ನವ ದೆಹಲಿ: ಕಳೆದ ಜುಲೈನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ.
ಕರ್ನಾಟಕದಲ್ಲಿ ೨೦೨೨ರ ಜುಲೈನಲ್ಲಿ ೯,೭೯೫ ಕೋಟಿ ರೂ. ಜಿಎಸ್‌ಟಿ ಸಂಗ್ರಹ ಆಗಿದ್ದರೆ, ೨೦೨೧ರ ಜುಲೈನಲ್ಲಿ ೬,೭೩೭ ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ ೪೫% ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ೨೦೨೨ರ ಜುಲೈನಲ್ಲಿ ೨೨,೧೨೯ ಕೋಟಿ ರೂ. ಸಂಗ್ರಹವಾಗಿದ್ದರೆ, ೨೦೨೧ರ ಜುಲೈನಲ್ಲಿ ೧೮,೮೯೯ ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ ೧೭% ಹೆಚ್ಚಳವಾಗಿದೆ.
ಪ್ರಮುಖ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹ ಇಂತಿದೆ. (ಕೋಟಿ ರೂ.ಗಳಲ್ಲಿ)
ರಾಜ್ಯ | ಜುಲೈ-2021 | ಜುಲೈ-2022 | ಏರಿಕೆ ಎಷ್ಟು |
ಮಹಾರಾಷ್ಟ್ರ | 18,899 ಕೋಟಿ ರೂ. | 22,129 | 17% |
ಕರ್ನಾಟಕ | 6,737 | 9,795 | 45% |
ಗುಜರಾತ್ | 7,629 | 9,183 | 20% |
ಉತ್ತರಪ್ರದೇಶ | 6,011 | 7,074 | 18% |
ತಮಿಳುನಾಡು | 6,302 | 8,449 | 34% |
ಹರಿಯಾಣ | 5,330 | 6,791 | 27% |
ಪಶ್ಚಿಮ ಬಂಗಾಳ | 3,463 | 4,441 | 28% |
ದಿಲ್ಲಿ | 3,815 | 4,327 | 13% |
ತೆಲಂಗಾಣ | 3,610 | 4,547 | 26% |