೆಟ್
Kapil Dev Kidnap: ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕಿಡ್ನಾಪ್; ವಿಡಿಯೊ ವೈರಲ್
ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ.
ಮುಂಬಯಿ: ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ. ಕಪಿಲ್ ದೇವ್(Kapil Dev) ಅವರನ್ನು ಕಿಡ್ನಾಪ್ ಮಾಡುತ್ತಿರುವ ವಿಡಿಯೊವನ್ನು ಮಾಜಿ ಆಟಗಾರ ಗೌತಮ್ ಗಂಭಿರ್(Gautam Gambhir) ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರು ಕಪಿಲ್ ದೇವ್ ಅವರ ಕೈಗಳನ್ನು ದಾರದಿಂದ ಹಿಂಭಾಗಕ್ಕೆ ಕಟ್ಟಿದ್ದು, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಕಟ್ಟಡವೊಂದರ ಒಳಗಡೆಗೆ ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಪಿಲ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವನ್ನೂ ಕಾಣಬಹುದಾಗಿದೆ.
ಗೌತಮ್ ಗಂಭೀರ್ ಅವರು ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಆತಂಕ ಹೊರಹಾಕಿದ್ದಾರೆ. “ಇದು ಕಪಿಲ್ ಪಾಜಿ ಅಲ್ಲ ಎಂದು ಭಾವಿಸುವೆ, ಅವರು ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಈ ವಿಡಿಯೊ ಹಿಂದಿರುವ ಕಾರಣ ಬೇರೆಯೇ ಇದೆ. ಇದೊಂದು ಜಾಹಿರಾತಿಗಾಗಿ ಚಿತ್ರಿಸಿದ ದೃಶ್ಯವೊಂದರ ತುಣಕಾಗಿದೆ.
ಆತಂಕಪಡಬೇಕಿಲ್ಲ
ಈ ಅಪಹರಣ ದೃಶ್ಯವನ್ನು ಜಾಹೀರಾತು ಉದ್ದೇಶಕ್ಕಾಗಿ ತೆಗೆದಿದ್ದು ಪ್ರಚಾರದ ಗಿಮಿಕ್ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ಸಾಧ್ಯತೆ ಇದೆ. ಕಪಿಲ್ ಅಪಹರಣ ಕುರಿತು ಭಾರಿ ಪ್ರಚಾರ ಪಡೆಯಲು ಈ ರೀತಿ ಮಾಡಿರುವ ಸಾಧ್ಯತೆ ಹೆಚ್ಚು.
ವಿಶ್ವಕಪ್ ಗೆಲ್ಲಲು ಅದೃಷ್ಟ ಕೈಹಿಡಿಯಬೇಕು
ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ. ಭಾರತದ ವಿಶ್ವಕಪ್ ಭವಿಷ್ಯವನ್ನು ಕಪಿಲ್ ಅವರು ನುಡಿದಿದ್ದು ಎಲ್ಲವೂ ಅದೃಷ್ಟವನ್ನು ಅವಲಂಭಿಸಿದ್ದರಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ವೆಂದು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಒಂದು ವೇಳೆ ನಮ್ಮ ತಂಡ ಅಗ್ರ ನಾಲ್ಕರೊಳಗಿನ ಹಂತಕ್ಕೆ ಬಂದರೆ ಮತ್ತೆ ಎಲ್ಲವೂ ಅದೃಷ್ಟದ ಬಲದಿಂದ ನಡೆಯುತ್ತದೆ. ಅಗ್ರ ನಾಲ್ಕರೊಳಗಿನ ಹಂತಕ್ಕೆ ಬರುವುದು ಅತ್ಯಂತ ಪ್ರಮುಖವಾಗಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲಲು ಸಿದ್ಧವಾಗಿದೆ. ಏಷ್ಯಾ ಕಪ್‌ನಲ್ಲಿ ತೋರಿದ ಅದ್ಭುತ ನಿರ್ವಹಣೆ ಇಲ್ಲಿಯೂ ಮುಂದುವರಿದರೆ ಕಪ್ಗೆಲ್ಲುವ ಸಾಧ್ಯತೆ ಇದೆ. ಜತೆಗೆ ಅದೃಷ್ಟವೂ ಕೈ ಹಿಡಿಯಬೇಕು” ಎಂದಿದ್ದರು.
