Site icon Vistara News

Anant Radhika Wedding: ನಿಶ್ಚಿತಾರ್ಥದಿಂದ ಮದುವೆಯವರೆಗೆ; ಹೀಗಿತ್ತು ಅಂಬಾನಿ ಮಗನ ಮದುವೆಯ ಗತ್ತು!

Anant Radhika Wedding

ಸುದೀರ್ಘವಾಗಿ ವಿವಾಹ (wedding) ವಿಧಿವಿಧಾನಗಳನ್ನು ನಡೆಸಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Radhika Wedding) ಅವರ ವಿವಾಹ ಪೂರ್ವ ಕಾರ್ಯಕ್ರಮಗಳ ಹಲವಾರು ವಿಶೇಷತೆಗಳಿಗೆ ವಿಶ್ವವೇ (world) ಸಾಕ್ಷಿಯಾಗಿದೆ. ಶುಕ್ರವಾರ ರಾತ್ರಿ ಕಾಕ್‌ಟೈಲ್ ಪಾರ್ಟಿ, ಭಾನುವಾರದ ಭೋಜನ ಕೂಟದೊಂದಿಗೆ ವಿವಾಹ ಸಮಾರಂಭ ಸಂಪನ್ನಗೊಳ್ಳಲಿದೆ. ಈ ಮದುವೆಗೆ ಸುಮಾರು 5,000 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ಏಳು ತಿಂಗಳ ಕಾಲ ವಿವಿಧ ವಿಧಿ ವಿಧಾನಗಳೊಂದಿಗೆ ನಡೆದ ವಿವಾಹ ಕಾರ್ಯಾಕ್ರಮಗಳು ಭಾರತದ ಅತಿರಂಜಿತ ವಿವಾಹಗಳಲ್ಲಿ ಒಂದಾಗಿದೆ. ಫೋರ್ಬ್ಸ್ ಪ್ರಕಾರ 122 ಶತಕೋಟಿ ಡಾಲರ್‌ಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಅತಿದೊಡ್ಡ ಖಾಸಗಿ ವಲಯದ ಉದ್ದಿಮೆಯ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ವಿಧಿವಿಧಾನಗಳು ಈ ವರ್ಷದ ಆರಂಭದಿಂದ ನಡೆಯುತ್ತಿವೆ. ನಿಶ್ಚಿತಾರ್ಥದ ಬಳಿಕ ಪ್ರತಿ ಆರು ವಾರಗಳಿಗೊಮ್ಮೆ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ನಡೆಸಿ ಅಂಬಾನಿ ಕುಟುಂಬ ಸುದ್ದಿ ಮಾಡುತ್ತಿದೆ.


ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿವಾಹ ನಿಶ್ಚಯ

2023ರ ಡಿಸೆಂಬರ್ 29ರಂದು ಅನಂತ್ ಅಂಬಾನಿ ಅವರ ಕುಟುಂಬ ಮತ್ತು ನಿಕಟ ಸ್ನೇಹಿತರು ಉತ್ತರ ರಾಜಸ್ಥಾನ ರಾಜ್ಯದ ದೇವಸ್ಥಾನದಲ್ಲಿ ರಾಧಿಕಾ ಮರ್ಚೆಂಟ್‌ ಅವರೊಂದಿಗೆ ವಿವಾಹ ಪ್ರಸ್ತಾಪ ನಡೆಸಿದ್ದರು. ಇದನ್ನು ಗೌಪ್ಯವಾಗಿ ಇಡಲಾಗಿತ್ತು.


ಜನವರಿಯಲ್ಲಿ ನಿಶ್ಚಿತಾರ್ಥದ ಪಾರ್ಟಿ

ಜನವರಿ 18ರಂದು ಸಾಂಪ್ರದಾಯಿಕ “ಮೆಹಂದಿ” ಸಮಾರಂಭದಲ್ಲಿ ಭಾಗವಹಿಸಿದ ರಾಧಿಕಾ ಮರ್ಚೆಂಟ್ ಕೈ ಮತ್ತು ಪಾದಗಳಿಗೆ ಮದರಂಗಿ ಹಚ್ಚಿ ಶೃಂಗರಿಸಲಾಯಿತು. ಮರುದಿನ ಈ ಜೋಡಿಯು ತಮ್ಮ “ಗೋಲ್ ಧನ” ನಿಶ್ಚಿತಾರ್ಥದ ಪಾರ್ಟಿಯನ್ನು ನಡೆಸಿದರು. ಬಾಲಿವುಡ್‌ನ ಕೆಲವು ತಾರೆಗಳಾದ ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತ್ತಿತರರು ಭಾಗವಹಿಸಿದ್ದರು.


