ನವ ದೆಹಲಿ: ಮೆಕ್ ಡೊನಾಲ್ಡ್ಸ್ (McDonaldʼs) ಸಿಇಒ ಕೆಂಪ್‌ಜಿನ್‌ಸ್ಕಿ (Chris Kempczinski ) ಅವರು 2020ರಲ್ಲಿ ಕಂಪನಿ ತನ್ನ ಸೇಲ್ಸ್ ಟಾರ್ಗೆಟ್ ಅನ್ನು ಮುಟ್ಟುವಲ್ಲಿ ವಿಫಲವಾಗಿದ್ದರೂ, 10.8 ದಶಲಕ್ಷ ಡಾಲರ್‌ಗೂ ಹೆಚ್ಚು (ಅಂದಾಜು 88 ಕೋಟಿ ರೂ.) ವೇತನ ಪ್ಯಾಕೇಜ್ ಪಡೆದಿದ್ದಾರೆ. 2023ರಲ್ಲಿ ಅಮೆರಿಕದಲ್ಲಿ ಕಂಪನಿ ತನ್ನ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಸಾಮೂಹಿಕ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಹೀಗಿದ್ದರೂ ಅದರ ಸಿಇಒಗೆ ಸಾಮಾನ್ಯ ಉದ್ಯೋಗಿಗಿಂತ ಬರೋಬ್ಬರಿ 1,189 ಪಟ್ಟು ಹೆಚ್ಚು ವೇತನ ಇದೆ ಎಂದು ವರದಿಯಾಗಿದೆ.
ಕಂಪನಿಯಲ್ಲಿ ಹುದ್ದೆಗಳ ಪುನಾರಚನೆ ನಡೆಯಲಿದ್ದು, ಈ ವಾರ ನಿರ್ಧರಿಸಲಾಗುವುದು ಎಂದು ಶಿಕಾಗೋ ಮೂಲದ ಮೆಕ್ ಡೊನಾಲ್ಡ್ಸ್ ತಿಳಿಸಿದೆ. ಕಂಪನಿ ಖಾಸಗಿ ವಿಮಾನವನ್ನು ಬಳಸುತ್ತಿದ್ದರು. ಎರಡು ವರ್ಷಗಳ ಹಿಂದೆ ಕೋವಿಡ್‌ನ ಆರಂಭಿಕ ಘಟ್ಟದಲ್ಲಿ ಕೆಂಪ್‌ಜಿನ್‌ಸ್ಕಿ ಮತ್ತು ಇತರ ಹಿರಿಯರಿಗೆ ತಾತ್ಕಾಲಿಕವಾಗಿ ವೇತನ ಕಡಿತವಾಗಿತ್ತು.
ಕೆಂಪ್‌ಜಿನ್‌ಸ್ಕಿ ಅವರು 2020ರಲ್ಲಿ ಪಡೆದಿದ್ದ ವೇತನವು ಕಂಪನಿಯ ಸಾಮಾನ್ಯ ಉದ್ಯೋಗಿಯ ವೇತನಕ್ಕಿಂತ 1,189 ಪಟ್ಟು ಹೆಚ್ಚು ಎಂದು ವರದಿ ತಿಳಿಸಿದೆ. ಆಗ ಸಾಮಾನ್ಯ ಉದ್ಯೋಗಿಯ ವೇತನ 9,124 ಡಾಲರ್‌ನಷ್ಟಿತ್ತು. (7.48 ಲಕ್ಷ ರೂ.) ಮೆಕ್ ಡೊನಾಲ್ಡ್ ಅವರು 2020ರಲ್ಲಿ ಪಡೆದ ಮೂಲ ವೇತನ 7.93 ಕೋಟಿ ರೂ. ಆದರೂ, ಒಟ್ಟಾರೆ ವೇತನ 88 ಕೋಟಿ ರೂ.ಗಳಾಗಿತ್ತು.
ಮೆಕ್ ಡೊನಾಲ್ಡ್ಸ್ ಈ ವರ್ಷ ಜನವರಿಯಲ್ಲಿ ಉದ್ಯೋಗಿಗಳಿಗೆ ಕಳಿಸಿರುವ ಪತ್ರದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿತ್ತು. ವೆಚ್ಚ ನಿಯಂತ್ರಣದ ಭಾಗವಾಗಿ ಈ ಕ್ರಮ ಅನಿವಾರ್ಯ ಎಂದಿತ್ತು.