Site icon Vistara News

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Aadhaar Update

ಆಧಾರ್ ಕಾರ್ಡ್ ಭಾರತೀಯ ನಾಗರಿಕರ ಗುರುತಿನ ( identity of Indian citizens) ದಾಖಲೆಯಾಗಿದೆ. ಈ ಸರ್ಕಾರಿ ದಾಖಲೆಯನ್ನು ಅನೇಕ ಕೆಲಸಗಳಿಗಾಗಿ ಬಳಸಲಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ (Aadhaar Update) ಯಾವುದೇ ಮಾಹಿತಿ (name and address) ಹಳೆಯದಾಗಿದ್ದರೆ ಅದನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಈ ಮಾಹಿತಿ ಅಪ್ಡೇಟ್ ಗೆ ಕೆಲವೊಂದು ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಆಧಾರ್ ಕಾರ್ಡ್‌ನಲ್ಲಿ ನೀಡಲಾದ ಮಾಹಿತಿಯು ಹಳೆಯದಾಗಿರಬಾರದು. ಯಾಕೆಂದರೆ ಆಗಾಗ್ಗೆ ಇದನ್ನು ಗುರುತಿನ ಪುರಾವೆಯಾಗಿ ಬಳಸಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ವಿಳಾಸ ಮಾಹಿತಿಯು ಸರಿಯಾಗಿರಬೇಕು. ಒಂದು ವೇಳೆ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸಲು ಯೋಚಿಸುತ್ತಿದ್ದರೆ ಇದಕ್ಕಾಗಿ ಬಳಸುವ ದಾಖಲೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.

ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಹೆಸರು, ವಿಳಾಸ ನವೀಕರಣಕ್ಕೆ ಈ ಕೆಲವು ದಾಖಲೆಗಳನ್ನು ಬಳಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

Aadhaar Update


ಯಾವ ದಾಖಲೆಗಳು ಮುಖ್ಯ?

ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸವನ್ನು ನವೀಕರಿಸಲು ಮಾನ್ಯವಾದ ಭಾರತೀಯ ಪಾಸ್‌ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಅನ್ನು ಪುರಾವೆಯಾಗಿ ಬಳಸಬಹುದು. ಆದರೆ ಎಲ್ಲರೂ ಪಾಸ್ ಪೋರ್ಟ್, ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸನ್ಸ್ ಹೊಂದಿರುವುದಿಲ್ಲ. ಅಲ್ಲದೇ ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ಅನ್ನು ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಪಡಿತರ ಮತ್ತು ಇ-ಪಡಿತರ ಕಾರ್ಡ್ ಅನ್ನು ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

ನೀರು, ವಿದ್ಯುತ್‌ ಬಿಲ್‌:

ಈಗ ಇದರೊಂದಿಗೆ ವಿದ್ಯುತ್, ನೀರು ಮತ್ತು ದೂರವಾಣಿ ಬಿಲ್‌ಗಳನ್ನು ವಿಳಾಸದ ಪುರಾವೆಯಾಗಿ ಬಳಸಬಹುದು. ಮುಖ್ಯವಾಗಿ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸಲು ಯಾರ ಹೆಸರಿನಲ್ಲಿ ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್ ಅನ್ನು ಬಳಸಬಹುದು. ಆದರೆ ಇದು ಕನಿಷ್ಠ 3 ತಿಂಗಳಿಗಿಂತ ಹಳೆಯದಾಗಿರಬೇಕು.

ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್:

ಇದಲ್ಲದೇ ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್ ಅನ್ನು ಸಹ ಬಳಸಬಹುದು. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಜೀವ ಮತ್ತು ವೈದ್ಯಕೀಯ ವಿಮಾ ಪಾಲಿಸಿಗಳನ್ನು ಬಳಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳುತ್ತದೆ. ಆದರೆ ಈ ನೀತಿಯು ಬಿಲ್ ವಿತರಿಸಿದ ದಿನಾಂಕದಿಂದ 1 ವರ್ಷದವರೆಗೆ ಮಾತ್ರ ಮಾನ್ಯವಾಗಿರುತ್ತದೆ.

Exit mobile version