ಪಣಜಿ: ಗೋವಾದಲ್ಲಿ ಬಿಯರ್ ದರ (Beer) ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಇದರ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 10-12 ರೂ. ಏರಿಸಿರುವ ಹಿನ್ನೆಲೆಯಲ್ಲಿ ದುಬಾರಿಯಾಗುತ್ತಿದೆ.
ಗೋವಾ ಲಿಕ್ಕರ್ ಟ್ರೇಡರ್ಸ್ ಅಸೋಸಿಯೇಶನ್ ಅಧ್ಯಕ್ಷ ದತ್ತಾ ಪ್ರಸಾದ್ ನಾಯಕ್ ಪ್ರಕಾರ, ಲೈಟ್ ಬಿಯರ್ ದರದಲ್ಲಿ ಲೀಟರ್ಗೆ 15 ರೂ. ಏರಿಕೆಯಾಗಲಿದೆ. ಸ್ಟ್ರಾಂಗ್ ಬಿಯರ್ ದರದಲ್ಲಿ 20-25 ರೂ. ಏರಿಕೆಯಾಗಲಿದೆ. ಪ್ರೀಮಿಯಂ ಬಿಯರ್ ದರದಲ್ಲಿ ಪ್ರತಿ ಬಾಟಲಿಗೆ 30 ರೂ. ಏರಿಕೆಯಾಗಲಿದೆ.
ಗೋವಾದಲ್ಲಿ ಸ್ಥಳೀಯ ಗ್ರಾಹಕರು ಹಾಗೂ ಪ್ರವಾಸಿಗರು ಭಾರತದಲ್ಲಿ ತಯಾರಾಗುವ “ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ಸ್ಗೆ (ಐಎಂಎಫ್ಎಲ್) ಆದ್ಯತೆ ನೀಡುತ್ತಾರೆ.