ಮುಂಬಯಿನಲ್ಲಿ (mumbai) ಈಗ ಅಂಬಾನಿ (ambani) ಕುಟುಂಬದ ಮದುವೆ ಸಂಭ್ರಮ (Anant Ambani-Radhika Wedding) ಜೋರಾಗಿದೆ. ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಅನೇಕ ಗಣ್ಯರು ಮುಂಬಯಿಯತ್ತ ಆಗಮಿಸುತ್ತಿದ್ದಾರೆ. ಇದರ ಲಾಭ ಪಡೆಯಲು ವ್ಯಾಪಾರಿಗಳು, ಹೊಟೇಲ್ ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಮುಂಬಯಿನ ಸುಪ್ರಸಿದ್ದ ಹೊಟೇಲ್ ರೂಮ್‌ಗಳ ಬೆಲೆ ಗಗನಕ್ಕೇರಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹಾಗೂ ರಿಲಾಯನ್ಸ್ ಫೌಂಡೇಶನ್ ನ (Reliance Foundation) ಸಂಸ್ಥಾಪಕಿ ನೀತಾ ಅಂಬಾನಿ (nita ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಮುಂಬಯಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.
ಈ ನಡುವೆ ಮುಂಬಯಿನ ಉನ್ನತ ಮಟ್ಟದ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ಹೊಟೇಲ್ ದರಗಳು ಗಗನಕ್ಕೇರಿವೆ. ಸಾಮಾನ್ಯವಾಗಿ 13,000 ರೂ. ಗಳನ್ನು ವಿಧಿಸುವ ಹೊಟೇಲ್ ಗಳಲ್ಲಿ ಜುಲೈ 14 ರಂದು ರಾತ್ರಿಗೆ 91,350 ರೂ. ಗಳನ್ನು ವಿಧಿಸುತ್ತಿದೆ. ಪ್ರಯಾಣ ಮತ್ತು ಹೊಟೇಲ್ ವೆಬ್‌ಸೈಟ್‌ಗಳ ಪ್ರಕಾರ ಬಿಕೆಸಿಯ ಮುಖ್ಯ ಹೊಟೇಲ್ ಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ ಎನ್ನಲಾಗಿದೆ.
ಟ್ರೈಡೆಂಟ್ ಬಿಕೆಸಿಯಲ್ಲಿ ರೂಮ್ ದರಗಳು ಪ್ರತಿ ರಾತ್ರಿಗೆ 10,250 ರೂ. ಗಳಾಗಿದೆ. ತೆರಿಗೆಗಳು ಸೇರಿ ಜುಲೈ 9, 15 ರಂದು 16,750 ರೂ., ಜುಲೈ 16 ರಂದು ಪ್ರಯಾಣ ಬುಕಿಂಗ್ ವೆಬ್‌ಸೈಟ್‌ಗಳಲ್ಲಿ ತೆರಿಗೆಗಳು 13,750 ರೂ. ತೋರಿಸಿವೆ. ಹೊಟೇಲ್ ನ ವೆಬ್‌ಸೈಟ್‌ನಲ್ಲಿ ಈಗಾಗಲೇ ಎಲ್ಲ ಕೊಠಡಿಗಳು ಬುಕ್ ಆಗಿರುವುದು ಸೂಚಿಸಿದ್ದು, ಜುಲೈ 10 ರಿಂದ 14 ರವರೆಗೆ ಯಾವುದೇ ಕೊಠಡಿಗಳು ಇಲ್ಲಿ ಲಭ್ಯವಿರುವುದಿಲ್ಲ.
ಏತನ್ಮಧ್ಯೆ Sofitel BKC ಜುಲೈ 9 ರಂದು 13,000 ರೂ., ಜುಲೈ 12 ರಂದು 30,150 ರೂ., ಜುಲೈ 13 ರಂದು 40,590 ರೂ. ಮತ್ತು ಜುಲೈ 14 ರಂದು 91,350 ರೂ. ಗೆ ಹೊಟೇಲ್ ದರ ಏರಿದೆ. ಜುಲೈ 10 ಮತ್ತು 11ರಂದು ಯಾವುದೇ ಕೊಠಡಿಗಳು ಲಭ್ಯವಿಲ್ಲ ಎಂದು ಹೊಟೇಲ್ ನ ವೆಬ್‌ಸೈಟ್ ಹೇಳಿದೆ.
ಜುಲೈ 12ರಂದು ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಅಂಬಾನಿಮತ್ತು ರಾಧಿಕಾ ಮರ್ಚೆಂಟ್ ವಿವಾಹವಾಗಲಿದ್ದಾರೆ. ಅತಿಥಿಗಳಿಗಾಗಿ ನಿಖರವಾದ ವಸತಿ ಸೌಕರ್ಯಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಆದರೆ ಬಿಕೆಸಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಹೊಟೇಲ್ ಬೆಲೆಗಳು ಏರಿಕೆಯಾಗಿವೆ.
ಮದುವೆಯ ಪೂರ್ವಭಾವಿಯಾಗಿ ಈಗಾಗಲೇ ಎರಡು ಅದ್ದೂರಿ ಆಚರಣೆಗಳು ನಡೆದಿವೆ. ವಿವಾಹ ಪೂರ್ವ ಆಚರಣೆಗಳಲ್ಲಿ ಟೋಗಾ ಪಾರ್ಟಿ, ಅನಂತರ ಮಾಸ್ಕ್ವೆರೇಡ್ ಬಾಲ್ ಗಳಲ್ಲಿ 5,500 ಡ್ರೋನ್ ಗಳ ಬೆಳಕಿನ ಪ್ರದರ್ಶನವನ್ನು ಒಳಗೊಂಡಿತ್ತು. ಸುಮಾರು ಎಂಟು ವರ್ಷಗಳಲ್ಲಿ ರಿಹಾನ್ನಾ ಅವರ ಮೊದಲ ಪೂರ್ಣ ಸಂಗೀತ ಕಚೇರಿಯನ್ನು ಗಾಜಿನ ಅರಮನೆಯಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ: Radhika Merchant : ಭಾವಿ ಸೊಸೆಗೆ ದುಬಾರಿ ಗಿಫ್ಟ್ ಕೊಟ್ಟ ಅಂಬಾನಿ ಕುಟುಂಬ; ಏನೇನಿವೆ ಅದರಲ್ಲಿ?
ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.