Site icon Vistara News

ಕೆನರಾ ಬ್ಯಾಂಕ್‌ನಿಂದ 333 ದಿನಗಳ ಅವಧಿಯ ನೂತನ ಎಫ್‌ಡಿ ಯೋಜನೆ ಬಿಡುಗಡೆ

canara bank

canara bank

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ೩೩೩ ದಿನಗಳ ಅವಧಿಯ ನೂತನ ಫಿಕ್ಸೆಡ್‌ ಡಿಪಾಸಿಟ್‌ (ನಿಶ್ಚಿತ ಠೇವಣಿ) ಯೋಜನೆಯನ್ನು ಆರಂಭಿಸಿದೆ. ಇದರ ಬಡ್ಡಿ ದರ 5.10% ಆಗಿದೆ.

೨೦೨೨ರ ಜೂನ್‌ ೨೩ರಿಂದ ಈ ನಿಶ್ಚಿತ ಠೇವಣಿ ಯೋಜನೆ ಚಾಲ್ತಿಗೆ ಬಂದಿದೆ. ಇದು ಸಗಟು ಠೇವಣಿಗೆ ಲಭ್ಯವಿಲ್ಲ. ನಾನಾ ಅವಧಿಯ ನಿಶ್ಚಿತ ಠೇವಣಿಗೆ 2.90%ರಿಂದ ೫.೭೫% ಬಡ್ಡಿದರವನ್ನು ಬ್ಯಾಂಕ್‌ ಹೊಂದಿದೆ.

ಕೆನರಾ ಟ್ಯಾಕ್ಸ್‌ ಸೇವರ್‌ ಡಿಪಾಸಿಟ್‌ ಪ್ರೋಗ್ರಾಮ್‌ ಅಡಿಯಲ್ಲಿ ಬ್ಯಾಂಕ್‌ 5.75% ಬಡ್ಡಿ ನೀಡುತ್ತದೆ. ಇದರಡಿಯಲ್ಲಿ ಗರಿಷ್ಠ ೧.೫ ಲಕ್ಷ ರೂ. ಹೂಡಿಕೆ ಮಾಡಬಹುದು.

Exit mobile version