Site icon Vistara News

ನಿಲ್ಲದ ಬೆಲೆ ಏರಿಕೆ, ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ.7.79ಕ್ಕೆ ಜಿಗಿತ

ಹೊಸದಿಲ್ಲಿ: ಜಗತ್ತಿನಾದ್ಯಂತ ಬೆಲೆ ಏರಿಕೆ ನಿಲ್ಲದ ಬವಣೆಯಾಗಿದ್ದು, ಭಾರತದಲ್ಲೂ ಕಳೆದ ಏಪ್ರಿಲ್‌ನಲ್ಲಿ ಹಣದುಬ್ಬರ ಶೇ.7.79ಕ್ಕೆ ಜಿಗಿದಿದೆ. ಇದು ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟದ ಏರಿಕೆಯಾಗಿದೆ.

ಖಾದ್ಯ ತೈಲ ದರ ಏರಿಕೆ, ರಷ್ಯಾ-ಉಕ್ರೇನ್‌ ಸಂಘರ್ಷ, ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದ ಪರಿಣಾಮ ಹಣದುಬ್ಬರ ಗಗನಕ್ಕೇರಿದೆ. 2014ರ ಮೇನಲ್ಲಿ ರಿಟೇಲ್‌ ಹಣದುಬ್ಬರ ಶೇ.8.33ರ ಮಟ್ಟದಲ್ಲಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 4.23ಇತ್ತು. ಇದರೊಂದಿಗೆ ಚಿಲ್ಲರೆ ಹಣದುಬ್ಬರ ರಿಸರ್ವ್‌ ಬ್ಯಾಂಕ್‌ನ ಸುರಕ್ಷತಾ ಮಟ್ಟದ ಎಲ್ಲೆಯನ್ನು ಮೀರಿ ಹೋಗಿದೆ. ಆರ್‌ ಬಿಐ ಲೆಕ್ಕಾಚಾರದ ಪ್ರಕಾರ ಚಿಲ್ಲರೆ ಹಣದುಬ್ಬರ ಗರಿಷ್ಠ ಶೇ.೬ ಇರಬಹುದು. ಅದನ್ನು ದಾಟಿದರೆ ಅಪಾಯಕಾರಿ ಮಟ್ಟ ಎಂದರ್ಥ.

ಗ್ರಾಮೀಣ ಪ್ರದೇಶದಲ್ಲೂ ಬೆಲೆ ಏರಿಕೆ ಅಪಾಯದ ಮಟ್ಟದಲ್ಲಿದ್ದು, ಏಪ್ರಿಲ್‌ನಲ್ಲಿ ಶೇ.8.38ಕ್ಕೆ ಏರಿಕೆಯಾಗಿದೆ. 2021ರ ಏಪ್ರಿಲ್‌ನಲ್ಲಿ ಶೇ.3.7ರಷ್ಟಿತ್ತು.
ಈ ನಡುವೆ ಏಪ್ರಿಲ್‌ ನಲ್ಲಿ ಒಟ್ಟಾರೆ ಆಹಾರ ಹಣದುಬ್ಬರ ಅಂದರೆ ಆಹಾರ ವಸ್ತುಗಳ ಬೆಲೆ ಏರಿಕೆ ಶೇ.8.38ಕ್ಕೆ ಏರಿಕೆಯಾಗಿದೆ. 2021ರ ಏಪ್ರಿಲ್‌ ನಲ್ಲಿ ಇದು ಶೇ. 1.96ಹಾಗೂ ಕಳೆದ ಮಾರ್ಚ್‌ ನಲ್ಲಿ ಶೇ7.68 ಇತ್ತು.

Exit mobile version