Site icon Vistara News

Yash | ʼರಾಖಿʼ ಭಾಯ್‌ಗೆ ರಾಖಿ ಕಟ್ಟಿ, ಆರತಿ ಮಾಡಿದ ತಂಗಿ

Yash

ಬೆಂಗಳೂರು: ನಾಡಿನಾದ್ಯಂತ ರಕ್ಷಾ ಬಂಧನದ ಸಂಭ್ರಮ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿದ್ದಾರೆ. ಅದೇರೀತಿ ಈ ವಿಶೇಷ ದಿನದಂದು ಸ್ಯಾಂಡಲ್‌ವುಡ್‌ ನಟ ಯಶ್‌ (Yash) ತಮ್ಮ ತಂಗಿ ನಂದಿನಿ ಅವರಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ.

ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾಖಿ ಹಬ್ಬದ್ದಂದು ತಮ್ಮ ತಂಗಿಯ ಮುಂದೆ ಯಶ್‌ ಹಾಜರಿರುತ್ತಾರೆ.

ʻʻಒಡ ಹುಟ್ಟಿದವರು ವಿಧಿಯಂತೆ ಜತೆಯಾಗಿದ್ದೇವೆ. ಜೀವಮಾನದ ಪ್ರೀತಿ ಮತ್ತು ಬೆಂಬಲದೊಂದಿಗೆ ಇಬ್ಬರೂ ಬಂಧಿತರಾಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯʼʼಎಂದು ಕ್ಯಾಪ್ಷನ್‌ ನೀಡಿ ಯಶ್‌ ಶುಭ ಕೋರಿದ್ದಾರೆ.

ಇದನ್ನೂ ಓದಿ | Rocking Star Yash | ರಾಕಿ ಬಾಯ್‌ ಯಶ್‌ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!

ಇತ್ತೀಚೆಗಷ್ಟೆ ಯಶ್‌ ತಮ್ಮ ವಿದೇಶ ಪ್ರವಾಸದ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು. ಇದೀಗ ಯಶ್‌ಗೆ ತಂಗಿ ರಾಖಿ ಕಟ್ಟುತ್ತಿರುವ, ಆರತಿ ಮಾಡುತ್ತಿರುವ ಫೋಟೊಗಳನ್ನು ನೋಡಿ ಯಶ್‌ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಮೈಸೂರು ಯುವಜನೋತ್ಸವದಲ್ಲಿ ಅಪ್ಪು ಹವಾ !: ನಟ ಯಶ್‌ ಭಾಗಿ

Exit mobile version