ಕ್ಯಾಲಿಫೋರ್ನಿಯಾ : ಐಫೋನ್ ತಯಾರಕ ಆ್ಯಪಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಚಾಟ್‌ಜಿಪಿಟಿ ಬಳಸದಂತೆ ನಿರ್ಬಂಧಿಸಿದೆ. (Apple employees) ಚಾಟ್ ಜಿಪಿಟಿ (ChatGPT) ಹಾಗೂ ಇತರ ಕೃತಕ ಬುದ್ದಿಮತ್ತೆ ಆಧಾರಿತ (artificial intelligence) ಸಾಧನಗಳನ್ನು ಬಳಸದಂತೆ ಸೂಚಿಸಿದೆ. ಇದಕ್ಕೆ ಕಾರಣವೂ ಇದೆ.
ಆ್ಯಪಲ್ ಕಂಪನಿಯು ಈಗ ತನ್ನದೇ ಆದ ಕೃತಕ ಬುದ್ದಿಮತ್ತೆ ಯೋಜನೆಗಳನ್ನು ಹೊಂದಿದೆ. ತನ್ನದೇ ಚಾಟ್ ಜಿಪಿಟಿ ಮಾದರಿಯ ಟೂಲ್ಸ್ ಅಭಿವೃದ್ಧಿಗೆ ಮುಂದಾಗಿದೆ. ಹೀಗಾಗಿ ಎಐ ಟೆಕ್ನಾಲಜಿ ಬಳಸುವ ಉದ್ಯೋಗಿಗಳ ರಹಸ್ಯ ಡೇಟಾಗಳು ಸೋರಿಕೆಯಾಗುವ ಆತಂಕವನ್ನು ಎದುರಿಸುತ್ತಿದೆ. ಹೀಗಾಗಿ ಚಾಟ್ ಜಿಪಿಟಿ ಬಳಸದಂತೆ ನಿಷೇಧಿಸಿದೆ.
ಮೈಕ್ರೊಸಾಫ್ಟ್ ಮಾಲಿಕತ್ವದ ಗಿಟ್ ಹಬ್ಸ್ ಕೊಪೈಲೆಟ್ ಎಂಬ ಎಐ ಟೂಲ್ ಅನ್ನೂ ಬಳಸದಿರುವಂತೆ ಸೂಚಿಸಿದೆ. ಇದನ್ನು ಸಾಫ್ಟ್‌ವೇರ್ ಕೋಡ್ ಅನ್ನು ಆಟೊಮ್ಯಾಟಿಕ್ ಆಗಿ ರಚಿಸಲು ಬಳಸಬಹುದು. ಕಳೆದ ತಿಂಗಳು ಚಾಟ್ ಜಿಪಿಟಿಯ ರೂವಾರಿ ಓಪನ್ ಎಐ ಸಂಸ್ಥೆಯು ಚಾಟ್ ಜಿಪಿಟಿಯಲ್ಲಿ ಬಳಕೆದಾರರ ಸಂಭಾಷಣೆಯ ಹಿಸ್ಟರಿಯನ್ನು ಸೇವ್ ಮಾಡಲು ಸಾಧ್ಯವಿಲ್ಲ ಎಂದಿತ್ತು.
ಇದನ್ನೂ ಓದಿ: Apple iPhone: ಆ್ಯಪಲ್‌ನ ಐಫೋನ್ 15, ಐಫೋನ್ 15 ಪ್ಲಸ್ ಉತ್ಪಾದಿಸಲಿದೆ ಟಾಟಾ ಗ್ರೂಪ್!
ಕೃತಕ ಬುದ್ದಿಮತ್ತೆ ಆಧರಿತ ಟೂಲ್ಸ್‌ಗಳು ಹಗರಣಗಳಿಗೆ ಕಾರಣವಾಗಬಹುದು ಎಂದು ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ ಸ್ಟೀವ್ ವಾಜ್ನಿಕ್ ತಿಳಿಸಿದ್ದಾರೆ. ಎಐ ವಲಯವನ್ನು ನಿಯಂತ್ರಿಸಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಗಂಡಾಂತರತಪ್ಪಿದ್ದಲ್ಲ ಎಂದು ಎಚ್ಚರಿಸಿದ್ದಾರೆ.