ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಹಾಗೂ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿ ದರ ಏರಿಕೆಯಾಗಿವೆ.
ಆರು ತಿಂಗಳು ಮತ್ತು 1 ವರ್ಷ ಅವಧಿಗೆ ಬಡ್ಡಿ ದರದಲ್ಲಿ ಅನುಕ್ರಮವಾಗಿ 7.30%ರಿಂದ 7.35%ಕ್ಕೆ ಹಾಗೂ 7.35%ರಿಂದ 7.40ಕ್ಕೆ ಏರಿಕೆಯಾಗಿದೆ. ಇತರ ಅವಧಿಯ ದರಗಳು ಯಥಾಸ್ಥಿತಿಯಲ್ಲಿದೆ.
ಕೆನರಾ ಬ್ಯಾಂಕ್ ವೆಬ್ ಸೈಟ್ ಪ್ರಕಾರ ಜೂನ್ 7ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ ಹಾಗೂ ಹೊಸ ಸಾಲಗಳಿಗೆ ಮಾತ್ರ ಜಾರಿಯಾಗಲಿದೆ.
ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿ ದರದಲ್ಲಿ 0.35% ಏರಿಸಿದೆ. ಇದರಿಂದ ಬ್ಯಾಂಕಿನ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಮತ್ತು ಕಾರ್ಪೊರೇಟ್ ಸಾಲಗಳ ಇಎಂಐನಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಆರ್‌ಬಿಐನಿಂದ ಜೂನ್ 8ಕ್ಕೆ ಮತ್ತೆ ಬಡ್ಡಿ ದರ 0.40% ಹೆಚ್ಚಳ ಸಂಭವ