ನವ ದೆಹಲಿ: ಜಾಗತಿಕ ಆರ್ಥಿಕತೆಯ ಮಂದಗತಿ ಹಿನ್ನೆಲೆಯಲ್ಲಿ ಭಾರತ ತನ್ನ ಸೇವೆಗಳ ರಫ್ತನ್ನು ಹೆಚ್ಚಿಸಲು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಜಾಗತಿಕ ಆರ್ಥಿಕತೆ ನಿಧಾನವಾಗಿದ್ದಾಗ, ಸರಕುಗಳ ರಫ್ತು ಕುಸಿಯುತ್ತದೆ. ಮುಖ್ಯವಾಗಿ ಐಷಾರಾಮಿ ಉತ್ಪನ್ನಗಳ ಬೇಡಿಕೆ ತಗ್ಗುತ್ತದೆ. ಆದರೆ ಇದೇ ಸಂದರ್ಭ ಸೇವೆಗಳ ರಫ್ತು ಹೆಚ್ಚಿಸಲು ಅವಕಾಶ ಇರುತ್ತದೆ.
ಭಾರತವು ಆಸ್ಟ್ರೇಲಿಯಾ ಮತ್ತು ಯುಎಇ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾಡಿಕೊಂಡಿದೆ. ಇದು ಸೇವೆಗಳ ರಫ್ತಿಗೆ ಸಹಕಾರಿಯಾಗಲಿದೆ ಎಂದು ಭಾವಿಸಲಾಗಿದೆ. ಈ ವರ್ಷ ಸೇವೆಗಳ ರಫ್ತಿನ ಮೌಲ್ಯ ೩೦೦ ಶತಕೋಟಿ ಡಾಲರ್‌ಗೆ (ಅಂದಾಜು ೨೩ ಲಕ್ಷ ಕೋಟಿ ರೂ.) ಏರಿಕೆಯಾಗುವ ನಿರೀಕ್ಷೆ ಇದೆ.
ಗೋಧಿ ಮತ್ತು ಇತರ ಕೃಷಿ ಉತ್ಪನ್ನಗಳ ಬೇಡಿಕೆ ವೃದ್ಧಿಸಿದ್ದರೂ, ಅದಕ್ಕೆ ಮಿತಿಯೂ ಇದೆ. ಆದರೆ ಸೇವಾ ಕ್ಷೇತ್ರದ ರಫ್ತು ಅಭಿವೃದ್ಧಿಗೆ ಹೇರಳ ಅವಕಾಶಗಳು ಇವೆ. ತಜ್ಞರ ಪ್ರಕಾರ ಸೇವಾ ಕ್ಷೇತ್ರದ ರಫ್ತು ಮೌಲ್ಯವು ಉತ್ಪಾದನಾ ವಲಯದ ರಫ್ತು ಮೌಲ್ಯವನ್ನು ಹಿಂದಿಕ್ಕುವ ಸಾಧ್ಯತೆ ಇದೆ. 2021ರಿಂದ ಭಾರತದ ಸೇವಾ ಉದ್ದಿಮೆಯ ರಫ್ತು ಡಬ್ಲ್ಯುಟಿಒದ ನಿರೀಕ್ಷೆಯ ಪ್ರಕಾರವೇ ಬೆಳೆಯುತ್ತಿದೆ.