ಬೆಂಗಳೂರು: ಓಯೊ ಪ್ಲಾಟ್‌ಫಾರ್ಮ್ (OYO) ವ್ಯಾಪ್ತಿಗೆ ದಕ್ಷಿಣ ಭಾರತದಲ್ಲಿ ಈ ವರ್ಷ ಡಿಸೆಂಬರ್ ವೇಳೆಗೆ 600 ಹೊಸ ಹೋಟೆಲ್ ಮತ್ತು ಮನೆಗಳು ಸೇರ್ಪಡೆಯಾಗಲಿದೆ.
ಓಯೊ ಪ್ರತಿ ವಾರ ಸರಾಸರಿ ೩೫ ಹೋಟೆಲ್‌ಗಳನ್ನು ತನ್ನ ಜಾಲಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ 1350 ಪ್ರಾಪರ್ಟಿಗಳನ್ನು ಓಯೊ ನಿರ್ವಹಿಸುತ್ತಿದೆ.
ಓಯೊದ ಟಾಪ್ ೧೦ ಬಿಸಿನೆಸ್ ತಾಣಗಳಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈ ಇದೆ. ಪ್ರವಾಸೋದ್ಯಮ ಚಟುವಟಿಕೆಗಳು ಜನವರಿಯಿಂದ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಚೇತರಿಸುತ್ತಿದೆ. ಹಬ್ಬದ ಸೀಸನ್‌ನಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆ ತಿಳಿಸಿದೆ.