Site icon Vistara News

ಎವರೆಸ್ಟ್‌ ವೀರ ಎಡ್ಮಂಡ್ ಹಿಲರಿ ಹೇಳಿದ ಸವಾಲು ಎದುರಿಸುವ ಪಾಠ

Edmund hillary

ಮೇ ತಿಂಗಳ 29, 1953 ತೇನ್ಸಿಂಗ್ ನೋರ್ಗೆ ಎಂಬ ಶೆರ್ಪಾ ಮೌಂಟ್ ಎವರೆಸ್ಟ್ ಶಿಖರವನ್ನು ಚುಂಬಿಸಿ ವಿಶ್ವ ವಿಕ್ರಮವನ್ನು ಮಾಡಿದ ಘಟನೆಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಆತನ ಜೊತೆಗೆ ನ್ಯೂಜಿಲ್ಯಾಂಡ್ ದೇಶದ ಎಡ್ಮಂಡ್ ಹಿಲರಿ ಎಂಬ ಆರೋಹಿ ಕೂಡ ಮೌಂಟ್ ಎವರೆಸ್ಟ್ ಹತ್ತಿದ್ದ. ಆದರೆ ವ್ಯತ್ಯಾಸ ಏನೆಂದರೆ ಹಿಲರಿಯು ಅದಕ್ಕಿಂತ ಹಿಂದೆ ತುಂಬಾ ಸಲ ಎವರೆಸ್ಟ್ ಶಿಖರವನ್ನು ಹತ್ತುವ ಪ್ರಯತ್ನ ಮಾಡಿ ಸೋತು ನಿರಾಶೆ ಅನುಭವಿಸಿದ್ದ.

ಅವನು ಪ್ರತೀ ಬಾರಿ ಸೋತು ಬಂದಾಗ ಆತನ ದೇಶ ನ್ಯೂಜಿಲ್ಯಾಂಡ್ ಆತನಿಗೆ ಸನ್ಮಾನ ಮಾಡುತ್ತಿತ್ತು. ಆಗೆಲ್ಲ ಹಿಲರಿ ಮೈಕ್ ಹಿಡಿದು ಮೂರೇ ಮೂರು ವಾಕ್ಯ ಭಾಷಣ ಮಾಡಿ ಕುಳಿತುಕೊಳ್ಳುತ್ತಿದ್ದ. ಆತನ ಮೂರು ವಾಕ್ಯದ ಭಾಷಣ ಹೀಗಿತ್ತು.

‘ ಮೌಂಟ್ ಎವರೆಸ್ಟ್ ಈ ಬಾರಿ ನನ್ನನ್ನು ಸೋಲಿಸಿದ್ದೀಯ. ಪರವಾಗಿಲ್ಲ. ಮುಂದಿನ ಸಲ ನಾನು ನಿನ್ನನ್ನು ಸೋಲಿಸಿಯೆ ಸೋಲಿಸುತ್ತೇನೆ. ಏಕೆಂದರೆ ನೀನು ಬೆಳೆಯುವುದನ್ನು ಬಿಟ್ಟಿದ್ದೀಯಾ. ನಾನು ಬೆಳೆಯುತ್ತ ಇದ್ದೇನೆ!’

ಎಂತಹ ಸವಾಲು ಎದುರಿಸುವ ಧೈರ್ಯ ನೋಡಿ. ಈ ರೀತಿ ಸವಾಲು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬಂದಿತು ಅಂತಾದರೆ ನಮ್ಮನ್ನು ನಮ್ಮ ಶತ್ರುಗಳು ಕೂಡ ಸೋಲಿಸಲು ಸಾಧ್ಯವಿಲ್ಲ. ಜಗತ್ತಿನ ಮಹಾ ಮಹಾ ಸಾಧಕರೆಲ್ಲ ಈ ರೀತಿಯ ಸವಾಲು ಎದುರಿಸಿ ಗೆದ್ದು ಬಂದವರೇ ಆಗಿದ್ದಾರೆ.

-ಜೇಸಿ ಅಂತಾರಾಷ್ಟ್ರೀಯ ತರಬೇತುದಾರರು
ಇದನ್ನೂ ಓದಿ| world cup ಗೆದ್ದ ಅಪೂರ್ವ ಕ್ಷಣಕ್ಕೆ 39 ವರ್ಷ

Exit mobile version