Site icon Vistara News

ಕೋಟಕ್‌ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗೆ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ

kotack bank

ಮುಂಬಯಿ: ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ಉಳಿತಾಯ ಖಾತೆ, ನಿಶ್ಚಿತ ಠೇವಣಿ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಏರಿಸಿದೆ.

2022ರ ಜೂನ್‌ 13ರಿಂದ ಪರಿಷ್ಕೃತ ಬಡ್ಡಿ ದರ ಜಾರಿಯಾಗಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

ಉಳಿತಾಯ ಖಾತೆಯಲ್ಲಿ 50 ಲಕ್ಷ ರೂ.ಗಿಂತ ಮೇಲಿನ ಠೇವಣಿಯ ಬಡ್ಡಿ ದರವನ್ನು 3.5%ರಿಂದ 4%ಕ್ಕೆ ಬ್ಯಾಂಕ್‌ ಏರಿಕೆ ಮಾಡಿದೆ.

50 ಲಕ್ಷ ರೂ. ತನಕದ ಠೇವಣಿಗಳ ಬಡ್ಡಿ ದರವನ್ನು ವಾರ್ಷಿಕ 3.5%ಕ್ಕೆ ಏರಿಸಲಾಗಿದೆ.

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಜೂನ್‌ 10ರಿಂದ ಅನ್ವಯಿಸುವಂತೆ 365-389 ದಿನಗಳ ಅವಧಿಯ ಹಾಗೂ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಗೆ ಬಡ್ಡಿ ದರವನ್ನು 5.40%ರಿಂದ 5.50%ಕ್ಕೆ ಹೆಚ್ಚಿಸಿದೆ.

23 ತಿಂಗಳಿಗೆ ಬಡ್ಡಿಯನ್ನು ಶೇ.5.60ರಿಂದ ಶೇ.5.75ಕ್ಕೆ ಪರಿಷ್ಕರಿಸಿದೆ. 2-3 ವರ್ಷದ ಠೇವಣಿಗೆ ಬಡ್ಡಿ ದರವನ್ನು 5.60%ರಿಂದ 5.75%ಕ್ಕೆ ಏರಿಸಿದೆ. 4-5 ವರ್ಷದ ಠೇವಣಿಗೆ ಬಡ್ಡಿಯನ್ನು 5.75%ರಿಂದ 5.90%ಕ್ಕೆ ಪರಿಷ್ಕರಿಸಿದೆ.‌

ಇದನ್ನೂ ಓದಿ: Explainer: ಬೆಲೆ ಏರಿಕೆಗೆ ಬ್ರೇಕ್‌ ಹಾಕಲು ಬಡ್ಡಿ ದರ ಹೆಚ್ಚಿಸಿದ ಆರ್‌ಬಿಐ, ಸಾಲಗಾರರಿಗೆ EMI ಹೊರೆ

Exit mobile version