ಬೆಂಗಳೂರು: ಎಂಜಿನಿಯರಿಂಗ್ ಕಂಪನಿ ಬಾಷ್ ಲಿಮಿಟೆಡ್, 2022-23ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) 372.4 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬಾಷ್, 372 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಈ ಸಲ ಜುಲೈ-ಸೆಪ್ಟೆಂಬರ್‌ನಲ್ಲಿ ಬಾಷ್, 3,661 ಕೋಟಿ ರೂ. ಆದಾಯ ಗಳಿಸಿತ್ತು.
ಸೆಮಿಕಂಡಕ್ಟರ್ ಚಿಪ್‌ಗಳ ಪೂರೈಕೆ ಸುಗಮವಾಗಿರುವ ಹಿನ್ನೆಲೆಯಲ್ಲಿ ಬಾಷ್ ಲಿಮಿಟೆಡ್‌ಗೆ ವಹಿವಾಟು ಮತ್ತು ಆದಾಯ ಗಳಿಕೆ ವೃದ್ಧಿಸಿದೆ. ಆಟೊಮೊಬೈಲ್ ಉದ್ದಿಮೆಯಲ್ಲೂ ಬೇಡಿಕೆ ಸುಧಾರಿಸಿತ್ತು.