ವಿವಾಹಪೂರ್ವ ಪಾರ್ಟಿ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೂ ನಾಲ್ಕು ತಿಂಗಳ ಮುಂಚೆಯೇ ಗುಜರಾತ್‌ನ ಪಶ್ಚಿಮ ರಾಜ್ಯದಲ್ಲಿರುವ ಜಾಮ್‌ನಗರ ನಗರದಲ್ಲಿ ಅದ್ಧೂರಿಯಾಗಿ ಪಾರ್ಟಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ 1,200 ಮಂದಿ ಅತಿಥಿಗಳು ಪಾಲ್ಗೊಂಡಿದ್ದರು. ಬಾಲಿವುಡ್ ಶೈಲಿಯ ನೃತ್ಯ, ಪಟಾಕಿ ಮತ್ತು ಸುಮಾರು 100 ಬಾಣಸಿಗರು ಬೇಯಿಸಿದ 500 ಭಕ್ಷ್ಯಗಳ ಔತಣವನ್ನು ಒಳಗೊಂಡಿತ್ತು. ಸಂಜೆ ಪಾಪ್ ಸಿಂಗರ್ ರಿಹಾನ್ನಾ ಪ್ರದರ್ಶನ ನೀಡಿದರು.


ಟೆಕ್ ಬಿಲಿಯನೇರ್‌ಗಳಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಬಿಲ್ ಗೇಟ್ಸ್ ಕೂಡ ಪಾಲ್ಗೊಂಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಸಾಂಪ್ರದಾಯಿಕ ಕಾಶ್ಮೀರಿ ಕೋಟ್‌ಗಳನ್ನು ಧರಿಸಿದ್ದರು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಗಳು ಇವಾಂಕಾ ಟ್ರಂಪ್ ಮತ್ತು ಪತಿ ಜೇರೆಡ್ ಕುಶ್ನರ್ ತಮ್ಮ ಮಗಳೊಂದಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅಂಬಾನಿ ಕುಟುಂಬವು ಜಾಮ್‌ನಗರದ ಹೊರಗಿನ 50,000ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಭೋಜನಕೂಟವನ್ನು ಏರ್ಪಡಿಸಿತ್ತು.

ಮೇ ತಿಂಗಳಲ್ಲಿ ಯುರೋಪಿಯನ್ ಕ್ರೂಸ್ ಪಾರ್ಟಿ

ಐಷಾರಾಮಿ ಚಾರ್ಟರ್ಡ್ ಹಡಗಿನಲ್ಲಿ ನಾಲ್ಕು ದಿನಗಳ ಯುರೋಪಿಯನ್ ಕ್ರೂಸ್‌ ಪಾರ್ಟಿ ನಡೆಸಿದ ಅಂಬಾನಿ ಕುಟುಂಬ ಇದನ್ನು ಸಿಸಿಲಿಯನ್ ನಗರವಾದ ಪಲೆರ್ಮೊದಲ್ಲಿ ಪ್ರಾರಂಭಿಸಿ ರೋಮ್‌ನಲ್ಲಿ ಕೊನೆಗೊಳಿಸಿದರು. ಕಟ್ಟುನಿಟ್ಟಾದ ನೋ-ಫೋನ್ ನಿಯಮದಿಂದಾಗಿ ಇದರ ಫೋಟೋ, ವಿಡಿಯೋಗಳು ಎಲ್ಲೂ ಸೋರಿಕೆಯಾಗಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಬ್ಯಾಕ್‌ಸ್ಟ್ರೀಟ್ ಬಾಯ್ಸ್, ಪಿಟ್‌ಬುಲ್ ಮತ್ತು ಡೇವಿಡ್ ಗುಟ್ಟಾ ಅವರ ಆನ್-ಡೆಕ್ ಸಂಗೀತ ಕಛೇರಿಗಳನ್ನು ಆಯೋಜಿಸಿರುವುದರ ಮಾಹಿತಿ ಬಹಿರಂಗವಾಗಿತ್ತು.