ಇದನ್ನೂ ಓದಿ Viral News : ಕಿರುತೆರೆ ನಟಿ ಕಿರಿಕ್; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್!
10 ತಾಣಗಳಲ್ಲಿ ಪಂದ್ಯವಾಳಿ
ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
ಕರ್ನಾಟಕ
VISTARA TOP 10 NEWS: ನಾಳೆ ಬೆಂಗಳೂರು ಬಂದ್, ಶುಕ್ರವಾರ ಕರ್ನಾಟಕ ಬಂದ್, ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ಬಂದ್
VISTARA TOP 10 NEWS : ನಾಳೆ ಬೆಂಗಳೂರು ಬಂದ್, ಶುಕ್ರವಾರ ಕರ್ನಾಟಕ ಬಂದ್, ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಬಂದ್! ಇನ್ನು ಪ್ರಧಾನಿ ಮೋದಿ ಅವರು ಅ. 1ರಂದು ಎಲ್ಲರೂ ಸೇರಿ ಕಸ ಗುಡಿಸೋಣ ಅಂದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್ 10 ನ್ಯೂಸ್.
1. ಕಾವೇರಿ ಕಿಚ್ಚು: ರಾಜ್ಯಕ್ಕೆ ಡಬಲ್ ಬಂದ್ ಶಾಕ್; ನಾಳೆ ಬೆಂಗಳೂರು, ಸೆ. 29 ಕರ್ನಾಟಕ ಬಂದ್
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿರುವ ಸೆ. 26ರ ಬೆಂಗಳೂರು ಬಂದ್ ಬೆನ್ನಿಗೇ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸೆ. 29ರಂದು ಅಖಿಲ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹೀಗಾಗಿ ವಾರದಲ್ಲಿ ಎರಡು ಬಂದ್ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
2. ನಾಳೆ ಬೆಂಗಳೂರು ಬಂದ್: ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ; ಏನಿರುತ್ತೆ? ಏನಿರಲ್ಲ?
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಹಾಗಿದ್ದರೆ ಏನಿರುತ್ತೆ? ಏನಿರಲ್ಲ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ1: ಬಲವಂತದಿಂದ ಬಂದ್ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ ಎಂದ ಕಮಿಷನರ್
ಪೂರಕ ಸುದ್ದಿ2: ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಪೂರಕ ಸುದ್ದಿ3: ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ
3 .ಜಲಶಕ್ತಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಲಿ, ಮೋದಿ ಮಧ್ಯಪ್ರವೇಶಿಸಲಿ: ದೇವೇಗೌಡ
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಸಂಬಂಧ ಜಲ ಶಕ್ತಿ ಇಲಾಖೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ-ಜೆಡಿಎಸ್‌ನಿಂದ ರಾಜಕೀಯ: ಸಿದ್ದರಾಮಯ್ಯ ಆರೋಪ
4. ಏಕಕಾಲಕ್ಕೆ ರಾಜ್ಯಾದ್ಯಂತ ದಾಖಲೆ ಬರೆದ ಜನತಾ ದರ್ಶನ: ಸಿದ್ದರಾಮಯ್ಯ ಚಿಂತನೆ ಕ್ಲಿಕ್
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಸೂಚನೆಯಂತೆ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ (Janata Darshana) ಕಾರ್ಯಕ್ರಮ ನಡೆದಿದ್ದು, ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಏಷ್ಯನ್ ಗೇಮ್ಸ್: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ; ಲಂಕಾ ವಿರುದ್ಧ ರೋಚಕ ಜಯ
