ಕಳೆದ ಸೋಮವಾರದಿಂದ ಇಳಿಮುಖವಾಗಿದ್ದ ಚಿನ್ನದ ಬೆಲೆ ಜೂ.16, ಶುಕ್ರವಾರದಂದು ಏರಿದೆ. ಅದೇ ಬೆಲೆಯೇ ಇವತ್ತೂ (Gold Rate Today) ಕೂಡ ಮುಂದುವರಿದಿದೆ. ಇನ್ನು ಬೆಳ್ಳಿ ಬೆಲೆ ಕಳೆದವಾರವೆಲ್ಲ ಇಳಿಕೆಯಾಗಿತ್ತು. ಆದರೆ ಇಂದು ಏರಿಕೆಯಾಗಿದೆ. ಶುಕ್ರವಾರ ಸಂಜೆಯ ಹೊತ್ತಿಗೆ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿತ್ತು. ಗುಡ್ ರಿಟರ್ನ್ ವೆಬ್ಸೈಟ್ ಪ್ರಕಾರ ಶುಕ್ರವಾರ, 22 ಕ್ಯಾರೆಟ್ನ, 10 ಗ್ರಾಂ ಚಿನ್ನದ ಬೆಲೆ 400 ರೂ.ಏರಿಕೆಯಾಗಿತ್ತು. ಹಾಗೇ, 24 ಕ್ಯಾರೆಟ್ನ, 10 ಗ್ರಾಂ ಚಿನ್ನದ ದರ 440 ರೂ.ಹೆಚ್ಚಳವಾಗಿತ್ತು. ಇಂದು, ಶನಿವಾರ-ಜೂನ್ 17ದಂದು ಯಾವುದೇ ಬದಲಾವಣೆ ಆಗಿಲ್ಲ.
ಗುಡ್ ರಿಟರ್ನ್ಸ್ ಪ್ರಕಾರ ಇಂದು ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 55,100 ರೂ. ಹಾಗೇ, 1 ಗ್ರಾಂಗೆ, 5,510 ರೂ., 8 ಗ್ರಾಂ ಚಿನ್ನಕ್ಕೆ 44,080 ರೂ. ಹಾಗೂ 100 ಗ್ರಾಂ ಚಿನ್ನದ ಬೆಲೆ 5,51,000 ರೂ. ಇದೆ. 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 6011 ರೂ., 100 ಗ್ರಾಂ.ಗೆ 48,088 ರೂ., 10 ಗ್ರಾಂ.ಗೆ 60,110 ರೂ. ಮತ್ತು 100 ಗ್ರಾಂ ಚಿನ್ನದ ದರ 6,01,100 ರೂಪಾಯಿ ಇದೆ. ಹಾಗೇ, ಬೆಳ್ಳಿಯ ಬೆಲೆ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 400 ರೂ.ಹೆಚ್ಚಳವಾಗಿದೆ. 1 ಗ್ರಾಂ.ಗೆ 73.50 ರೂಪಾಯಿ ಆಗಿದೆ. 8 ಗ್ರಾಂ-588 ರೂ., 10 ಗ್ರಾಂ ಬೆಳ್ಳಿಯ ಬೆಲೆ 735 ರೂ., 100 ಗ್ರಾಂಗೆ 7350 ರೂ., 1 ಕೆಜಿ ಬೆಳ್ಳಿ ಬೆಲೆ 73,500 ರೂ. ಇದೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ
ಬೆಂಗಳೂರಿನಲ್ಲೂ ಕೂಡ ನಿನ್ನೆ ಇದ್ದ ದರಕ್ಕೂ, ಇಂದಿಗೂ ಯಾವುದೇ ಬದಲಾವಣೆ ಸದ್ಯ ಆಗಿಲ್ಲ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಇಂದು 55,150 ರೂಪಾಯಿ ಇದೆ. ಇದರ ಹೊರತಾಗಿ 1 ಗ್ರಾಂ.ಗೆ 5515 ರೂ., 8 ಗ್ರಾಂ.ಗೆ-44,120 ರೂ., ಮತ್ತು 100 ಗ್ರಾಂ.ಗೆ 5.51,500 ರೂಪಾಯಿ ಆಗಿದೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 440 ರೂ. ಏರಿಕೆ, ಬೆಳ್ಳಿಯ ದರ 1,250 ರೂ. ಅಗ್ಗ
ಹಾಗೇ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ ಇಂದು 60,160 ರೂ.ಇದೆ. 1 ಗ್ರಾಂ.ಗೆ 6,016 ರೂ, 8 ಗ್ರಾಂ.ಗೆ 48,128 ರೂಪಾಯಿ ಮತ್ತು., 100 ಗ್ರಾಂ ಚಿನ್ನದ ಬೆಲೆ 6,01,600 ರೂಪಾಯಿಯಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಕೆಜಿಗೆ 1500 ರೂಪಾಯಿ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ 74.50 ರೂ., 8 ಗ್ರಾಂ.ಗೆ 596 ರೂ., 10 ಗ್ರಾಂ.ಗೆ 745 ರೂ., 100 ಗ್ರಾಂ.ಗೆ 7450 ರೂ., 1 ಕೆಜಿಗೆ 74, 500 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಜೂ.16ರಂದು ಬೆಳ್ಳಿ ಬೆಲೆ ಕೆಜಿಗೆ 73000 ರೂಪಾಯಿ ಇತ್ತು.