Site icon Vistara News

Ambani to Shiv Nadar : ಭಾರತದ 7 ಬಿಲಿಯನೇರ್‌ಗಳ ವಿದ್ಯಾರ್ಹತೆ ಏನು?

Mukesh Ambani

ಫೋರ್ಬ್ಸ್‌ 2023ರ ಪ್ರಕಾರ worlds billionaires list ನಲ್ಲಿ 169 ಮಂದಿ ಭಾರತೀಯರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಹೆಚ್ಚು. ಭಾರತದಲ್ಲಿ ಹೊಸ ಸ್ಟಾರ್ಟಪ್‌ಗಳು ಬಿಲಿಯನೇರ್‌ಗಳನ್ನು ಹುಟ್ಟು ಹಾಕುತ್ತಿದೆ. ಲಕ್ಷಾಂತರ ಡಾಲರ್‌ ಹೂಡಿಕೆ ಇವುಗಳಿಗೆ ಹರಿದು ಬರುತ್ತಿರುವುದೂ ಇದಕ್ಕೆ ಒಂದು ಕಾರಣ. ಬಿಲಿಯನೇರ್‌ ಆಗಲು ಎಷ್ಟು ಓದಿರಬೇಕು ಎನ್ನುತ್ತೀರಾ? ಭಾರತದ ಅತಿ ಶ್ರೀಮಂತ ವ್ಯಕ್ತಿ ಒಬ್ಬ ಡ್ರಾಪೌಟ್.‌ ಅಂದರೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈಬಿಟ್ಟವರು. ಭಾರತದ 7 ಬಿಲಿಯನೇರ್‌ಗಳ ವಿದ್ಯಾರ್ಹತೆ ವಿವರ ಇಲ್ಲಿದೆ.

ಮುಕೇಶ್‌ ಅಂಬಾನಿ, Mukesh Ambani – 93.5 billion dollar : ನಿಮಗೆ ಅಚ್ಚರಿಯಾಗಬಹುದು. ಭಾರತದ ನಂ. 1 ಶ್ರೀಮಂತ ಉದ್ಯಮಿಯಾದ ಮುಕೇಶ್‌ ಅಂಬಾನಿ ಅವರು ವಿಶ್ವದ ಸಿರಿವಂತರಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಹಾಗಾದರೆ ಅವರ ಶೈಕ್ಷಣಿ ಅರ್ಹತೆ ಏನು? ಮುಕೇಶ್‌ ಅಂಬಾನಿ ಅವರು ಮುಂಬಯಿನಲ್ಲಿ ಹಿಲ್‌ ಗ್ರೇಂಜ್‌ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಬಳಿಕ ಮುಂಬಯಿನ ಸೈಂಟ್‌ ಕ್ಸೇವಿಯರ್‌ ಕಾಲೇಜು ಸೇಇದರು. ಬಳಿಕ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಟೆಕ್ನಾಲಜಿಯಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಪದವಿ ಗಳಿಸಿದರು. ಅನಂತರ ಸ್ಟಾನ್‌ಫೋರ್ಡ್‌ ಯುನಿವರ್ಸಿಟಿಯಲ್ಲಿ ಎಂಬಿಎ ಓದಲು ಸೇರಿದರು. ಆದರೆ 1980ರಲ್ಲಿ ಓದನ್ನು ಅರ್ಧದಲ್ಲಿಯೇ ಬಿಟ್ಟು ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಸೇರಿದರು. ತಂದೆಯ ಜತೆ ಕೈಜೋಡಿಸಿದರು. ಆಗ ರಿಲಯನ್ಸ್‌ ಸಣ್ಣ ಕಂಪನಿಯಾಗಿದ್ದರೂ, ವೇಗವಾಗಿ ಬೆಳೆಯುತ್ತಿತ್ತು.

ಗೌತಮ್‌ ಅದಾನಿ Gautam Adani – 51.4 billion dollar : ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಸ್ಥಾಪಕರಾದ ಗೌತಮ್‌ ಅದಾನಿ ಅವರು ಭಾರತದ ಎರಡನೇ ಅತಿ ದೊಡ್ಡ ಸಿರಿವಂತ ವ್ಯಕ್ತಿ. ಅದಾನಿ ಗ್ರೂಪ್‌ ಸ್ಥಾಪಕ. ವಿಶ್ವದ 24ನೇ ಸಿರಿವಂತ ವ್ಯಕ್ತಿ. ಇವರೂ ಡ್ರಾಪೌಟ್.‌ ಗುಜರಾತ್‌ನಲ್ಲಿ ಚಿಮನ್‌ಲಾಲ್‌ ನಗಿನ್‌ದಾಸ್‌ ವಿದ್ಯಾಲಯದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಕೊನೆಗೊಳಿಸಿದರು. ಬಳಿಕ ಗುಜರಾತ್‌ ವಿವಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಶಿಕ್ಷಣಕ್ಕೆ ಸೇರಿದರೂ ಪೂರ್ಣಗೊಳಿಸಲಿಲ್ಲ. ಬಿಸಿನೆಸ್‌ ಕ್ಷೇತ್ರಕ್ಕೆ ಧುಮುಕಿದರು.‌

ಸೈರಸ್‌ ಪೂನಾವಾಲ, Cyrus Poonawala-27.6 billion dollar: ಫೋರ್ಬ್ಸ್‌ ಪ್ರಕಾರ ಸೈರಸ್‌ ಪೂನಾವಾಲ ಭಾರತದ ಮೂರನೇ ಅತಿ ದೊಡ್ಡ ಸಿರಿವಂತ. ಸೈರಸ್‌ ಪೂನಾವಾಲಾ ಗ್ರೂಪ್‌ನ ಚೇರ್ಮನ್.‌ ಇದು ಸೀರಮ್‌ ಇನ್‌ಸ್ಟಿಟ್ಯೂಟ್‌ ಅನ್ನು ನಡೆಸುತ್ತದೆ. ಇದು ವಿಶ್ವದ ಅತಿ ದೊಡ್ಡ ಲಸಿಕೆ ಉತ್ಪಾದಕ. ಶಾಲಾ ಶಿಕ್ಷಣದ ಬಳಿಕ ಪುಣೆಯಲ್ಲಿ 1966ರಲ್ಲಿ ಮಹಾರಾಷ್ಟ್ರ ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದರು.

ಇದನ್ನೂ ಓದಿ: Stock trading : ಸ್ಟಾಕ್‌ ಟ್ರೇಡಿಂಗ್‌ ಎಷ್ಟು ಸೇಫ್?‌ ಎಷ್ಟು ರಿಸ್ಕ್?‌ ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಶಿವ್‌ ನಡಾರ್‌, Shiv Nadar – 26.8 billion dollar: ಎಚ್‌ಸಿಎಲ್‌ ಟೆಕ್ನಾಲಜೀಸ್‌ ಸ್ಥಾಪಕ ಶಿವ್‌ ನಡಾರ್‌ ಭಾರತದ 4ನೇ ಅತಿ ಶ್ರೀಮಂತ ಉದ್ಯಮಿ. ಶಿವ್‌ ನಡಾರ್‌ ಅವರು ಮಧುರೈನಲ್ಲಿ ಎಲಾಂಗೊ ಕಾರ್ಪೊರೇಷನ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ ಓದಿದರು. ಮಧುರೈನ ಅಮೆರಿಕನ್‌ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಕೊಯಮತ್ತೂರಿನಲ್ಲಿ ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಗಳಿಸಿದರು.

ಸಾವಿತ್ರಿ ಜಿಂದಾಲ್‌ Savitri Jindal – 19.3 billion: ಭಾರತದ ಐದನೇ ಅತಿ ದೊಡ್ಡ ಶ್ರೀಮಂತ ಸಾವಿತ್ರಿ ಜಿಂದಾಲ್‌ ಅವರು ಒ.ಇ ಜಿಂದಾಲ್‌ ಗ್ರೂಪ್‌ನ ಮುಖ್ಯಸ್ಥೆ. ಅಸ್ಸಾಂ ಯುನಿವರ್ಸಿಟಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ.

ರಾಧಾಕಿಶನ್‌ ದಮಾನಿ, Radhakishan Damani-17.4 billion : ದೇಶದ ನಾನಾ ಕಡೆಗಳಲ್ಲಿ ಡಿ ಮಾರ್ಟ್‌ ಮಳಿಗೆಗಳನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ ಮಾರ್ಟ್‌ಗಳ ಸ್ಥಾಪಕ ರಾಧಾಕಿಶನ್‌ ಧಮಾನಿ ಅವರು ಮುಂಬಯಿ ವಿವಿಯಿಂದ ಡ್ರಾಪೌಟ್.‌ ಅಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಶಿಕ್ಷಣಕ್ಕೆ ಸೇರಿದ್ದರೂ ಪೂರ್ಣಗೊಳಿಸಲಿಲ್ಲ. ಸ್ಟಾಕ್‌ ಮಾರ್ಕೆಟ್‌ನಲ್ಲಿ ಆಸಕ್ತರಾಗಿ ಹೂಡಿಕೆ, ಟ್ರೇಡಿಂಗ್‌ನಲ್ಲಿನ ತೊಡಗಿಸಿಕೊಂಡರು.

ದಿಲೀಪ್‌ ಸಾಂಘ್ವಿ, Dilip Shanghvi -17.0 billion : ದಿಲೀಪ್‌ ಸಾಂಘ್ವಿ ಸನ್‌ ಫಾರ್ಮಾಸ್ಯುಟಿಕಲ್‌ ಇಂಡಸ್ಟ್ರೀಸ್‌ ಸ್ಥಾಪಕರು. ಭಾರತದ 7ನೇ ಶ್ರೀಮಂತ ಉದ್ಯಮಿ. ಕಲ್ಕತ್ತಾ ವಿವಿಯಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದರು.

Exit mobile version