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತದ ಪಂದ್ಯದಲ್ಲಿ ಲಂಕಾ ವಿರುದ್ಧ ರೋಚಕ 19 ರನ್ಗಳ ಗೆಲುವು ಸಾಧಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ದೇಶಾದ್ಯಂತ ಅ.1ರಂದು 1 ಗಂಟೆ ಸ್ವಚ್ಛತಾ ಅಭಿಯಾನ: ಎಲ್ಲರೂ ಬನ್ನಿ ಎಂದು ಆಹ್ವಾನಿಸಿದ ಪ್ರಧಾನಿ ಮೋದಿ
ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 1ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂದು ಒಂದು ಗಂಟೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಎಲ್ಲ ಗ್ಯಾರಂಟಿಗಳಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ
7. ಭಾರತ ವಿಭಜಿಸಿ ಹಲವು ದೇಶ ಸೃಷ್ಟಿಸುವುದು ಖಲಿಸ್ತಾನಿ ಉಗ್ರ ಪನ್ನುನ್ ಗುರಿ; ಷಡ್ಯಂತ್ರ ಬಯಲು
ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಆಸ್ತಿಗಳನ್ನು ಎನ್‌ಐಎ ಜಪ್ತಿ ಮಾಡಿದ ಬೆನ್ನಲ್ಲೇ ಉಗ್ರನ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನಾಗಿ ಸೃಷ್ಟಿಸುವುದು ಗುರುಪತ್ವಂತ್ ಸಿಂಗ್ ಪನ್ನುನ್ ಗುರಿಯಾಗಿದೆ” ಎನ್ನುವುದೇ ಆ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಬಿಜೆಪಿ ಜತೆ ಮೈತ್ರಿ ಇಲ್ಲ; ಎಐಎಡಿಎಂಕೆ ಅಧಿಕೃತ ಘೋಷಣೆ! ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ
ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. 9 ತಿಂಗಳೊಳಗೆ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್; ಜವಾನ್ ಹೊಸ ದಾಖಲೆ
ಶಾರುಖ್ ಖಾನ್ ಪ್ರಧಾನ ಪಾತ್ರದಲ್ಲಿರುವ ಜವಾನ್, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸಿದೆ (Jawan box office collection).ಪಠಾಣ್ ಸಿನಿಮಾವೂ 1000 ಕೋಟಿ ದಾಟಿತ್ತು. ಹೀಗಾಗಿ ಒಂಬತ್ತು ತಿಂಗಳ ಅವಧಿಯಲ್ಲಿ ಶಾರುಖ್ 2000 ಕೋಟಿ ಕೊಳ್ಳೆ ಹೊಡೆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್ ಕಂಪನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ದೇಶ
Ganesh Chaturthi: 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್ ಕಂಪೆನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
Ganesh Chaturthi: ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ.
ಮುಂಬಯಿ: ದೇಶದೆಲ್ಲೆಡೆ ಆಚರಿಸುವ ಹಬ್ಬಗಳಲ್ಲಿ ಗಣೇಶ ಚರ್ತುಥಿಯೂ(Ganesh Chaturthi) ಒಂದು. ಸಾಮಾನ್ಯವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಬಳಿಕ ವಿಸರ್ಜಿಸುವುದು ವಾಡಿಕೆ. ಪ್ರಸಿದ್ಧ ಕಂಪೆನಿ ಹ್ಯಾವಲ್ಸ್(Havells) ಚೌತಿ ಸಂದರ್ಭದಲ್ಲಿ ಸೃಜನಾತ್ಮಕವಾಗಿ ಶುಭ ಹಾರೈಸಿದೆ. ಈ ವಿಡಿಯೊ ಇದೀಗ ವೈರಲ್ ಆಗಿದೆ. ʼಹ್ಯಾವಲ್ಸ್ ಕೆ ದೇವʼ(Havells Ke Deva) ಹೆಸರಿನಲ್ಲಿ ಕಂಪೆನಿ ಅಭಿಯಾನ ಆಯೋಜಿಸಿದ್ದು, ಇದರಲ್ಲಿ ಕಲೆ, ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಸರಿಯಾದ ರೀತಿಯಲ್ಲಿ ಬೆರಸಿ ಶುಭಾಶಯ ಕೋರಿದೆ.
