ಹೊಸದಿಲ್ಲಿ: ಭಾರತ ಗೋಧಿ ರಫ್ತಿಗೆ ನಿಷೇಧಿಸಿದ್ದು, ಸರಕಾರದ ಅನುಮತಿ ಇಲ್ಲದೆ ರಫ್ತು ಮಾಡುವಂತಿಲ್ಲ. ಕಳೆದ ಮಾರ್ಚ್ ನಲ್ಲಿ ಬಿಸಿಗಾಳಿಗೆ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಗೆ ಕೊರತೆ ಆಗಬಾರದು ಎಂಬ ಕಾರಣಕ್ಕೆ ರಫ್ತಿಗೆ ಸರಕಾರ ನಿರ್ಬಂಧ ಹೇರಿದೆ. ಆದರೆ ಜಿ 7 ರಾಷ್ಟ್ರಗಳ ಒಕ್ಕೂಟ ( ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ) ಇದಕ್ಕೆ ಅಪಸ್ವರ ಹೊರಡಿಸಿದೆ.
ರಷ್ಯಾ ಮತ್ತು ಉಕ್ರೇನ್ ಸಮರದ ತರುವಾಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಭಾರತದ ಗೋಧಿಗೆ ಬೇಡಿಕೆ ಉಂಟಾಗಿತ್ತು.
ಜರ್ಮನಿಯಲ್ಲಿ ನಡೆದ ಜಿ 7 ರಾಷ್ಟ್ರಗಳ ಕೃಷಿ ಸಚಿವರುಗಳ ಸಭೆಯಲ್ಲಿ ಜರ್ಮನಿಯ ಕೃಷಿ ಸಚಿವ ಸೆಮ್ ಒಜ್ಡೆಮಿರ್, ” ಎಲ್ಲ ರಾಷ್ಟ್ರಗಳೂ ಹೀಗೆ ಆಮದು-ರಫ್ತಿಗೆ ನಿರ್ಬಂಧ ಹೇರಿದರೆ ಪರಿಸ್ಥಿತಿ ಬಿಗಡಾಯಿಸಲಿದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ Explainer: ಬೆಲೆ ಏರಿಕೆ ಬಿಸಿ ಹೆಚ್ಚಿಸುತ್ತಿರುವ ಆಮದು!
ಗೋಧಿ ಪೂರೈಕೆಗೆ ಯಾವುದೇ ಕೊರತೆ ಉಂಟಾಗಿಲ್ಲ. ಸಂಕಷ್ಟದಲ್ಲಿರುವ ದೇಶಗಳಿಗೆ ಗೋಧಿ ರಫ್ತು ಮುಂದುವರಿಯಲಿದೆ. ಆದರೆ ರಫ್ತನ್ನು ಸರಿಯಾದ ವ್ಯವಸ್ಥೆಯನ್ನು ನಡೆಸಲು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.ಉತ್ತರ ಭಾರತದ ಗೋಧಿ ಬೆಳೆಯುವ ರಾಜ್ಯಗಳಲ್ಲಿ ಮಾರ್ಚ್ ನಲ್ಲಿ ಭಾರಿ ತಾಪಮಾನ ಏರಿಕೆಯ ಸಮಸ್ಯೆಯಾಗಿತ್ತು. ಇದರಿಂದ ಫಸಲಿಗೆ ಧಕ್ಕೆಯಾಗಿತ್ತು. ಭಾರತದಲ್ಲಿ ಗೋಧಿ ಬಳಕೆ ಕೂಡ ವ್ಯಾಪಕವಾಗಿರುವುದರಿಂದ ಪೂರೈಕೆಯಲ್ಲಿ ಸ್ವಲ್ಪ ಅಡಚಣೆ ಅಥವಾ ಕೊರತೆ ಉಂಟಾದರೂ, ಸಮಸ್ಯೆಯಾಗುವ ಆತಂಕ ಇತ್ತು.
ಇದನ್ನೂ ಓದಿ: Wheat export ban: ಭಾರತದಿಂದ ಗೋಧಿ ರಫ್ತಿಗೆ ನಿಷೇಧ