ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ತನ್ನ ಎಂಸಿಎಲ್‌ಆರ್ (Marginal cost of funds based lending rate) ದರವನ್ನು 0.05% ಏರಿಸಿದ್ದು, 2023ರ ಏಪ್ರಿಲ್ 12ರಿಂದ ಅನ್ವಯವಾಗಲಿದೆ.
ಎಂಸಿಎಲ್‌ಆರ್ ದರವು 6 ತಿಂಗಳಿನ ಅವಧಿಗೆ 8.45% ಮತ್ತು 1 ವರ್ಷ ಅವಧಿಗೆ 8.65% ಆಗಿದೆ. ಆರ್‌ಬಿಐ ಇತ್ತೀಚಿನ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ನೀತಿ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಎಂಸಿಎಲ್‌ಆರ್ ದರವು ಎಂಸಿಎಲ್ ಆರ್ ಆಧರಿತ ಸಾಲ ಪಡೆದವರಿಗೆ ಪ್ರಭಾವ ಬೀರುತ್ತದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲವನ್ನು ಎಂಸಿಎಲ್‌ಆರ್ ಆಧಾರದಲ್ಲಿ ನೀಡಬಹುದು. ಕೆನರಾ ಬ್ಯಾಂಕ್ (Canara Bank) 2 ಕೋಟಿ ರೂ.ಗಿಂತ ಕೆಳಗಿನ ನಿಶ್ಚಿತ ಠೇವಣಿಗಳಿಗೆ (fixed deposits) ಬಡ್ಡಿ ದರವನ್ನು ಕೂಡ ಏರಿಸಿದೆ. ಪರಿಷ್ಕೃತ ದರ 2023ರ ಮಾರ್ಚ್ 5ರಿಂದ ಜಾರಿಯಾಗಿದೆ ಎಂದು ಬ್ಯಾಂಕಿನ ವೆಬ್‌ಸೈಟ್ ತಿಳಿಸಿದೆ.
ಪರಿಷ್ಕೃತ ಬಡ್ಡಿ ದರ ಎಷ್ಟು?
ಕೆನರಾ ಬ್ಯಾಂಕ್‌ನ ಪರಿಷ್ಕೃತ ಬಡ್ಡಿ ದರ ಇಂತಿದೆ. ಬ್ಯಾಂಕ್ 7 ದಿನಗಳಿಂದ 10 ವರ್ಷದ ತನಕದ ಅವಧಿಯ ಠೇವಣಿಗಳಿಗೆ 4%ರಿಂದ 7.25% ತನಕ ಬಡ್ಡಿ ನೀಡಲಿದೆ. ಹಿರಿಯ ನಾಗರಿಕರಿಗೆ 4%ರಿಂದ 7.75% ತನಕ ಬಡ್ಡಿ ದರ ಪರಿಷ್ಕರಣೆಯಾಗಿದೆ.
ಟರ್ಮ್ ಡೆಪಾಸಿಟ್ | ಸಾಮಾನ್ಯ ನಾಗರಿಕರು | ಹಿರಿಯ ನಾಗರಿಕರು |
ಶೇಕಡಾವಾರು ಬಡ್ಡಿ ದರ | ಶೇಕಡಾವಾರು ಬಡ್ಡಿ ದರ | |
7-45 ದಿನಗಳು | 4 | 4 |
46ರಿಂದ 90 ದಿನಗಳು | 5.25 | 5.25 |
91ರಿಂದ 179 ದಿನಗಳು | 5.5 | 5.5 |
180 ದಿನಗಳಿಂದ 269 ದಿನಗಳು | 6.25 | 6.75 |
270ರಿಂದ 1 ವರ್ಷದೊಳಗೆ | 6.5 | 7 |
1 ವರ್ಷ ಮಾತ್ರ | 7 | 7.5 |
444 ದಿನಗಳು | 7.25 | 7.75 |
1ವರ್ಷ ಮೇಲ್ಪಟ್ಟು, 2 ವರ್ಷದೊಳಗೆ | 6.9 | 7.4 |
2 ವರ್ಷಮತ್ತು 3 ವರ್ಷಕ್ಕಿಂತ ಕೆಳಗೆ | 6.85 | 7.35 |
3 ವರ್ಷಮೇಲ್ಪಟ್ಟು ಮತ್ತು 5 ವರ್ಷಕ್ಕಿಂತ ಕೆಳಗೆ | 6.8 | 7.3 |
5 ವರ್ಷ ಮೇಲ್ಪಟ್ಟು ಮತ್ತು 10 ವರ್ಷದೊಳಗೆ | 6.7 | 7.2 |
ಅವಧಿಗೆ ಮುನ್ನ ಠೇವಣಿಯನ್ನು ಹಿಂತೆಗೆದುಕೊಂಡರೆ 1.00%ರಷ್ಟು ದಂಡ ಅನ್ವಯವಾಗಲಿದೆ. ಅವಧಿ ಮುಗಿದರೂ ಹಿಂತೆಗೆದುಕೊಳ್ಳದಿದ್ದರೆ ಅನ್ ಕ್ಲೇಮ್ಡ್ ಮೊತ್ತವಾಗಲಿದೆ. ಉಳಿತಾಯ ಖಾತೆಗೆ ಸಿಗುವ ಬಡ್ಡಿ ಸಿಗಲಿದೆ.