Site icon Vistara News

Vivek Bindra: ಹೆಂಡತಿಗೆ ಹೊಡೆದ ಮೊಟಿವೇಶನಲ್‌ ಸ್ಪೀಕರ್‌ ವಿವೇಕ್ ಬಿಂದ್ರಾ ವಿರುದ್ಧ ಎಫ್‌ಐಆರ್‌!

Motivational speaker Vivek Bindra

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಅತ್ಯಂತ ಪ್ರಭಾವಿ ಎಂದೆನಿಸಿಕೊಂಡಿದ್ದ ವಿವೇಕ್ ಬಿಂದ್ರಾ (Vivek Bindra) ವಿರುದ್ಧ ಕೇಸ್‌ ದಾಖಲಾಗಿದೆ. ಪತ್ನಿ ಯಾನಿಕಾ ಬಿಂದ್ರಾ ಅವರ ಮೇಲೆ ವಿವೇಕ್ ಬಿಂದ್ರಾ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ವಿವೇಕ್ ಬಿಂದ್ರಾ ವಿರುದ್ಧ ಯಾನಿಕಾ ಬಿಂದ್ರಾ ಸಹೋದರ ವೈಭವ್‌ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ವಿವೇಕ್ ಮತ್ತು ಯಾನಿಕಾ ಅವರು 2023ರ ಡಿಸೆಂಬರ್ 6ರಂದು ಮದುವೆ ಆಗಿದ್ದರು.

ಯಾನಿಕಾ ಬಿಂದ್ರಾ ಸಹೋದರ ವೈಭವ್‌ ತಮ್ಮ ದೂರಿನಲ್ಲಿ, ʻʻಆರೋಪಿ ವಿವೇಕ್ ಬಿಂದ್ರಾ ಅವರು ನನ್ನ ತಾಯಿಯೊಂದಿಗೆ ಜಗಳವಾಡಿದ್ದಾನೆ. ಅಷ್ಟೇ ಅಲ್ಲದೇ ವಿವೇಕ್ ಬಿಂದ್ರಾ ಸಹೋದರಿ ಮಧ್ಯಪ್ರವೇಶಿಸಿದ್ದಾಗ ಜಗಳ ಇನ್ನಷ್ಟು ತಾರಕ್ಕೇರಿತ್ತು. ನನ್ನ ಭಾವ ಕೂಡ ನನ್ನ ಸಹೋದರಿ ಯಾನಿಕಾ ಬಿಂದ್ರಾ ಅವರನ್ನು ಕೋಣೆಯಲ್ಲಿ ಕೂಡಿಟ್ಟು ಬೀಗ ಹಾಕಿದ್ದ. ದೈಹಿಕವಾಗಿಯೂ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮವಾಗಿ ಆಕೆಯ ದೇಹ ತುಂಬ ಗಾಯಗಳಾಗಿವೆ. ಆಕೆಯ ಮೈತುಂಬ ಗಾಯಗಳಾದ ಕಾರಣ ದೆಹಲಿಯ ಕೈಲಾಶ್ ದೀಪಕ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವಳ ಕಿವಿ ತೀವ್ರವಾಗಿ ಗಾಯವಾಗಿದೆ. ಸದ್ಯದ ಮಟ್ಟಿಗೆ ಕಿವಿಯೂ ಕೇಳಿಸುತ್ತಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ. ಹಲ್ಲೆಯ ವೇಳೆ ವಿವೇಕ್ ಬಿಂದ್ರಾ ಅವರು ಸಹೋದರಿಯ ಫೋನ್ ಕೂಡ ಒಡೆದಿದ್ದಾನೆ ಎಂದು ಹೇಳಿದ್ದಾರೆ. ನೋಯ್ಡಾ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: LPG Price: ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬೆಲೆ 39.50 ರೂ. ಇಳಿಕೆ

ವಿವೇಕ್ ಬಿಂದ್ರಾ ಅವರು ತನ್ನ ಮೊಟಿವೇಶನಲ್‌ ಸ್ಪೀಚ್‌ ಮೂಲಕ ಖ್ಯಾತಿ ಗಳಿಸಿದ್ದರು. ಜನಪ್ರಿಯ ಯೂಟ್ಯೂಬರ್, ಮಾತ್ರವಲ್ಲ ಬಡಾ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ (BBPL)ನ ಸಿಇಒ ಕೂಡ ಹೌದು. ಅವರನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಯೂಟ್ಯೂಬರ್ ಸಂದೀಪ್ ಮಹೇಶ್ವರಿ ಅವರು ಬಿಂದ್ರಾ ಅವರ ಆಪಾದಿತ ಹಗರಣದ ಬಗ್ಗೆ ವಿಡಿಯೊ ಮೂಲಕ ರಿವೀಲ್‌ ಮಾಡಿದ್ದರು.

ಮಹೇಶ್ವರಿ ಅವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ “ಅನ್ವೇಲಿಂಗ್ ಎ ಮೇಜರ್ ಸ್ಕ್ಯಾಮ್” ಎಂಬ ಶೀರ್ಷಿಕೆಯ ಅಡಿ, ಬಿಂದ್ರಾ ಅವರ ಸ್ಕ್ಯಾಮ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಬಿಂದ್ರಾ ಮಾತ್ರ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದರು. ಈ ಮಧ್ಯೆ, ವಿಡಿಯೊ ಡಿಲೀಟ್‌ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮಹೇಶ್ವರಿ ಹೇಳಿಕೊಂಡಿದ್ದರು. ಆದರೆ, ವೀಕ್ಷಕರು ಮಹೇಶ್ವರಿ ಅವರಿಗೆ ಬೆಂಬಲ ಸೂಚಿಸಿದ ಕಾರಣ ವಿಡಿಯೊಗಳನ್ನು ಡಿಲೀಟ್‌ ಮಾಡಿರಲಿಲ್ಲ. ಸಂದೀಪ್ ಮಹೇಶ್ವರಿ ಅವರ ಈ ವಿಡಿಯೊಗಳಿಗೆ ವ್ಯಾಪಕವಾಗಿ ಮೆಚ್ಚುಗೆಗಳು ಬಂದಿದ್ದವು.

Exit mobile version