Site icon Vistara News

Yash 19: ಯಶ್‌ ಮುಂದಿನ ಸಿನಿಮಾಗೆ ಗೀತು ಮೋಹನ್‌ದಾಸ್ ಡೈರೆಕ್ಟರ್? ಪೋಸ್ಟ್‌ ವೈರಲ್‌!

Yash's next big film with filmmaker GeetuMohandas

ಬೆಂಗಳೂರು: 2022ರ ಏಪ್ರಿಲ್‌ 14 ರಾಕಿಂಗ್‌ ಸ್ಟಾರ್‌ ಯಶ್‌ (Yash 19) ನಟಿಸಿ, ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ ಕೆಜಿಎಫ್‌ 2 ಸಿನಿಮಾ ಬಿಡುಗಡೆಗೊಂಡಿತ್ತು. ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಸಿದ್ಧವಾಗಿದ್ದ ಸಿನಿಮಾ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ, ವಿದೇಶದಲ್ಲಿಯೂ ತೆರೆ ಕಂಡ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿತು. ದಾಖಲೆಗಳನ್ನು ಬರೆದ ಆ ಸಿನಿಮಾ ಬಿಡುಗಡೆಗೊಂಡು ಒಂದು ವರ್ಷವಾಗಿದೆ. ಇದರ ಬೆನ್ನಲ್ಲೇ ಯಶ್‌ ಅವರ ಮುಂದಿನ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಲಯಾಳಂ ನಟಿ-ಚಿತ್ರ ನಿರ್ದೇಶಕಿ ಗೀತು ಮೋಹನ್‌ದಾಸ್ ( Geetu Mohandas ) ಯಶ್‌ ಅವರ ಮುಂದಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ನಟಿ ರಿಮಾ ಕಲ್ಲಿಂಗಲ್‌ (Rima Kallingal) ನಿರ್ದೇಶಕಿ ಗೀತು ಅವರಿಗೆ ಶುಭ ಹಾರೈಸಲು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಈ ಮೂಲಕ ಗೀತು ಮೋಹನ್‌ದಾಸ್ ಅವರು ಯಶ್‌ ಅವರ ಮುಂಬರುವ ಸಿನಿಮಾದ ನಿರ್ದೇಶಕರು ಎಂಬ ಸುಳಿವು ನೀಡಿದ್ದಾರೆ.

`ಯುವನ್ ಯುವತಿ’ (uvan Yuvathi) ಮತ್ತು `ಚಿತಿರೈ ಸೆವ್ವಾನಂ’ (( Chithirai Sevvaanam)) ಚಿತ್ರಗಳಲ್ಲಿ ನಟಿಸಿ ತಮಿಳು ಚಿತ್ರರಂಗದ ಅಭಿಮಾನಿಗಳಲ್ಲಿ ಚಿರಪರಿಚಿತರಾಗಿರುವ ರಿಮಾ ಕಲ್ಲಿಂಗಲ್ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಯಶ್ 19ರ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಗೀತು ಮೋಹನ್‌ದಾಸ್ ಅವರನ್ನು ಟ್ಯಾಗ್‌ ಕೂಡ ಮಾಡಿದ್ದಾರೆ. ತಮಿಳಿನ ನಳ ದಮಯಂತಿ (2003) ಮತ್ತು ಕೆ. ಬಾಲಚಂದರ್ ಅವರ ನಿರ್ದೇಶನದ ಪೊಯ್ (POi) (2006)ನಂತಹ ತಮಿಳು ಚಲನಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಗೀತು, ಹಿಂದಿಯಲ್ಲಿ 2014ರ ನಿರ್ದೇಶನದ ಲೈಯರ್ಸ್ ಡೈಸ್‌ಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ನಂತರ ಮಲಯಾಳಂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ.

ರಿಮಾ ಕಲ್ಲಿಂಗಲ್‌ ಪೋಸ್ಟ್

ಇದನ್ನೂ ಓದಿ: Actor Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಸಖತ್‌ ಸ್ಟೆಪ್ಸ್‌; ವಿಡಿಯೊ ವೈರಲ್‌!

2019 ರಲ್ಲಿ ಬಿಡುಗಡೆಯಾದ ನಿವಿನ್ ಪೌಲಿ ಮುಖ್ಯ ಪಾತ್ರದಲ್ಲಿ ನಟಿಸಿದ ಮೂಥೋನ್ (Moothon ) ಸಿನಿಮಾವನ್ನು ಕೊನೆಯದಾಗಿ ನಿರ್ದೇಶಿಸಿದರು. ಅಭಿಮಾನಿಗಳು ಈಗ ಯಶ್ 19 ರಂದು ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ, ಕೆಜಿಎಫ್‌ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಆ ಸಿನಿಮಾ ಕಂಡ ಯಶಸ್ಸಿನ ಬೆನ್ನಲ್ಲೇ ಸಿನಿಮಾ ತಂಡ ಕೆಜಿಎಫ್‌ 2 ಸಿನಿಮಾ ಮಾಡಿತ್ತು. ಈ ಸಿನಿಮಾ ವಿಶ್ವಾದ್ಯಂತ ಒಟ್ಟು 1200 ಕೋಟಿ ರೂ. ಅನ್ನು ಬಾಚಿಕೊಂಡಿತ್ತು. ಭಾರತದಲ್ಲೇ ಸಿನಿಮಾ ಒಟ್ಟು 980 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು.

Exit mobile version