ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant- Radhika wedding) ಪೂರ್ವ ಕಾರ್ಯಕ್ರಮಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (social media) ಹೆಚ್ಚು ಸದ್ದು ಮಾಡಿತ್ತು. ಈ ವರ್ಷ ಜುಲೈನಲ್ಲಿ ಇವರ ವಿವಾಹ ಲಂಡನ್‌ನಲ್ಲಿರುವ (London) ಅಂಬಾನಿ ಕುಟುಂಬದ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ನಡೆಯಲಿದೆ.
ಮಾರ್ಚ್ ತಿಂಗಳ 1ರಿಂದ 3ರವರೆಗೆ ಗುಜರಾತ್‌ನ (gujart) ಜಾಮ್‌ನಗರದಲ್ಲಿ (jamnagar) ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ವಿವಾಹಪೂರ್ವ ಸಮಾರಂಭವನ್ನು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಿದ್ದರು. ಇದರಲ್ಲಿ ಜಾಗತಿಕ ಟೆಕ್ ಸಿಇಒಗಳು, ಬಾಲಿವುಡ್ ತಾರೆಗಳು, ಪಾಪ್ ಐಕಾನ್‌ಗಳು ಮತ್ತು ರಾಜಕಾರಣಿಗಳು ಭಾಗವಹಿಸಿದ್ದರು.
ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆನಂದ್ ಪಿರಾಮಲ್ ಮತ್ತು ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ವಂಶಸ್ಥರು ಮದುವೆಯ ಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!
ಒಟ್ಟು ಖರ್ಚು
ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಪಾಪ್ ಐಕಾನ್ ರಿಹಾನ್ನಾ ಅವರು ಸತ್ಕರಿಸಿದರು. ಎರಡು ಗಂಟೆಗಳ ಕಾರ್ಯಕ್ರಮಕ್ಕಾಗಿ ಅವರು 6 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 52 ಕೋಟಿ ರೂ. ಗೂ ಹೆಚ್ಚು ಸಂಭಾವನೆ ಪಡೆದದ್ದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ 3 ದಿನಗಳ ಸಮಾರಂಭಕ್ಕೆ ಸುಮಾರು 1,260 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಡುಗೆ ಗುತ್ತಿಗೆಯವರಿಗೆ 200 ಕೋಟಿ ರೂ. ನೀಡಲಾಗಿದೆ ಎನ್ನಲಾಗಿದೆ.
ಫೋರ್ಬ್ಸ್ ಪ್ರಕಾರ 116 ಶತಕೋಟಿ ಡಾಲರ್ ಅಂದರೆ ಸುಮಾರು 9 ಲಕ್ಷ ಕೋಟಿ ರೂ. ಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅಂಬಾನಿ ಕುಟುಂಬವು ತಮ್ಮ ಕಿರಿಯ ಮಗನ ಮದುವೆಯ ಪೂರ್ವ ಸಂಭ್ರಮಕ್ಕಾಗಿ 1,200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಧಾರಾಳವಾಗಿ ಹಣ ಖರ್ಚು ಮಾಡಿದ್ದಾರೆ.
ಮದುವೆ ಖರ್ಚು ಎಷ್ಟಿರಬಹುದು?
ವರದಿಗಳ ಪ್ರಕಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ 1200- 1500 ಕೋಟಿ ರೂಪಾಯಿ ವೆಚ್ಚವಾಗಲಿದೆ. ದಂಪತಿಗಳು ಲಂಡನ್‌ನಲ್ಲಿ ವಿವಾಹವಾಗಲು ಸಿದ್ಧರಾಗಿದ್ದಾರೆ ಮತ್ತು ಅಬುಧಾಬಿಯಲ್ಲಿ ಸಂಗೀತ/ ಕಾಕ್‌ಟೈಲ್ ಕಾರ್ಯಕ್ರಮವನ್ನು ಸಹ ನಡೆಸಲು ಸಿದ್ಧರಾಗಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪೂರ್ವದಲ್ಲಿ ಹೂವಿನ ಅಲಂಕಾರವನ್ನು ಕಿಮ್ ಕಾರ್ಡಶಿಯಾನ್ ಮತ್ತು ಅವರ ಕುಟುಂಬ ನಡೆಸಿತ್ತು. ಕಾರ್ಯಕ್ರಮದ ಕೆಲಸಗಳನ್ನು ಹೆಸರುವಾಸಿಯಾದ ಜೆಫ್ ಲೀಥಮ್ ಅವರು ಮಾಡಿದ್ದಾರೆ. ಅವರು ಅಂಬಾನಿ ಮದುವೆಯಲ್ಲೂ ಅಲಂಕಾರವನ್ನು ಇವರಿಗೆ ನೀಡುವ ಸಾಧ್ಯತೆ ಇದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷ ಜುಲೈನಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಇದು ಈ ವರ್ಷದ ಅತಿ ದೊಡ್ಡ, ಅತ್ಯಂತ ಐಷಾರಾಮಿ ಮತ್ತು ಅತಿರಂಜಿತ ವಿವಾಹಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ.