Site icon Vistara News

Business guide : 50,000 ರೂ. ಹೂಡಿಕೆಯಲ್ಲಿ ಮಾಡಬಹುದಾದ ಬಿಸಿನೆಸ್‌ ಐಡಿಯಾ

business idea for 2024

ಬೆಂಗಳೂರು: ನಿಮಗೆ ಭವಿಷ್ಯದಲ್ಲಿ ದೊಡ್ಡ ಆಂತ್ರೆಪ್ರೆನ್ಯೂರ್‌ ಅಥವಾ ಉದ್ಯಮಿ ಆಗಬೇಕು (Business guide) ಎಂಬ ಕನಸಿದ್ದರೆ, ಕನಸು ಕಾಣುವುದನ್ನು ಬಿಡಬೇಡಿ. ಅದಕ್ಕಾಗಿ ಸಣ್ಣ ಮಟ್ಟಿನ ಹೂಡಿಕೆಯಿಂದಲೇ ಮೊದಲ ಹೆಜ್ಜೆಯನ್ನು ಇಡಬಹುದು. ನೀವು ಕೇವಲ 50,000 ರೂ. ಗಳ ಸಣ್ಣ ಬಂಡವಾಳದಿಂದಲೇ ನಿಮ್ಮದೇ ಸ್ವಂತ ಬಿಸಿನೆಸ್‌ ಶುರು ಮಾಡಬಹುದು. ಆದಾಯ ಮತ್ತು ಲಾಭ ಗಳಿಸಿ ಮುಂದೊಂದು ದಿನ ದೊಡ್ಡ ಇಂಡಸ್ಟ್ರಿಯಲಿಸ್ಟ್‌ ಕೂಡ ಆಗಬಹುದು. ಈ ನಿಟ್ಟಿನಲ್ಲಿ ಕೆಲವು ಐಡಿಯಾಗಳನ್ನು ನೋಡೋಣ. ಈ ಬಿಸಿನೆಸ್‌ ಐಡಿಯಾಗಳ ವಿಶೇಷ ಏನೆಂದರೆ ಕೇವಲ 50,000 ರೂ. ಆಸುಪಾಸಿನ ಬಂಡವಾಳ ಸಾಕು. ಎರಡನೆಯದಾಗಿ ಈಗಿನ ಮಾರುಕಟ್ಟೆಯಲ್ಲಿ ಅತಿ ಬೇಡಿಕೆಯನ್ನೂ ಒಳಗೊಂಡಿರುವ ಬಿಸಿನೆಸ್‌ ಐಡಿಯಾಗಳು ಇದಾಗಿವೆ.

