Site icon Vistara News

Costly wedding gift: ಮಗನಿಗೆ ಬಂಗಲೆ, ಸೊಸೆಗೆ ನೆಕ್ಲೇಸ್ ಗಿಫ್ಟ್‌ ಕೊಟ್ಟ ಅಂಬಾನಿ; ಬೆಲೆ ಕೇಳಿದರೆ ಅಚ್ಚರಿ!

Costly wedding gift

ಭಾರತದ (India) ಅತ್ಯಂತ ಶ್ರೀಮಂತ ಹಾಗೂ ವಿಶ್ವದ (world) 11ನೇ ಶ್ರೀಮಂತ ವ್ಯಕ್ತಿಯಾಗಿರುವ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ( Nita Ambani ) ಅವರ ಕೊನೆಯ ಪುತ್ರ ಅನಂತ್ ಅಂಬಾನಿ (Anant Ambani) ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆದಿತ್ತು. ಸುಮಾರು 1,259 ಕೋಟಿ ರೂ .ಖರ್ಚು ಮಾಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವ ಮುಕೇಶ್, ನೀತಾ ದಂಪತಿ ತಮ್ಮ ಮಕ್ಕಳಿಗೆ ಮದುವೆಯ ಉಡುಗೊರೆಯಾಗಿ (Costly wedding gift) ಏನು ಕೊಟ್ಟಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಮುಕೇಶ್ ಮತ್ತು ನೀತಾ ತಮ್ಮ ಮಕ್ಕಳಿಗಾಗಿ ಖರ್ಚು ಮಾಡುವಾಗ ಯಾವುದೇ ರೀತಿಯಲ್ಲಿ ಉಳಿತಾಯದ ಕಡೆ ಗಮನ ಹರಿಸುವುದಿಲ್ಲ. ಅವರು ಧಾರಾಳವಾಗಿ ಖರ್ಚುಗಳನ್ನು ಮಾಡುತ್ತಾರೆ ಎಂಬುದನ್ನು ಅನಂತ್ ಅಂಬಾನಿಯ ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಮುಕೇಶ್, ನೀತಾ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಗಮನ ಸೆಳೆದಿದ್ದರು. ಇದೀಗ ಅವರ ಕಿರಿಯ ಸಹೋದರ ಅನಂತ್ ಅಂಬಾನಿ ಇತ್ತೀಚೆಗೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ದಾಂಪತ್ಯ ಜೀವನ ಪ್ರವೇಶ ಮಾಡುವುದನ್ನು ಘೋಷಿಸಿದ್ದರು. ಕಳೆದ ಜುಲೈ ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅನಂತ್, ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಮಾರ್ಚ್ ನಲ್ಲಿ ನಡೆಯಿತು. ಇದಕ್ಕಾಗಿ ಸುಮಾರು 1259 ಕೋಟಿ ರೂ. ಖರ್ಚು ಮಾಡಲಾಗಿತ್ತು.

ಇದನ್ನೂ ಓದಿ: Mukesh Ambani: ಪತ್ನಿ ನೀತಾ ಹಣೆಗೆ ಮುತ್ತಿಟ್ಟ ಮುಕೇಶ್ ಅಂಬಾನಿ: ರೊಮ್ಯಾಂಟಿಕ್‌ ಫೋಟೊಗಳು ವೈರಲ್‌!

ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಾಗಿ ಜಾಗತಿಕ ಐಕಾನ್ ರಿಹಾನ್ನಾ ಅವರನ್ನು ಕರೆದುಕೊಂಡು ಬರಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕಾಗಿ ಅವರು 66- 74 ಕೋಟಿ ರೂ. ಪಡೆದಿದ್ದರು. ಇನ್ನು ಮುಂದಿನ ಜುಲೈನಲ್ಲಿ ನಡೆಯುವ ವಿವಾಹ ಸಮಾರಂಭಕ್ಕಾಗಿ ಅಂಬಾನಿ ಕುಟುಂಬ ಮದುವೆ ವೆಚ್ಚವನ್ನು ದ್ವಿಗುಣಗೊಳಿಸಲು ಸಿದ್ಧರಾಗಿದ್ದಾರೆ.

ಅಂಬಾನಿ ಕುಟುಂಬದ ಇಶಾ ಅಂಬಾನಿಯ ಪತಿ ಆನಂದ್ ಪಿರಮಾಲ್ ಅವರು ಪಿರಮಲ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರು, ಹಾಗೆಯೇ ಆಕಾಶ್ ಅಂಬಾನಿಯ ಪತ್ನಿ ಶ್ಲೋಕಾ ಮೆಹ್ತಾ ಅವರು ವಜ್ರದ ಸಂಪತ್ತಿನ ವಾರಸುದಾರರು. ಅನಂತ್ ಅಂಬಾನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಎನ್ಕೋರ್ ಹೆಲ್ತ್‌ಕೇರ್‌ನ ನಿರ್ದೇಶಕರಾಗಿದ್ದಾರೆ.

ಭವ್ಯವಾದ ಸಂಪ್ರದಾಯದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಕ್ಕಳಿಗೆ ಹಲವು ವಿಶೇಷ ಮತ್ತು ದುಬಾರಿ ಉಡುಗೊರೆಗಳನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ.


