Site icon Vistara News

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

smartphone

ನವ ದೆಹಲಿ: ಭಾರತ ಈ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ಒಟ್ಟು ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಇದರಲ್ಲಿ 90% ಪಾಲು ಆ್ಯಪಲ್‌‌ ಮತ್ತು ಸ್ಯಾಮ್‌ಸಂಗ್‌ ಕಂಪನಿಗಳದ್ದಾಗಿದೆ. 2022ರ ಏಪ್ರಿಲ್‌ನಿಂದ (Smartphone Export) ಇಲ್ಲಿಯವರೆಗೆ ಒಟ್ಟು 9 ಶತಕೋಟಿ ಡಾಲರ್‌ (73,800 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತಾಗಿದೆ.

2.5 ಶತಕೋಟಿ ಡಾಲರ್‌ (20,500 ಕೋಟಿ ರೂ.) ಆಸುಪಾಸಿನಲ್ಲಿದ್ದ ಸ್ಮಾರ್ಟ್‌ಫೋನ್ ರಫ್ತು, ಕಳೆದ 2022ರ ಏಪ್ರಿಲ್‌ನಿಂದ 2023ರ ಫೆಬ್ರವರಿ ಅವಧಿಯಲ್ಲಿ ರಫ್ತು ಇಮ್ಮಡಿಯಾಗಿದೆ ಎಂದು ಇಂಡಿಯಾ ಸೆಲ್ಯುಲಾರ್‌ & ಎಲೆಕ್ಟ್ರಾನಿಕ್ಸ್‌ ಅಸೋಸಿಯೇಶನ್‌ (ICEA) ತಿಳಿಸಿದೆ. 2021-22ರಲ್ಲಿ 5.8 ಶತಕೋಟಿ ಡಾಲರ್‌ನಷ್ಟಿದ್ದ (47,560 ಕೋಟಿ ರೂ.) ಸ್ಮಾರ್ಟ್‌ಫೋನ್‌ ರಫ್ತು, 2022-23ರಲ್ಲಿ ಇಮ್ಮಡಿಯಾಗುವ ನಿರೀಕ್ಷೆ ಇದೆ. 2022ರ ಸೆಪ್ಟೆಂಬರ್‌ ಬಳಿಕ ಪ್ರತಿ ತಿಂಗಳೂ ಸರಾಸರಿ 1 ಶತಕೋಟಿ ಡಾಲರ್‌ (8,200 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತಾಗಿದೆ. ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಇನ್ಸೆಂಟಿವ್‌ (PLI) ಯೋಜನೆ ಈ ಸಾಧನೆಗೆ ಪುಷ್ಟಿ ನೀಡಿದೆ.

ಐಫೋನ್‌ ಉತ್ಪಾದಕ ಆ್ಯಪಲ್‌‌ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಗಣನೀಯ ಹೆಚ್ಚಿಸಿರುವುದು, ದಕ್ಷಿಣ ಕೊರಿಯಾದ ಸ್ಯಾಮ್‌ ಸಂಗ್‌ ಕೂಡ ಇಲ್ಲಿ ಉತ್ಪಾದನೆ ಹೆಚ್ಚಳ ಮಾಡಿರುವುದು ಸಹಕಾರಿಯಾಗಿದೆ. ಐಫೋನ್‌ ತಯಾರಿಕೆಯ ಗುತ್ತಿಗೆದಾರ ಕಂಪನಿಗಳಾದ ಫಾಕ್ಸ್‌ಕಾನ್‌, ವಿಸ್ಟ್ರಾನ್‌ ಮತ್ತು ಪೆಗಾಟ್ರಾನ್‌ ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿವೆ.

Exit mobile version