Site icon Vistara News

ಬೈಜೂಸ್‌ ಅಧೀನದಲ್ಲಿರುವ ವೈಟ್‌ಹ್ಯಾಟ್‌ ಜ್ಯೂನಿಯರ್‌ ಸ್ಟಾರ್ಟಪ್‌ನಲ್ಲಿ 300 ಉದ್ಯೋಗಿಗಳ ವಜಾ

jobs

ಬೆಂಗಳೂರು: ಬೈಜೂಸ್‌ ಅಧೀನದಲ್ಲಿರುವ ಆನ್‌ಲೈನ್‌ ಶಿಕ್ಷಣ ಸೇವೆ ನೀಡುವ ಸ್ಟಾರ್ಟಪ್‌ ವೈಟ್‌ಹೌಸ್‌ ಜ್ಯೂನಿಯರ್‌, ತನ್ನ ೩೦೦ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಆನ್‌ಲೈನ್‌ ಶಿಕ್ಷಣ ನೀಡುವ ಸ್ಟಾರ್ಟಪ್‌ ವಲಯದಲ್ಲಿ ಇತ್ತೀಚೆಗೆ ವ್ಯಾಪಕವಾಗು ಉದ್ಯೋಗ ಕಡಿತ ಸಂಭವಿಸಿದೆ. ನಿರೀಕ್ಷೆಯಂತೆ ವೈಟ್‌ಹ್ಯಾಟ್‌ ಜ್ಯೂನಿಯರ್‌ನಲ್ಲೂ ೩೦೦ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ವೆಚ್ಚ ನಿಯಂತ್ರಣಕ್ಕಾಗಿ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ.

ಬ್ರೆಜಿಲ್‌ ಮತ್ತು ಭಾರತದಲ್ಲಿ ಸ್ಟಾರ್ಟಪ್‌ನ ಸೇಲ್ಸ್‌ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಕಳೆದ ಮೇನಿಂದ ಈ ಸ್ಟಾರ್ಟಪ್‌ನಲ್ಲಿ ೮೦೦ ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

ಕೋಡ್‌ ತಂತ್ರಜ್ಞಾನವನ್ನು ವೈಟ್‌ ಬ್ಯಾಟ್‌ ಕಲಿಸುತ್ತಿದೆ. ೨೦೨೦ರಲ್ಲಿ ಬೈಜೂಸ್‌ ಇದನ್ನು ಖರೀದಿಸಿತ್ತು.

Exit mobile version