ಸುಮಾರು 100 ಫ್ಯಾನ್‌ಗಳನ್ನು ಉಪಯೋಗಿಸಿ ಗಣೇಶ ಮೂರ್ತಿಯನ್ನು ರಚಿಸಲಾಗಿದೆ. ಕಂಪೆನಿಯ ಈ ಸೃಜನಾತ್ಮಕ ಐಡಿಯಾಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಗಣೇಶ ಮೂರ್ತಿಯನ್ನೊಳಗೊಂಡ ಬೋರ್ಡ್ ಅನ್ನು ಕಂಪೆನಿಯು ಥಾಣೆಯ ಮಜಿವಾಡ ಫ್ಲೈಓವರ್ ಬಳಿ ಸ್ಥಾಪಿಸಿದೆ. ಇದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಂಬಯಿ ಹೆರಿಟೇಜ್ ಪೇಜ್ ಹಂಚಿಕೊಂಡಿದೆ. ಈಗಾಗಲೇ ಈ ಚಿಕ್ಕ ವಿಡಿಯೊ ತುಣುಕನ್ನು 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ʼಥಾಣೆಯ ಮಜಿವಾಡ ಫ್ಲೈಓವರ್ ಬಳಿ ಕಂಡು ಬಂದ 100 ಫ್ಯಾನ್ ಗಳಿಂದ ರಚಿಸಿದ ಗಣೇಶ ಮೂರ್ತಿ. ಇದು ಹ್ಯಾವೆಲ್ಸ್‌ನ ಅಭಿಯಾನʼ ಎಂದು ಮುಂಬಯಿ ಹೆರಿಟೇಜ್ ಬರೆದುಕೊಂಡಿದೆ.
Havells campaign at Thane’s Majiwada Flyover where 100 designer fans have been put together to bring alive a unique Lord Ganesh Idol. pic.twitter.com/k99W2FGKkk
— Mumbai Heritage (@mumbaiheritage) September 24, 2023
ನೆಟ್ಟಿಗರ ಮೆಚ್ಚುಗೆ
ಕಂಪೆನಿಯ ಈ ಸೃಜನಶೀಲತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕ ಮಂದಿ ಶ್ಲಾಘಿಸಿ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ ತುಂಬಾ ಹೊಗಳಿಕೆಯ ಮಾತುಗಳೇ ಕಂಡುಬಂದಿದೆ. ಈ ಐಡಿಯಾ ಜನರ ಗಮನ ಸೆಳೆದಿದೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರಂತೂ ಕಂಪೆನಿಯ ಅಭಿಮಾನಿಯಾದೆ ಎಂದಿದ್ದಾರೆ. ಇನ್ನೊಬ್ಬರು ಕ್ರಿಯೇಟಿವ್ ಆಗಿದೆ ಎಂದು ಹೊಗಳಿದ್ದಾರೆ.
