ಬೆಂಗಳೂರು: ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿಯವರ ( Nilekani) ಫಂಡಮೆಂಟಮ್ ಪಾರ್ಟ್ನರ್‌ಶಿಪ್ ಸಂಸ್ಥೆಯು ೨೨೭ ದಶಲಕ್ಷ ಡಾಲರ್ (ಅಂದಾಜು ೧,೭೯೩ ಕೋಟಿ ರೂ.) ಬಂಡವಾಳ ಹೂಡಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ನಿಲೇಕಣಿಯವರ ಫಂಡಮೆಂಟಮ್ ಸಂಸ್ಥೆಯು ಆರಂಭಿಕ ಹಂತದಲ್ಲಿರುವ ಭಾರತೀಯ ಸ್ಟಾರ್ಟಪ್‌ಗಳಲ್ಲಿ ಬಂಡವಾಳ ಹೂಡಿಕೆಯನ್ನು ಮಾಡಿ ಬೆಂಬಲಿಸುತ್ತದೆ. ಫಂಡಮೆಂಟಮ್ ಸಂಸ್ಥೆಯು ಮಿಡ್-ಸ್ಟೇಜ್ ವೆಂಚರ್ ಕ್ಯಾಪಿಟಲ್ ಸಂಸ್ಥೆಯಾಗಿದ್ದು, ಪ್ರತಿ ವರ್ಷ ೪-೫ ಸ್ಟಾಟರ್ಪ್‌ಗಳಲ್ಲಿ ಅಂದಾಜು ೨೦೦ ಕೋಟಿ ರೂ. ಹೂಡಿಕೆ ಮಾಡುತ್ತದೆ. ಈ ಫಂಡ್‌ನಿಂದ ಉದ್ಯಮಿಗಳಿಗೆ ತಮ್ಮ ಸ್ಟಾರ್ಟಪ್ ಅನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ. ಇದೀಗ ೨೨೭ ದಶಲಕ್ಷ ಡಾಲರ್ ಹೂಡಿಕೆ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಂದನ್ ನಿಲೇಕಣಿ ಅವರು, ಈ ಫಂಡ್‌ನಿಂದ ಸಂಸ್ಥೆ ತನ್ನ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಉದ್ಯಮಶೀಲರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಫಂಡಮೆಂಟಮ್ ಅನ್ನು ೨೦೧೭ರಲ್ಲಿ ನಂದನ್ ನಿಲೇಕಣಿ ಮತ್ತು ಸಂಜೀವ್ ಅಗ್ರವಾಲ್ ಸ್ಥಾಪಿಸಿದ್ದರು. ಫಾರ್ಮ್‌ಈಸೀ, ಸ್ಪಿನ್ನಿ ಮೊದಲಾದವುಗಳಿಗೆ ಫಂಡಮೆಂಟಮ್ ನೆರವು ನೀಡಿದೆ.