Site icon Vistara News

Aadhaar Card Update: ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೊ ಹಳೆಯದಾಗಿದೆಯಾ? ಸುಲಭವಾಗಿ ಬದಲಿಸಿಕೊಳ್ಳಿ!

Aadhaar Card Update

ಎಲ್ಲ ಅಗತ್ಯಗಳಿಗೂ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ ನಲ್ಲಿ (Aadhaar Card Update) ಫೋಟೋ (photo) ಚೆನ್ನಾಗಿ ಬಂದಿಲ್ಲ ಎಂದು ಎಲ್ಲರಿಂದ ತಪ್ಪಿಸಿ ಇನ್ನು ಇಡುವ ಅಗತ್ಯವಿಲ್ಲ. ಯಾಕೆಂದರೆ ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಚೆನ್ನಾಗಿಲ್ಲ ಎಂದೆನಿಸಿದರೆ ತಕ್ಷಣ ಬದಲಾಯಿಸಿಕೊಳ್ಳಿ.

ಆಧಾರ್ ಕಾರ್ಡ್ ಕೇವಲ ಗುರುತಿನ ದಾಖಲೆ (identification document) ಮಾತ್ರವಲ್ಲ. ಭಾರತದಲ್ಲಿ (India) ವಿವಿಧ ಸೇವೆಗಳನ್ನು ಪ್ರವೇಶಿಸಲು ಮತ್ತು ವಹಿವಾಟುಗಳನ್ನು ಮಾಡಲು ಇದು ಅತ್ಯಗತ್ಯ ದಾಖಲೆಯಾಗಿದೆ. ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಚೆನ್ನಾಗಿ ಕಾಣುತ್ತಿಲ್ಲವಾದರೆ ಅದನ್ನು ನವೀಕರಿಸಲು ಸರಳವಾದ ವಿಧಾನ ಇಲ್ಲಿದೆ.

ಆಧಾರ್ ಕಾರ್ಡ್ ನವೀಕರಣ ಹೇಗೆ?

ಆಧಾರ್ ಕಾರ್ಡ್ ನಲ್ಲಿ ಫೋಟೋ ನವೀಕರಣ ಮಾಡಲು ಅಧಿಕೃತ UIDAI ವೆಬ್‌ಸೈಟ್‌ಗೆ ಹೋಗಿ https://uidai.gov.in/en/ ಲಾಗ್ ಇನ್ ಆಗಿ. ಬಳಿಕ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಸ್ಥಳೀಯ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಮತ್ತು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ನೇಮಕಗೊಂಡ ಸಿಬ್ಬಂದಿಗೆ ಹಸ್ತಾಂತರಿಸಿ. ಬಳಿಕ ಬಯೋಮೆಟ್ರಿಕ್ ವಿವರಗಳನ್ನು ಒದಗಿಸಿ. ಅಧಿಕಾರಿಗಳು ನಿಮ್ಮ ಫೋಟೋ ತೆಗೆದುಕೊಳ್ಳುತ್ತಾರೆ. ಬಳಿಕ ನವೀಕರಣ ವಿನಂತಿ ಸಂಖ್ಯೆ (URN) ಅನ್ನು ಒಳಗೊಂಡಿರುವ ಸ್ವೀಕೃತಿ ಸ್ಲಿಪ್ ಅನ್ನು ಒದಗಿಸಲಾಗುತ್ತದೆ.


ಹೊಸ ಕಾರ್ಡ್ ಪಡೆಯುವುದು ಹೇಗೆ?

ಆಧಾರ್ ಕಾರ್ಡ್ ಫೋಟೋ ಚಿತ್ರವನ್ನು ಬದಲಾಯಿಸಿದ ಅನಂತರ ಅದನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಅದಕ್ಕಾಗಿ ಕೆಲವು ಹಂತಗಳಿವೆ.

ಫೋಟೋವನ್ನು ಅಪ್‌ಗ್ರೇಡ್ ಮಾಡಿದ ಅನಂತರ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು “ನನ್ನ ಆಧಾರ್” ಟ್ಯಾಬ್‌ಗೆ ಹೋಗಿ ಮತ್ತು “ಆಧಾರ್ ಡೌನ್‌ಲೋಡ್ ಮಾಡಿ” ಆಯ್ಕೆ ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು “ಒಟಿಪಿ ಕಳುಹಿಸಿ” ಬಟನ್ ಕ್ಲಿಕ್ ಮಾಡಿ.

ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ನೀಡಲಾಗುತ್ತದೆ, ಆ ಒಟಿಪಿ ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಿ. ಬಳಿಕ ನವೀಕರಿಸಿದ ಆಧಾರ್ ಕಾರ್ಡ್ ಪಡೆಯಲು “ಡೌನ್‌ಲೋಡ್ ಆಧಾರ್” ಬಟನ್ ಕ್ಲಿಕ್ ಮಾಡಿ. ಅಂತಿಮವಾಗಿ, ಡೌನ್‌ಲೋಡ್ ಮಾಡಿದ ಆಧಾರ್ ಕಾರ್ಡ್ ಅನ್ನು ಮುದ್ರಿಸಿ.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ನವೀಕರಣದ ವೇಳೆ ಗಮನಿಸಿ

ಆಧಾರ್ ಕಾರ್ಡ್ ಫೋಟೋವನ್ನು ನವೀಕರಿಸುವಾಗ ಅಗತ್ಯವಾಗಿ ತಿಳಿದಿರಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಅವುಗಳಲ್ಲಿ ಮುಖ್ಯವಾಗಿ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ನವೀಕರಿಸಲು ಇತರ ದಾಖಲೆಗಳ ಅಗತ್ಯವಿಲ್ಲ. ಫೋಟೋ ತೆಗೆದುಕೊಂಡು ಹೋಗಬೇಕಿಲ್ಲ. ಕಾರ್ಯನಿರ್ವಾಹಕರು ಸ್ಥಳದಲ್ಲೇ ಫೋಟೋ ತೆಗೆದುಕೊಳ್ಳುತ್ತಾರೆ. ಆಧಾರ್ ಮಾಹಿತಿಯನ್ನು ನವೀಕರಿಸಲು 90 ದಿನಗಳವರೆಗೆ ಅವಕಾಶವಿದೆ.

ಸ್ವೀಕೃತಿ ಹಾಳೆಯಲ್ಲಿ ಕಂಡುಬರುವ URN ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಆಧಾರ್ ನವೀಕರಣದ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಸ್ವಯಂ-ಸೇವಾ ಅಪ್‌ಡೇಟ್ ಪೋರ್ಟಲ್ (SSUP) ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಬದಲಾಯಿಸಲು ಆನ್‌ಲೈನ್ ಆಯ್ಕೆಯನ್ನು ಒದಗಿಸುವುದಿಲ್ಲ.

Exit mobile version