Site icon Vistara News

Yash Actor: ಅವಕಾಶ ಕೊಡಿ ಎಂದು ಕಣ್ಣೀರಿಟ್ಟಿದ್ರಾ ರಾಕಿಂಗ್ ಸ್ಟಾರ್ ಯಶ್? ಆ ತಮಿಳು ನಟ ಹೇಳಿದ್ದೇನು?

Yash Jai Akash

ಬೆಂಗಳೂರು: ಯಾವ ಗಾಡ್‌ ಫಾದರ್‌ ಇಲ್ಲದೇ ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಎಂಟ್ರಿ ಕೊಟ್ಟು ಕೆಜಿಎಫ್‌ನಂತಹ (KGF Movie) ಹಿಟ್‌ ಸಿನಿಮಾ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌ಗೆ (Yash Actor) ದೇಶ ವಿದೇಶದಲ್ಲೂ ಫ್ಯಾನ್ಸ್‌ ಇದ್ದಾರೆ. ಅವರ ಸಿನಿ ಜರ್ನಿ ವಿಶೇಷವಾಗಿತ್ತು. “ಯಶ್‌ ಒಂದು ಕಾಲದಲ್ಲಿ ಅವಕಾಶಕ್ಕಾಗಿ ನನ್ನ ಮುಂದೆ ಕಣ್ಣೀರು ಸುರಿಸಿದ್ದರು” ಎಂದು ತಮಿಳು ನಟ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಆ ತಮಿಳು ನಟ ಬೇರೆ ಯಾರೂ ಅಲ್ಲ ಬಹುಭಾಷಾ ನಟ ಜೈ ಆಕಾಶ್‌ (Jai Akash). ಜೈ ಆಕಾಶ್‌ ಕನ್ನಡದ ಹಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಮಾಧ್ಯಮದ ಮುಂದೆ ನಟ ಮಾತನಾಡಿ ʻʻನಟ ಯಶ್‌ ಆರಂಭದಲ್ಲಿ ಕಿರುತೆರೆಯಲ್ಲಿ ಗುರುತಿಸಿಕೊಂಡರು. ಅದು ನಿಜ. ಆದರೆ, ಅವರಿಗೆ ಸಿನಿಮಾ ಅವಕಾಶಗಳು ಮಾತ್ರ ಸಿಕ್ಕಿರಲಿಲ್ಲ. ಈ ವೇಳೆ ನನ್ನ ಬಳಿ ಬಂದು ಕಣ್ಣೀರು ಹಾಕಿದ್ದರು. ನಿಮಗೆಲ್ಲರಿಗೂ ಈಗ ಕೆಜಿಎಫ್‌ ಸಿನಿಮಾದ ಯಶ್‌ ಗೊತ್ತು. ಯಶ್‌ ಮೊದಲಿಗೆ ಇಂಟ್ರಡ್ಯೂಸ್‌ ಆಗಿದ್ದು, ನಾನು ಹೀರೊ ಆಗಿ ನಟಿಸಿದ್ದ ಸಿನಿಮಾದಲ್ಲಿ. ನನ್ನ ತಮ್ಮನಾಗಿ ಯಶ್‌ ನಟಿಸಿದ್ದಾರೆ. ಆತನನ್ನು ನಾನೇ ಸೆಲೆಕ್ಟ್‌ ಮಾಡಿದ್ದೆ” ಎಂದಿದ್ದಾರೆ.

ʻʻನನ್ನ ಬಳಿ ಯಶ್‌ ಬಂದು ಸದ್ಯಕ್ಕೆ ಸೀರಿಯಲ್‌ ಬೇಡ. ಸಿನಿಮಾಗಳಲ್ಲಿ ನಟಿಸಬೇಕು. ಅವಕಾಶಗಳು ಸಿಗುತ್ತಿಲ್ಲ ಎಂದು ಯಶ್‌ ಕಣ್ಣೀರು ಸುರಿಸಿದ್ದರು. ಆಗ ನಾನು ಬಾ ಎಂದು ಕರೆದು ನಾನೇ ಸಮಾಧಾನ ಪಡಿಸಿ, ಊಟವನ್ನೂ ಮಾಡಿಸಿದ್ದೆ. ಅಷ್ಟೇ ಅಲ್ಲ ನನ್ನ ಸಿನಿಮಾದಲ್ಲಿ ಚಾನ್ಸ್‌ ಕೊಡಿಸಿದ್ದೆ. ಸಿನಿಮಾ ಆರಂಭವಾದ ಬಳಿಕ ಅವನನ್ನು ನಾನೇ ಪಿಕಪ್‌ ಮತ್ತು ಡ್ರಾಪ್‌ ಮಾಡುತ್ತಿದ್ದೆ. ಆವತ್ತು ಆ ಸಿನಿಮಾ ಹಿಟ್‌ ಆಯ್ತು. ಅದಾದ ಬಳಿಕ ನಾನು ತೆಲುಗು, ತಮಿಳು ಕಡೆ ಗಮನ ಹರಿಸಿದೆ. ಯಶ್‌ ಕನ್ನಡದಲ್ಲಿ ನಾಯಕನಾಗಿ ಗುರುತಿಸಿಕೊಂಡರು. ಇದೀಗ ಯಶ್‌ ಸ್ಟಾರ್‌ ಆಗಿ ಬೆಳೆದಿದ್ದಾರೆ” ಎಂದು ಜೈ ಆಕಾಶ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actor Yash : ರಾಕಿ ಭಾಯ್​ ಯಶ್​ ನಾಪತ್ತೆ; ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ!

ಆರಂಭದಲ್ಲಿ ಯಶ್​ ಎಷ್ಟು ಕಷ್ಟಪಟ್ಟಿದ್ದರು ಎಂಬುದಕ್ಕೆ ತಮಿಳು ನಟ ಜೈ ಆಕಾಶ್​ ಆಡಿರುವ ಒಂದು ಉತ್ತಮ ಉದಾಹರಣೆಯಾಗಿದೆ. ಜೈ ಆಕಾಶ್​ ಆಡಿರುವ ಮಾತು ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ. ಇಂದು ಯಶ್​ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜಾಹಿರಾತುಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

Exit mobile version