ನವ ದೆಹಲಿ: ದೇಶದ ನಂ.1 ಸ್ಟಾಕ್ ಬ್ರೋಕಿಂಗ್ ಕಂಪನಿಯಾಗಿ ಇದೀಗ ಬೆಂಗಳೂರು ಮೂಲದ ಗ್ರೊ ಸ್ಟಾರ್ಟಪ್ ಹೊರಹೊಮ್ಮಿದೆ. ಬಳಕೆದಾರರ ಸಂಖ್ಯೆಯ ದೃಷ್ಟಿಯಿಂದ ( Groww) ಹೋಲಿಸಿದರೆ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಸೋದರರ ನೇತೃತ್ವದ ಜೆರೋಧಾವನ್ನು ಗ್ರೊ ಹಿಂದಿಕ್ಕಿದೆ. ಎರಡೂ ಸಂಸ್ಥೆಗಳೂ ಬೆಂಗಳೂರು ಮೂಲವನ್ನು ಹೊಂದಿರುವುದು ವಿಶೇಷ.
ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಗ್ರೋ ಸಂಸ್ಥೆಯ ಸೇವೆಯನ್ನು ಸಕ್ರಿಯವಾಗಿ ಬಳಸುವವರ ಸಂಖ್ಯೆ ಸೆಪ್ಟೆಂಬರ್‌ನಲ್ಲಿ 66.3 ಲಕ್ಷಕ್ಕೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ಜೆರೊಧಾ ಗ್ರಾಹಕರ ಸಂಖ್ಯೆ 64.2 ಲಕ್ಷದಷ್ಟಿತ್ತು.
ಕಳೆದ 2016ರಲ್ಲಿ ಡೈರೆಕ್ಟ್ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಷನ್ ಪ್ಲಾಟ್ ಫಾರ್ಮ್ ಆಗಿ ಆರಂಭವಾಗಿದ್ದ ಗ್ರೊ ಇದೀಗ ಭಾರತದಲ್ಲಿ ವೇಗವಾಗಿ ಬೆಳೆದಿರುವ ಯುವ ಬ್ರೋಕಿಂಗ್ ಕಂಪನಿಗಳಲ್ಲಿ ಒಂದಾಗಿದೆ. 2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭ ಬ್ರೋಕಿಂಗ್ ಮಾರುಕಟ್ಟೆಯನ್ನೂ ಗ್ರೊ ಪ್ರವೇಶಿಸಿತ್ತು. ಯುಪಿಐ ಪೇಮೆಂಟ್ ಹಾಗೂ ಲೆಂಡಿಂಗ್ ಪ್ರಾಡಕ್ಟ್‌ಗಳನ್ನೂ ಗ್ರೊ ಒಳಗೊಂಡಿದೆ.
ಟಾಪ್ ಬ್ರೋಕರ್ಸ್ ಲಿಸ್ಟ್:
ಗ್ರೊ: 66.3 ಲಕ್ಷ ಬಳಕೆದಾರರು
ಜೆರೊಧಾ: 64.8
ಏಂಜೆಲ್: 48.6
ಅಪ್ ಸ್ಟಾಕ್ಸ್ : 21.9
ಐಸಿಐಸಿಐ ಸೆಕ್ಯುರಿಟಸ್: 19.1
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ : 10