ಬೆಂಗಳೂರು : ಇತ್ತೀಚೆಗಷ್ಟೇ ತೆರೆ ಕಂಡಿದ್ದ ತಮಿಳಿನ ವೈಧಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಯುವ ನಟಿ ದೀಪಾ (Actress Deepa) ಆಕಾ (ಪೌಲಿನ್ ಜೆಸ್ಸಿಕಾ) ಮಂಗಳವಾರ (ಸೆ.19) ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
29 ವರ್ಷ ವಯಸ್ಸಿನ ಪೌಲಿನ್ ಜೆಸ್ಸಿಕಾ (Pauline Jessica) ಇವರ ಮೂಲ ಹೆಸರು. ದೀಪಾ ಹೆಸರಿನ ಮೂಲಕ ಫೇಮಸ್ ಆಗಿದ್ದರು. ವೈಧಾ, ತುಪ್ಪರಿವಾಲನ್ (Thupparivalan) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿ ವಿಚಾರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗೀತರಚನೆಕಾರರ ಮಗಳು ತೂರಿಗೈ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೆ ಇಂತಹದ್ದೇ ಪ್ರಕರಣ ನಡೆದಿರುವುದರಿಂದ ಕಾಲಿವುಡ್ ಆಘಾತಕ್ಕೊಳಗಾಗಿದೆ.
ಇದನ್ನೂ ಓದಿ | ಬೆಂಗಾಲಿ ಯುವ ನಟಿ ಬಿದಿಶಾ ಡೇ ಶವವಾಗಿ ಪತ್ತೆ