ಹ್ಯಾವೆಲ್ಸ್‌ನ ಇವಿಪಿ ರೋಹಿತ್ ಕಪೂರ್ ಈಗ್ಗೆ ಮಾತನಾಡಿ, ʼʼಗಣೇಶ ಚತುರ್ಥಿ ಹೊಸ ಸಂಶೋಧನೆ, ಪರಿವರ್ತನೆ ಮತ್ತು ಹೊಸ ಆರಂಭವನ್ನು ಗೌರವಿಸುವ ಹಬ್ಬ. ನಾವು ಹ್ಯಾವಲ್ಸ್ ದೇವ ಅಭಿಯಾನವನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಹ್ಯಾವಲ್ಸ್ ಯಾವಾಗಲೂ ಜಾಹೀರಾತಿನ ಗಡಿಗಳನ್ನು ಮರುವ್ಯಾಖ್ಯಾನಿಸಲು ಶ್ರಮಿಸುತ್ತಿದೆ ಮತ್ತು ನಮ್ಮ ಇತ್ತೀಚಿನ ಅಭಿಯಾನದ ಮೂಲಕ, ನಾವು ಹಬ್ಬವನ್ನು ಆಚರಿಸುವುದು ಮಾತ್ರವಲ್ಲದೆ ನಾವೀನ್ಯತೆಗಾಗಿ ತೆರೆದುಕೊಳ್ಳುವ ಗುರಿಯನ್ನು ಹೊಂದಿದ್ದೇವೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
ಇದರ ಜೊತೆಗೆ ಹ್ಯಾವಲ್ಸ್ ಕಂಪೆನಿ ಗಣೇಶ ಚತುರ್ಥಿಯನ್ನು ಬರ ಮಾಡಿಕೊಳ್ಳುವ ಇನ್ನೊಂದು ವಿಡಿಯೊವನ್ನು ಬಿಡುಗಡೆ ಮಾಡಿದೆ. ನೆರಳು, ಬೆಳಕಿನ ಮೂಲಕ ಇದನ್ನು ತಯಾರಿಸಲಾಗಿದೆ. ಕಂಪೆನಿಯ ಉತ್ಪನ್ನಗಳನ್ನು ಬಳಸಿ ಗಣಪತಿಯನ್ನು ಪ್ರತಿನಿಧಿಸುವ ಆನೆಯನ್ನು ರಚಿಸಲಾಗಿದೆ. ಜೊತೆಗೆ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಕೆಲವು ಕೊಡುಗೆಗಳನ್ನೂ ಪ್ರಕಟಿಸಿದೆ. ರೇಡಿಯೋ ಒನ್ ಮತ್ತು ರೇಡಿಯೋ ಸಿಟಿ ಮಹಾರಾಷ್ಟ್ರದ ಜೊತೆ ಸೇರಿಕೊಂಡು ಗ್ರಾಹಕರಿಗೆ ಕೊಡುಗೆ ನೀಡುವ ಅಭಿಯಾನ ಪ್ರಕಟಿಸಿದೆ.
ಗಮನ ಸೆಳೆದ ಎಂಜಿ ಮೋಟಾರ್ಸ್
ಹ್ಯಾವಲ್ಸ್ ನಂತೆಯೇ ಎಂಜಿ ಮೋಟಾರ್ಸ್ ಕೂಡ ಗಣೇಶ ಚತುರ್ಥಿಯನ್ನು ತನ್ನದೇ ಆದ ವಿಶಿಷ್ಟ ಅಭಿಯಾನದ ಮೂಲಕ ಆಚರಿಸಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ವಿವಿಧ ಸಂದರ್ಭಗಳಲ್ಲಿನ ಸಂಚಾರ ಪೊಲೀಸರ ಚಿತ್ರಗಳ ಸರಣಿಯನ್ನು ತಯಾರಿಸಲು ಕೃತಕ ಬುದ್ಧಿಮತ್ತೆ(AI)ಯನ್ನು ಬಳಸಿದೆ. ಭಾರಿ ಮಳೆಯಲ್ಲಿ ಕೆಲಸ ಮಾಡುವುದು, ದೊಡ್ಡ ಜನಸಂದಣಿಯನ್ನು ನಿರ್ವಹಿಸುವುದು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು ಮುಂತಾದ ಚಿತ್ರಗಳನ್ನು ಬಳಸಲಾಗಿದೆ. ಗಣೇಶ ಚರ್ತುಥಿಯಂತಹ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ನೋಡಿಕೊಳ್ಳುವ ಟ್ರಾಫಿಕ್ ಪೊಲೀಸರಿಗೆ ಈ ಮೂಲಕ ಗೌರವ ಸಲ್ಲಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Lalbaugcha Raja: ಗಣಪತಿ ದರ್ಶನಕ್ಕೂ ಭೇದ ಭಾವ; ಜನಸಾಮಾನ್ಯರನ್ನು ತಳ್ಳುವ ದೃಶ್ಯ ವೈರಲ್
Lalbaugcha Raja: ಲಾಲ್‌ಬಾಗ್‌ಚ ರಾಜ ಎಂದೇ ಜನಪ್ರಿಯವಾಗಿರುವ ಮುಂಬಯಿಯ (Mumbai) ಗಣಪತಿ ಪೆಂಡಾಲ್‌ನಲ್ಲಿ ಭೇದ ಭಾವ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ವಿಡಿಯೊ ವೈರಲ್ ಆಗಿದೆ.
