Site icon Vistara News

Bank strike : ಬಜೆಟ್‌ಗೆ ಮುನ್ನ ಜನವರಿ 30ರಿಂದ ಎರಡು ದಿನಗಳ ಬ್ಯಾಂಕ್‌ ಮುಷ್ಕರ

strike

ಹೈದರಾಬಾದ್:‌ ಕೇಂದ್ರ ಬಜೆಟ್‌ಗೆ ಮುನ್ನ ಬ್ಯಾಂಕ್‌ ನೌಕರರ ಒಕ್ಕೂಟಗಳು ಜನವರಿ 30ರಿಂದ ಎರಡು ದಿನಗಳ (Bank strike) ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿವೆ.

ಆಲ್‌ ಇಂಡಿಯಾ ಬ್ಯಾಂಕ್‌ ಎಂಪ್ಲಾಯೀಸ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಸಿಎಚ್‌ ವೆಂಕಟಾಚಲಮ್‌ ಈ ವಿಷಯ ತಿಳಿಸಿದ್ದಾರೆ.

ಬ್ಯಾಂಕ್‌ ನೌಕರರ ಒಕ್ಕೂಟಗಳಾದ ಎಐಬಿಎಫ್‌ಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಇಎಫ್‌ಐ, ಐಎನ್‌ಬಿಇಎಫ್‌, ಐಎನ್‌ಬಿಒಸಿ, ಎನ್‌ಒಬಿಡಬ್ಲ್ಯು, ಎನ್‌ಒಬಿಒ ಮುಷ್ಕರಕ್ಕೆ ಕರೆ ನೀಡಿವೆ. ಕೇಂದ್ರ ಬಜೆಟ್‌ ಫೆ.1ಕ್ಕೆ ಮಂಡನೆಯಾಗಲಿದೆ.

ಬೇಡಿಕೆಗಳೇನು?

ಐದು ದಿನಗಳ ಬ್ಯಾಂಕಿಂಗ್‌, ಪಿಂಚಣಿ ಹೆಚ್ಚಳ, ಎನ್‌ಪಿಎಸ್‌ ರದ್ದತಿ, ವೇತನ ಪರಿಷ್ಕರಣೆ, ಖಾಲಿ ಹುದ್ದೆಗಳ ಭರ್ತಿಗೆ ಕಾರ್ಮಿಕ ಒಕ್ಕೂಟಗಳು ಒತ್ತಾಯಿಸಿ ಜ.30-31ಕ್ಕೆ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.

Exit mobile version