  1. ಟಿಫಿನ್‌ ಸರ್ವೀಸ್:‌ ನೀವು ಅಡುಗೆ ಪ್ರಿಯರಾಗಿದ್ದರೆ ಮನೆಯಲ್ಲೇ ಉತ್ತಮ ಊಟವನ್ನು ತಯಾರಿಸಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ನೀಡಬಹುದು. ಗುಣಮಟ್ಟದ ಪಾತ್ರೆಗಳು, ಡೆಲಿವರಿ ಕಂಟೈನರ್‌ಗಳು ಹಾಗೂ ಧವಸ ಧಾನ್ಯಗಳಿಗೆ, ಸಂಬಾರ ಪದಾರ್ಥಗಳಿಗೆ ಶುರುವಿನಲ್ಲಿ 50,000 ರೂ. ತನಕ ಹೂಡಿಕೆ ಮಾಡಿಯೂ ಈ ಟಿಫಿನ್‌ ಸರ್ವೀಸ್‌ ಆರಂಭಿಸಬಹುದು.
  2. ಟ್ಯೂಷನ್‌ ಸರ್ವೀಸ್:‌ ನೀವು ನಿರ್ದಿಷ್ಟ ವಿಷಯಗಳಲ್ಲಿ ತಜ್ಞರಾಗಿದ್ದರೆ ಮಕ್ಕಳಿಗೆ ಟ್ಯೂಷನ್‌ ಸೇವೆಯನ್ನು ಒದಗಿಸಬಹುದು. ಎಜ್ಯುಕೇಶನಲ್‌ ಮೆಟೀರಿಯಲ್‌ಗಳಿಗೆ, ಜಾಹೀರಾತುಗಳಿಗೆ ಹಾಗೂ ಸ್ಥಳಾವಕಾಶ ಸಿದ್ಧತೆಗೆ 50,000 ರೂ. ಒಳಗೆ ಖರ್ಚಿರುತ್ತದೆ.
  3. ಪೋಟರಿ ಅಥವಾ ಕುಂಬಾರಿಕೆ: ನೀವು ಕುಂಬಾರಿಕೆಯ ಉದ್ದಿಮೆಯಲ್ಲೂ ಸಣ್ಣ ಬಂಡವಾಳದಿಂದ ಬಿಸಿನೆಸ್‌ ಶುರು ಮಾಡಬಹುದು. ಇದಕ್ಕೆ ಚಕ್ರ, ಗೂಡು ಮತ್ತು ಗುಣಮಟ್ಟದ ಮಣ್ಣಿನ ಅಗತ್ಯ ಇರುತ್ತದೆ. ಸ್ಥಳೀಯ ವಸ್ತುಪ್ರದರ್ಶನ ಮೇಳಗಳು, ಸಂತೆಗಳು, ಆನ್‌ಲೈನ್‌ ಪ್ಲಾಟ್‌ ಫಾರ್ಮ್‌ಗಳಲ್ಲಿಯೂ ನೀವು ಮಾರಾಟ ಮಾಡಬಹುದು.
  4. ಫುಡ್‌ ಸ್ಟಾಲ್‌ :‌ ನೀವು ಸಣ್ಣ ಫುಡ್‌ ಸ್ಟಾಲ್‌ ಮೂಲಕ 50 ಸಾವಿರ ಬಂಡವಾಳದಲ್ಲಿ ಸ್ಥಳೀಯ ಊಟೋಪಚಾರಗಳ ಬಿಸಿನೆಸ್‌ ಆರಂಭಿಸಬಹುದು. ಸರಿಯಾದ ಸ್ಥಳದಲ್ಲಿ ಬೇಸಿಕ್‌ ಅಡುಗೆ ಸಲಕರಣೆಗಳನ್ನು ಬಳಸಿ ವ್ಯಾಪಾರ ಶುರು ಮಾಡಬಹುದು.
  5. ಫ್ರಾಂಚೈಸಿ ಬಿಸಿನೆಸ್: ನೀವು ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿರುವ ಬಿಸಿನೆಸ್‌ನಲ್ಲಿ ಇನ್ವೆಸ್ಟ್‌ ಮಾಡಲು ಬಯಸಿದರೆ, ಆಹಾರ ಮತ್ತು ಪಾನೀಯ, ರಿಟೇಲ್‌ ಅಥವಾ ಸರ್ವೀಸ್ ಕ್ಷೇತ್ರದಲ್ಲಿ 50 ಸಾವಿರ ರೂ.ಗೆ ಸಿಗುವ ಫ್ರಾಂಚೈಸಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.‌ ಹೀಗಿದ್ದರೂ ಫ್ರಾಂಚೈಸಿ ಟರ್ಮ್ಸ್‌, ಮಾರ್ಕೆಟ್‌ ಪೊಟೆನ್ಷಿಯಲ್‌ ಬಗ್ಗೆ ಮತ್ತು ನಿರೀಕ್ಷಿತ ಆದಾಯದ ಬಗ್ಗೆ ರಿಸರ್ಚ್‌ ನಡೆಸುವುದು ಇಲ್ಲಿ ಮುಖ್ಯ.
  6. ಫೊಟೊಗ್ರಫಿ: ನೀವು ಉತ್ತಮ ಗುಣಮಟ್ಟದ ಡಿಎಸ್‌ಎಲ್‌ ಆರ್‌ ಕ್ಯಾಮೆರಾ ಖರೀದಿಸಿ 50,000 ರೂ. ಆಸುಪಾಸಿನ ಬಂಡವಾಳದಲ್ಲಿ ಫೋಟೊಗ್ರಫಿ ಬಿಸಿನೆಸ್‌ ಆರಂಭಿಸಬಹುದು.
  7. ಹೈ ಕ್ವಾಲಿಟಿ ಸ್ಮಾರ್ಟ್‌ ಫೋನ್‌ ಖರೀದಿಸಿ ಸುಮಾರು 50,000 ರೂ. ವೆಚ್ಚದಲ್ಲಿ ನಿಮ್ಮದೇ ಯೂಟ್ಯೂಬ್‌ ಚಾನೆಲ್‌ ಅನ್ನೂ ಆರಂಭಿಸಿ ಹಣ ಸಂಪಾದಿಸಬಹುದು. ಸ್ಮಾರ್ಟ್‌ ಫೋನ್‌, ವಿಡಿಯೊ ಎಡಿಟಿಂಗ್‌ ಸಾಫ್ಟ್‌ವೇರ್‌ ಇದ್ದರೆ ಸಾಕು. ಯೂಟ್ಯೂಬ್‌ ಚಾನೆಲ್‌ ಆರಂಭಿಸಬಹುದು.
