ಬೆಂಗಳೂರು: ಕೆಜಿಎಫ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ (Yash-Radhika) ಜೋಡಿ ಆಗಾಗ ವಕೇಶನ್‌ನಲ್ಲಿರುವ ಫೋಟೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರೇಮಿಗಳ ದಿನವನ್ನು ಆಚರಿಸಲು ಇಬ್ಬರು ಉದಯಪುರಕ್ಕೆ ಹಾರಿದ್ದಾರೆ. ರಾಧಿಕಾ ತಮ್ಮ ಇನ್‌ಸ್ಟಾಗ್ರಮ್‌ನಲ್ಲಿ ಯಶ್ ಜತೆ ಇರುವ ಕ್ಯೂಟ್ ಫೋಟೊವನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಪತಿ ಯಶ್‍ಗೆ ಪ್ರೀತಿಯಿಂದ ಪ್ರೇಮಿಗಳ ದಿನದ ವಿಶ್ ಮಾಡಿದ್ದಾರೆ. ”ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ” ಎಂದು ಇಬ್ಬರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ನಂದಗೋಕುಲ ಧಾರಾವಾಹಿ, ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿಯಾಗಿತ್ತು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು. ಈ ಹಿಂದೆ ಅಷ್ಟೇ ಸೆಲ್ಫಿ ಪೋಸ್ಟ್‌ನೊಂದಿಗೆ ”ನನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಬ್ಯುಸಿ ಆಗಿದ್ದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ವಿವ್ ಇರಲಿಲ್ಲ. ಕೆಲವು ನೆನಪುಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ”. ಎಂದು ಬರೆದುಕೊಂಡಿದ್ದರು.
ಇದನ್ನು ಓದಿ: Radhika Pandit | ʻʻಬಂಕ್ ಮಾಡಿದರೂ ನನ್ನ ಅಪ್ಪನೇ ನನಗೆ ಸಾರಥಿʼʼ: ರಾಧಿಕಾ ಪಂಡಿತ್ ಪೋಸ್ಟ್ ವೈರಲ್!
ಯಶ್ ಕೊನೆಯದಾಗಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಅಭಿಮಾನಿಗಳು ಮುಂದಿನ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.