ಚೆನ್ನೈ: ಈ ಹಿಂದೆ ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಿರುವಂತೆ ಆಹಾರ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಹಣದುಬ್ಬರ (Inflation) ಕೂಡ ತಗ್ಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆ ಇಳಿಕೆಯಾಗುತ್ತಿದೆ. ಆಹಾರ ವಸ್ತುಗಳ ದರ ಕೂಡ ತಗ್ಗಲಿದೆ. ಇದರ ಪರಿಣಾಮ ಹಣದುಬ್ಬರ ಕಡಿಮೆಯಾಗಲಿದೆ. ಈ ವರ್ಷ 6%ಕ್ಕಿಂತ ಕೆಳಕ್ಕೆ ಹಾಗೂ ಮುಂದಿನ ವರ್ಷ 4%ಕ್ಕೆ ಇಳಿಯಲಿದೆ. ಕಳೆದ ಕೆಲವು ತಿಂಗಳುಗಳಿಂದ ವ್ಯಾಪಾರ ಕೊರತೆ ಕೂಡ ತಗ್ಗುತ್ತಿದೆ ಎಂದು ಅವರು ಹಣಕಾಸು ಇಲಾಖೆಯ ಕಾರ್ಯಕ್ರಮದಲ್ಲಿ ಗುರುವಾರ ತಿಳಿಸಿದ್ದಾರೆ.
ಖಾಸಗಿ ಆರ್ಥಿಕ ಸಮೀಕ್ಷೆಗಳ ಪ್ರಕಾರ ಕೂಡ ವಿತ್ತೀಯ ಕೊರತೆ ಜಿಡಿಪಿಯ 2.4%ರಿಂದ 2%ಕ್ಕೆ ಇಳಿಕೆಯಾಗಲಿದೆ. ಜಾಗತಿಕ ಕಚ್ಚಾ ತೈಲ ದರ ಕೂಡ ತಗ್ಗುತ್ತಿದೆ.