ಮುಂಬಯಿ: ಮುಂಬಯಿನಿಂದ ಗುರುವಾರ ಬೆಂಗಳೂರಿಗೆ ಹಾರಾಟ ಆರಂಭಿಸಿದ್ದ ಏರ್ ಇಂಡಿಯಾದ ವಿಮಾನದಲ್ಲಿ ಎಂಜಿನ್ ದೋಷ ಕಾಣಿಸಿದ್ದು, ತುರ್ತು ಭೂಸ್ಪರ್ಶ ಮಾಡಲಾಯಿತು.
ಏರ್ ಇಂಡಿಯಾದ ಎ320 ನಿಯೊ ವಿಮಾನವು ಮುಂಬಯಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.45ಕ್ಕೆ ಹಾರಾಟ ಆರಂಭಿಸಿದ ಕೆಲ ನಿಮಿಷಗಳಲ್ಲೇ ಒಂದು ಎಂಜಿನ್ ಹಠಾತ್ತನೆ ಸ್ಥಗಿತವಾಯಿತು.
ವಿಮಾನದಲ್ಲಿ ಎರಡು ಎಂಜಿನ್ ಇರುತ್ತದೆ. ಅದರಲ್ಲೊಂದು ಸ್ಥಗಿತವಾದ್ದರಿಂದ ಪೈಲೆಟ್‌ಗಳು ವಿಮಾನವನ್ನು ನಿಲ್ದಾಣಕ್ಕೆ ವಾಪಸ್ ಕರೆತಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಟೇಕಾಫ್ ಆಗುತ್ತಿದ್ದಂತೆ ಪೈಲಟ್‌ಗಳು ಎಡಬದಿಯ ಎಂಜಿನ್ ತೀವ್ರ ಬಿಸಿಯಾಗಿರುವ ಬಗ್ಗೆ ಅಲರ್ಟ್ ಸ್ವೀಕರಿಸಿದರು. ಕೂಡಲೇ ವಿಮಾನವನ್ನು ನಿಲ್ದಾಣಕ್ಕೆ ಹಿಂತಿರುಗಿಸಲು ನಿರ್ಧರಿಸಲಾಯಿತು.