ಮುಂಬಯಿ: ಡಾಬರ್ ಕಂಪನಿಯು ಮುಂಬಯಿ ಮೂಲದ ಬಾದ್‌ಶಾ ಮಸಾಲಾ (Badshah Masala) ಉತ್ಪನ್ನಗಳ ಕಂಪನಿಯಲ್ಲಿನ 51% ಷೇರುಗಳನ್ನು ಖರೀದಿಸಿದೆ.
ಒಟ್ಟು 587 ಕೋಟಿ ರೂ.ಗೆ ಈ ಡೀಲ್ ನಡೆದಿದೆ. ಬಾದ್‌ಶಾ ಮಸಾಲಾ 1,152 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಭಾರತೀಯ ಮಸಾಲಾ ಪದಾರ್ಥಗಳ ಮಾರುಕಟ್ಟೆ ಅತ್ಯಂತ ವಿಶಾಲವಾಗಿದ್ದು, ಬಹು ಬೇಡಿಕೆಯನ್ನು ಹೊಂದಿದೆ. ಬಾದ್‌ಶಾ ಮಸಾಲಾ ಈ ವಲಯದ ಪ್ರಮುಖ ಕಂಪನಿಗಳಲ್ಲೊಂದಾಗಿದೆ. ನಮ್ಮ ಆಹಾರ ಬಿಸಿನೆಸ್ ವಿಭಾಗದ ಬಲವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಡಾಬರ್ ಇಂಡಿಯಾದ ಅಧ್ಯಕ್ಷ ಮೋಹಿತ್ ಬರ್ಮನ್ ತಿಳಿಸಿದ್ದಾರೆ.