ಜುಲೈ 2ರಂದು ಸಾಮೂಹಿಕ ವಿವಾಹ

ಜುಲೈ 2ರಂದು ಮುಂಬಯಿನಿಂದ 70 ಮೈಲುಗಳಷ್ಟು ದೂರದಲ್ಲಿರುವ ಪಾಲ್ಘರ್ ಪಟ್ಟಣದಲ್ಲಿ “ಸಮೂಹ್ ವಿವಾಹ್” ಎಂದು ಕರೆಯಲ್ಪಡುವ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿತ್ತು. ಚಿನ್ನದ ಆಭರಣಗಳಿಂದ ಹಿಡಿದು ಒಂದು ವರ್ಷದ ಮೌಲ್ಯದ ದಿನಸಿ ವಸ್ತುಗಳವರೆಗೆ ಉಡುಗೊರೆಗಳನ್ನು ಸ್ವೀಕರಿಸಲು 50ಕ್ಕೂ ಹೆಚ್ಚು ಹಿಂದುಳಿದ ದಂಪತಿಗಳನ್ನು ಆಹ್ವಾನಿಸಲಾಯಿತು. ಇದಾದ ಕೆಲವು ದಿನಗಳ ಅನಂತರ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ಸಂಗೀತ ಮತ್ತು ನೃತ್ಯದ ಸಾಂಪ್ರದಾಯಿಕ ರಾತ್ರಿಯನ್ನು ಆಯೋಜಿಸಿದರು. ಇದು ಜಸ್ಟಿನ್ ಅವರ ನೇರ ಪ್ರದರ್ಶನವನ್ನು ಒಳಗೊಂಡಿತ್ತು.


ಜುಲೈ 8ರಂದು ಅರಿಶಿನ ಶಾಸ್ತ್ರ

ಅಂಬಾನಿ ಕುಟುಂಬವು ಸೋಮವಾರ ಅರಶಿನ ಶಾಸ್ತ್ರವನ್ನು ನಡೆಸಿತ್ತು. ಸಾಂಪ್ರದಾಯಿಕವಾಗಿ ಸ್ನೇಹಿತರು ಮತ್ತು ಕುಟುಂಬದವರು ವಿವಾಹಿತ ದಂಪತಿಗೆ ಅರಿಶಿನ ಹಚ್ಚಿ ಆಶೀರ್ವದಿಸಿದರು.


ವಿವಾಹದ ಮುಖ್ಯ ಸಮಾರಂಭ

16,000 ಅತಿಥಿಗಳ ಸಮ್ಮುಖದಲ್ಲಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾಗಿದ್ದಾರೆ. ಡ್ರೆಸ್ ಕೋಡ್‌ನ ಪ್ರಕಾರ ಅತಿಥಿಗಳೆಲ್ಲ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದಾರೆ.


ಇದನ್ನೂ ಓದಿ: Anant Ambani-Radhika Wedding: ಅನಂತ್ ಅಂಬಾನಿ- ರಾಧಿಕಾ ಮದುವೆ; ಮುಂಬಯಿನಲ್ಲಿ ಗಗನಕ್ಕೇರಿದ ಹೊಟೇಲ್ ರೂಮ್ ಚಾರ್ಜ್!


ನಾಳೆ ಶುಭ್ ಆಶೀರ್ವಾದ

ಮದುವೆಯ ಮರುದಿನ ಹಿಂದೂ ವಿವಾಹ ಪದ್ಧತಿಯಂತೆ “ಶುಭ್ ಆಶೀರ್ವಾದ್” ಸಮಾರಂಭ ನಡೆಯಲಿದೆ. ಇಲ್ಲಿ ದಂಪತಿ ತಮ್ಮ ಸಮುದಾಯದ ಹಿರಿಯರಿಂದ “ಆಶೀರ್ವಾದ”ವನ್ನು ಪಡೆಯುತ್ತಾರೆ. ಇದಕ್ಕಾಗಿ ಹಾಲ್‌ನಲ್ಲಿ ಅಕ್ಕಿ, ಗುಲಾಬಿ ದಳವನ್ನು ದಂಪತಿ ಮೇಲೆ ಹಾಕಿ ಆಶೀರ್ವದಿಸಲಾಗುತ್ತದೆ.


ಭಾನುವಾರ ಮಂಗಲ್ ಉತ್ಸವ

ಭಾನುವಾರ “ಮಂಗಲ್ ಉತ್ಸವ” ಅಥವಾ ಸ್ವಾಗತ ಕಾರ್ಯಕ್ರಮದೊಂದಿಗೆ ವಿವಾಹ ಕಾರ್ಯಕ್ರಮಗಳು ಮುಕ್ತಾಯಗೊಳ್ಳುತ್ತದೆ. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅಂಬಾನಿ ಕುಟುಂಬದ 27 ಅಂತಸ್ತಿನ ನಿವಾಸ ಮುಂಬಯಿಯ ʼಆಂಟಿಲಿಯಾʼದಲ್ಲಿ ನಡೆಯಲಿದೆ.

Exit mobile version