  8. ನೀವು ವೆಬ್‌ ಸೈಟ್‌ ಡಿಸೈನ್‌, ಕೋಡಿಂಗ್‌ ಸ್ಕಿಲ್‌ ಹೊಂದಿದ್ದರೆ ಸಣ್ಣ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಹಾಗೂ ವೆಬ್‌ ಡಿಸೈನ್‌ ಸೇವೆಯನ್ನು ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು. ಕೋಡಿಂಗ್‌ ಟ್ಯುಟೋರಿಯಲ್ಸ್‌ ಅಥವಾ ಆನ್‌ಲೈನ್‌ ಕೋರ್ಸ್‌ ಅನ್ನು ಮಾಡಿ ಮಾರಾಟ ಮಾಡಬಹುದು.
  9. ರಿಯಲ್‌ ಎಸ್ಟೇಟ್‌ ಏಜೆಂಟ್:‌ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿಯೂ ನೀವು ಕಡಿಮೆ ಬಂಡವಾಳದಲ್ಲಿ ಬಿಸಿನೆಸ್‌ ಆರಂಭಿಸಬಹುದು. ಆರಂಭದಲ್ಲಿ ಜಾಹೀರಾತು ವೆಚ್ಚ ನಿಮಗೆ ಬರಬಹುದು. ಪ್ರಾಪರ್ಟಿ ಮಾಲೀಕರು, ಸ್ಥಳೀಯ ಬಿಸಿನೆಸ್‌ ವಲಯದ ಜತೆ ಸೌಹಾರ್ದ ಸಂಬಂಧ, ನೆಟ್‌ ವರ್ಕ್‌ ಇಲ್ಲಿ ಮುಖ್ಯವಾಗುತ್ತದೆ. ಸಂಭವನೀಯ ಗ್ರಾಹಕರನ್ನು ಸಂಪರ್ಕಿಸಲು ಜಾಹೀರಾತು ನೀಡಬಹುದು.
  10. ಹ್ಯಾಂಡ್‌ ಮೇಡ್‌ ಜ್ಯುವೆಲ್ಲರಿ: ಕೈಯಲ್ಲೇ ತಯಾರಿಸುವ ಜ್ಯುವೆಲ್ಲರಿ ಬಿಸಿನೆಸ್‌ ಅನ್ನು ನೀವು ಆರಂಭಿಸಬಹುದು. ಇಲ್ಲಿ ನಿಮ್ಮ ಕ್ರಿಯೇಟಿವಿಟಿಯೇ ಬಂಡವಾಳ. ಇಂಥ ಉತ್ಪನ್ನಗಳಿಗೆ ಆನ್‌ ಲೈನ್‌ನಲ್ಲೂ ಮಾರ್ಕೆಟ್‌ ಕಂಡುಕೊಳ್ಳಬಹುದು.
  11. ಆನ್‌ಲೈನ್‌ ದಿನಸಿ ಅಥವಾ ಗ್ರೋಶರಿ ವ್ಯಾಪಾರ: ಭಾರತದಲ್ಲಿಂದು ಡಿಜಿಟೈಸೇಶನ್‌ ವ್ಯಾಪಕವಾಗಿದೆ. ನೀವು ದಿನಸಿ ವಸ್ತುಗಳು, ಹಣ್ಣು-ತರಕಾರಿಗಳನ್ನೂ ಆನ್‌ಲೈನ್‌ ಮೂಲಕ ಮಾರಬಹುದು. ಎಫ್‌ಎಸ್‌ಎಸ್‌ಎ ರಿಜಿಸ್ಟ್ರೇಶನ್‌, ವೆಬ್‌ ಸೈಟ್‌ ಸಲುವಾಗಿ ಇಲ್ಲಿ ಇನ್ವೆಸ್ಟ್‌ ಮಾಡಬೇಕಾಗುತ್ತದೆ.
  12. ಉಪ್ಪಿನಕಾಯಿ ತಯಾರಿಕೆ ಕೂಡ ಇಂದು ದೊಡ್ಡ ಉದ್ದಿಮೆಯಾಗಿದೆ. ಮನೆಯಿಂದಲೇ ತಯಾರಿಸಿ ಪ್ಯಾಕ್‌ ಮಾಡಿ ಮಾರಬಹುದು. ಆನ್‌ಲೈನ್‌ನಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.
  13. ಮನೆಯಲ್ಲಿಯೇ ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಡ್ರೈ ಫ್ರುಟ್‌ನಿಂದ ತಯಾರಿಸಿದ ಸಿಹಿ ತಿನಿಸುಗಳಿಗೂ ಈಗ ಬೇಡಿಕೆ ಇದೆ. ಇದನ್ನೂ ಆನ್‌ಲೈನ್‌ ಮೂಲಕ ಮಾರಬಹುದು.

ಸಣ್ಣ ಬಂಡವಾಳದಲ್ಲಿ ಬಿಸಿನೆಸ್‌ ಶುರು ಮಾಡಲು ಎನ್‌ಜಿಒಗಳೂ ಉವಿತವಾಗಿ ತರಬೇತಿ ನೀಡುತ್ತವೆ. ಸ್ಥಳೀಯ ವಸ್ತು ಪ್ರದರ್ಶನ ಮೇಳಗಳಲ್ಲೂ ನಿಮಗೆ ಅಗತ್ಯ ಮಾಹಿತಿ ಸಿಗುತ್ತವೆ. ಯೂಟ್ಯೂಬ್‌ ಚಾನೆಲ್‌ ಮೂಲಕವೂ ಕಲಿಯಲು ಬೇಕಾದಷ್ಟು ವಿಚಾರಗಳು, ಐಡಿಯಾಗಳು ಸಿಗುತ್ತವೆ. ಅವುಗಳ ಮೂಲಕ ಸ್ವಂತ ಬಿಸಿನೆಸ್‌ ಮಾಡಿ ಯಶಸ್ವಿಯಾಗಬಹುದು.

Exit mobile version