ಹೊಸದಿಲ್ಲಿ: ಅದಾನಿ ಗ್ರೂಪ್ ಉದ್ಯಮಿ ರಾಘವ್ ಬಹಲ್ ಅವರ ಕ್ವಿಂಟ್ ವಾರ್ತಾ ಸಂಸ್ಥೆಯ ಶೇ.49 ಷೇರುಗಳನ್ನು ಖರೀದಿಸಿದ್ದು, ಮಾಧ್ಯಮ ರಂಗವನ್ನು ಪ್ರವೇಶಿಸಿದೆ.
ಅದಾನಿ ಗ್ರೂಪ್‌ನ ಭಾಗವಾಗಿರುವ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್, ಕ್ವಿಂಟ್ ವಾರ್ತಾ ಸಂಸ್ಥೆಯನ್ನು ನಡೆಸುತ್ತಿರುವ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾದ ಶೇ.49ಷೇರುಗಳನ್ನು ಖರೀದಿಸಿದೆ.
ಡೀಲ್‌ನ ಮೊತ್ತ ಎಷ್ಟೆಂಬುದು ಬಹಿರಂಗವಾಗಿಲ್ಲ.
ಈ ಹಿನ್ನೆಲೆಯಲ್ಲಿ ಸೋಮವಾರ ಕ್ವಿಂಟ್ ಡಿಜಿಟಲ್ ಮೀಡಿಯಾದ ಷೇರುಗಳ ದರ ಶೇ.೯ರಷ್ಟು ಏರಿತು (325 ರೂ.). ರಾಘವ್ ಬಹಲ್ ಈ ಹಿಂದೆ ನೆಟ್‌ವರ್ಕ್ 18ನ ಪ್ರವರ್ತಕರಾಗಿದ್ದರು. 2014ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಖರೀದಿಸಿತ್ತು. ಇದಾದ ಬಳಿಕ ರಾಘವ್ ಬಹಲ್ ಅವರು ಡಿಜಿಟಲ್ ಮೀಡಿಯಾ ಕ್ವಿಂಟಿಲಿಯನ್ ಮೀಡಿಯಾವನ್ನು ಸ್ಥಾಪಿಸಿದ್ದರು. 2015ರಲ್ಲಿ ಇದು ಕ್ವಿಂಟ್ ಅನ್ನು ಆರಂಭಿಸಿತ್ತು.