ಮುಂಬಯಿ: ಎಲ್ಲೆಡೆ ಬಹು ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗಿದೆ. ನಗರ, ಗ್ರಾಮೀಣ ಪ್ರದೇಶ ಎನ್ನುವ ಭಾವ ಭಾವ ಇಲ್ಲದೆ ಎಲ್ಲರೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ವಿಸರ್ಜಿಸಿದ್ದಾರೆ. ಈ ಮಧ್ಯೆ ಮುಂಬಯಿಯ(Mumbai) ಪ್ರಸಿದ್ಧ ʼಲಾಲ್‌ಬಾಗ್‌ಚ ರಾಜ ʼ(Lalbaugcha Raja) ಗಣೇಶ ಪೆಂಡಾಲ್‌ನಲ್ಲಿ ಜನ ಸಾಮಾನ್ಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಭೇದ ಭಾವ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೊವೊಂದು ವೈರಲ್ ಆಗಿದೆ.
ಮುಂಬಯಿಯ ಲಾಲ್‌ಬಾಗ್‌ಚ ಪ್ರದೇಶದಲ್ಲಿ ಪ್ರತಿವರ್ಷ ಚೌತಿಯಂದು ಗಣಪತಿ ಮೂರ್ತಿಯನ್ನು ಕೂರಿಸಿ ಪೂಜಿಸಲಾಗುತ್ತದೆ. ಈ ಗಣೇಶನನ್ನು ʼಲಾಲ್‌ಬಾಗ್‌ನ ರಾಜʼ ಎಂದೇ ಕರೆಯಲಾಗುತ್ತದೆ. 11 ದಿನಗಳವರೆಗೆ ಪೂಜಿಸಿ ಬಳಿಕ ಈ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಅರಬಿ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಈ ಗಣೇಶನ ದರ್ಶನಕ್ಕೆ ಬಾಲಿವುಡ್ ತಾರೆಯರು, ಉದ್ಯಮಿಗಳು ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಸದ್ಯ ಈ ಗಣಪತಿ ಪೆಂಡಾಲ್ ಚರ್ಚೆಯ ಕೇಂದ್ರಬಿಂದು ಆಗಿದೆ.
ವಿಡಿಯೊದಲ್ಲೇನಿದೆ?
ಗಣಪತಿ ದರ್ಶನಕ್ಕೆ ಆಗಮಿಸಿದ ಸಾಮಾನ್ಯ ಜನರು ಒಂದು ಕ್ಷಣ ಕೂಡ ದೇವರ ಮುಂದೆ ನಿಲ್ಲಲು ಬಿಡದೆ ರಕ್ಷಣಾ ಸಿಬ್ಬಂದಿ ಮುಂದೆ ತಳ್ಳುತ್ತಾರೆ. ಸರಿಯಾಗಿ ಕೈ ಮುಗಿಯಲೂ ಅವರಿಗೆ ಅವಕಾಶ ಕೊಡುತ್ತಿಲ್ಲ. ಇತ್ತ ವಿಐಪಿಗಳು ಬಂದರೆ ಅವರಿಗೆ ದೇವರ ಮುಂದೆ ಸಮಯ ಕಳೆಯಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ದೇವರ ಮುಂದೆ ಭೇದ-ಭಾವ ಸಲದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಣಪತಿ ಮುಂದೆ ಕೈ ಮುಗಿಯಲೂ ಅವಕಾಶ ನೀಡದೆ ಅಮಾನುಷವಾಗಿ ಮುಂದಕ್ಕೆ ತಳ್ಳುತ್ತಿರುವ ಸೆಕ್ಯುರಿಟಿಗಳ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಅದೇ ವಿಡಿಯೊದ ಕೊನೆಗೆ ನಟಿ, ಬಾಲಿವುಡ್ ಸ್ಟಾರ್ ಶಿಲ್ಪಾ ಶೆಟ್ಟಿ ಸಾವಕಾಶವಾಗಿ ಕುಟುಂಬದ ಜತೆಗೆ ಕೈ ಮುಗಿಯುತ್ತಿರುವ ದೃಶ್ಯ ಕಾಣಿಸುತ್ತಿದೆ. ಇದನ್ನು ಉಲ್ಲೇಖಿಸಿರುವ ನೆಟ್ಟಿಗರೊಬ್ಬರು, ದೇವರ ದರ್ಶನಕ್ಕೂ ಎಷ್ಟೊಂದು ಬೇಧ-ಭಾವ ಎಂದು ಬರೆದುಕೊಂಡಿದ್ದಾರೆ,
ನೆಟ್ಟಿಗರು ಏನಂದ್ರು?
ಇಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 90 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್ ಮೂಲಕ ಅಸಮಾಧಾನ ಸೂಚಿಸಿದ್ದಾರೆ. ʼʼಒಬ್ಬರು ಮಹಿಳೆಯನ್ನು ದಾರುಣವಾಗಿ ಮುಂದಕ್ಕೆ ತಳ್ಳಲಾಗಿದೆ. ಇದು ಅಮಾನವೀಯ. ಇಂತಹ ಅನುಭವ ಯಾರಿಗೂ ಆಗಬಾರದುʼʼ ಎಂದು ಒಬ್ಬರು ಹೇಳಿದ್ದಾರೆ. ʼʼದೇವರ ದರ್ಶನಕ್ಕಾಗಿ ಹಲವಾರು ಮಂದಿ 10ರಿಂದ 11 ಗಂಟೆ ಸರದಿಯಲ್ಲಿ ನಿಂತಿರುತ್ತಾರೆ, ಅವರಿಗೆ ಸ್ವಲ್ಪ ಸಮಯವೂ ಅವಕಾಶ ಕೊಡದಿದ್ದರೆ ಹೇಗೆ? ಇಂತಹ ವರ್ತನೆಯನ್ನು ನಿಲ್ಲಿಸಬೇಕಾಗಿದೆʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ʼʼತುಂಬ ಬೇಸರ ಮೂಡಿಸುವ ದೃಶ್ಯ, ಗಣಪನಿಗೆ ಎಲ್ಲರೂ ಸಮಾನರು. ಆತ ಆಶೀರ್ವಾದ ಮಾಡುವಾಗ ಎಂದಿಗೂ ಭೇದ-ಭಾವ ಮಾಡುವುದಿಲ್ಲ. ಪ್ರತಿಯೊಬ್ಬರೂ ಒಂದೇ ಸಾಲು ಇರುವಂತಾಗಬೇಕುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Snake bite: ರಕ್ಷಿಸಿದವನ ಪ್ರಾಣಕ್ಕೆ ಎರವಾದ ನಾಗಪ್ಪ; ಹಾವು ಕಡಿದು ಉರಗ ಪ್ರೇಮಿ ಸಾಯುವ ವಿಡಿಯೊ ವೈರಲ್
ಈ ಬಾರಿಯ ಲಾಲ್‌ಬಾಗ್ ಗಣಪತಿಯ ದರ್ಶನಕ್ಕೆ ಶಿಲ್ಪಾ ಶೆಟ್ಟಿ ಕುಟುಂಬ ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್, ಐಶ್ವರ್ಯ ರೈ ಬಚ್ಚನ್, ಅಂಬಾನಿ ಕುಟುಂಬ ಸೇರಿದಂತೆ ಅನೇಕ ಪ್ರತಿಷ್ಠಿತರು ಆಗಮಿಸಿದ್ದರು.
-
ವಿದೇಶ19 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ17 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ12 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ13 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema16 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ದೇಶ17 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಅಂಕಣ20 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ9 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