ನವ ದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ತನ್ನ ನಿಶ್ಚಿತ ಠೇವಣಿಗಳ (fixed deposits) ಬಡ್ಡಿ ದರವನ್ನು ಏರಿಸಿದೆ. ೨ ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಇದು ಜುಲೈ ೨೮ರಿಂದ ಅನ್ವಯವಾಗಲಿದೆ. ಸಾಮಾನ್ಯ ನಾಗರಿಕರಿಗೆ ೩-೫.೫೦% ಹಾಗೂ ಹಿರಿಯ ನಾಗರಿಕರಿಗೆ ೩.೫-೬.೫೦%ರ ಶ್ರೇಣಿಯಲ್ಲಿ ನಿಶ್ಚಿತ ಠೇವಣಿಗೆ ಬಡ್ಡಿ ದರ ಅನ್ವಯವಾಗಲಿದೆ. ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್, ಪಿಎನ್‌ಬಿಯಲ್ಲಿ ಠೇವಣಿಗಳ ದರ ಏರಿಕೆ ಬಳಿಕ ಇದೀಗ ಬ್ಯಾಂಕ್ ಆಫ್ ಬರೋಡಾದಲ್ಲಿ ಎಫ್‌ಡಿ ಬಡ್ಡಿ ದರ ಏರಿಕೆಯಾಗಿದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ೨ ಕೋಟಿ ರೂ.ಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಯ (ಎಫ್.ಡಿ) ಬಡ್ಡಿ ದರ ಇಂತಿದೆ.
ಅವಧಿ | ಸಾಮಾನ್ಯ ನಾಗರಿಕರಿಗೆ | ಹಿರಿಯ ನಾಗರಿಕರಿಗೆ |
46-90 ದಿನಗಳು | 4% | 4.50% |
91-180 ದಿನಗಳು | 4% | 4.50% |
181-270 ದಿನಗಳು | 4.65% | 5.15% |
271-1 ವರ್ಷದ ಒಳಗೆ | 4.65% | 5.15% |
1 ವರ್ಷ | 5.30% | 5.80% |
1 ವರ್ಷ ಮೇಲ್ಪಟ್ಟು | 5.45% | 5.95% |
1 ವರ್ಷ-400 ದಿನ | 5.45% | 5.95% |
400 ದಿನ-2 ವರ್ಷಗಳು | 5.45% | 5.95% |
2-3 ವರ್ಷಗಳು | 5.50% | 6% |
3-5 ವರ್ಷಗಳು | 5.50% | 6% |