ಅನಂತ್ ಅಂಬಾನಿಗಾಗಿ ಬೀಚ್-ವಿಲ್ಲಾ

ಅನಂತ್ ಅಂಬಾನಿಗಾಗಿ ದುಬೈನಲ್ಲಿ 640 ಕೋಟಿ ರೂ. ಮೌಲ್ಯದ ಬೀಚ್-ವಿಲ್ಲಾವನ್ನು ಖರೀದಿ ಮಾಡಿದ್ದಾರೆ ಮುಕೇಶ್. 2022ರ ಏಪ್ರಿಲ್ ನಲ್ಲಿ ಮುಕೇಶ್ ಅಂಬಾನಿ ತನ್ನ ಕಿರಿಯ ಮಗ ಅನಂತ್‌ಗಾಗಿ ದುಬೈನ ದುಬಾರಿ ಜಿಲ್ಲೆಯಾದ ಪಾಮ್ ಜುಮೇರಾದಲ್ಲಿ ವಿಸ್ತಾರವಾದ ಬೀಚ್‌ಫ್ರಂಟ್ ವಿಲ್ಲಾವನ್ನು ಖರೀದಿ ಮಾಡಿದ್ದರು. ಇದು 10 ಬೆಡ್‌ರೂಮ್‌ಗಳನ್ನು ಹೊಂದಿದೆ. 70 ಮೀಟರ್‌ಗಳಷ್ಟು ವ್ಯಾಪಿಸಿರುವ ಖಾಸಗಿ ಬೀಚ್‌ ಅನ್ನು ಒಳಗೊಂಡಿರುವ ಇದರ ಮೌಲ್ಯ 640 ಕೋಟಿ ರೂ.


ಶ್ಲೋಕಾ ಮೆಹ್ತಾಗೆ 451 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್

2019 ರಲ್ಲಿ ಶ್ಲೋಕಾ ಮೆಹ್ತಾ ಅವರೊಂದಿಗೆ ಆಕಾಶ್ ಅಂಬಾನಿ ಅವರ ವಿವಾಹದ ಸಂದರ್ಭದಲ್ಲಿ ನೀತಾ ಅಂಬಾನಿ ಅವರು ತಮ್ಮ ಸೊಸೆಗೆ ಮೌವಾದ್ ಎಲ್ ಅಪರೂಪದ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಮೌಲ್ಯ 451 ಕೋಟಿ ರೂ. 407.48 ಕ್ಯಾರೆಟ್ ಹಳದಿ ವಜ್ರವನ್ನು 18 ಕಾರಟ್ ಗುಲಾಬಿ ಚಿನ್ನದ ಕವಲುಗಳೊಂದಿಗೆ ಹೆಣೆದುಕೊಂಡಿರುವ 229.52 ಕ್ಯಾರೆಟ್ ಬಿಳಿ ವಜ್ರದ ನೆಕ್ಲೇಸ್‌ನಿಂದ ಅಲಂಕರಿಸಲಾಗಿತ್ತು.


ಅನಂತ್- ರಾಧಿಕಾಗೆ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗೆ 4.5 ಕೋಟಿ ರೂ. ನ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 2023ರಲ್ಲಿ ಅವರ ನಿಶ್ಚಿತಾರ್ಥದ ಮೊದಲು ರಾಧಿಕಾ ಮರ್ಚೆಂಟ್ ಅವರಿಗೆ ಸುಮಾರು 4.5 ಕೋಟಿ ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಟ್ವಿನ್- ಟರ್ಬೋಚಾರ್ಜ್ಡ್ 6.0 ಲೀಟರ್ W12 ಎಂಜಿನ್ ಹೊಂದಿದ ಈ ಐಷಾರಾಮಿ ಕಾರು ಅತ್ಯಂತ ಸುಂದರವಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.


ರಾಧಿಕಾ ಮರ್ಚೆಂಟ್‌ಗೆ ಮುತ್ತು ಮತ್ತು ವಜ್ರದ ಚೋಕರ್

ಜುಲೈ 2022 ರಲ್ಲಿ ನಡೆದ ಸಾಮಾಜಿಕ ಕಾರ್ಯಕ್ರಮದ ಸಂದರ್ಭದಲ್ಲಿ ರಾಧಿಕಾ ಮರ್ಚೆಂಟ್ ಅದ್ಭುತವಾದ ಮುತ್ತು ಮತ್ತು ವಜ್ರದ ಚೋಕರ್ ಅನ್ನು ಧರಿಸಿದ್ದರು, ಇದು ನೀತಾ ಅಂಬಾನಿ ಅವರು ಧರಿಸಿದ್ದ ಸೊಗಸಾದ ಚೋಕರ್ ಅನ್ನು ನೆನಪಿಸುತ್ತದೆ. ಇದರ ನಿಖರವಾದ ಮೌಲ್ಯವನ್ನು ಬಹಿರಂಗಪಡಿಸಲಾಗಿಲ್ಲವಾದರೂ ಇದು ನಿಸ್ಸಂದೇಹವಾಗಿ ತನ್ನ ಭಾವಿ ಸೊಸೆಗೆ ನೀತಾ ಅಂಬಾನಿಯಿಂದ ಅಮೂಲ್ಯವಾದ ಉಡುಗೊರೆಯಾಗಿದೆ ಎನ್ನಲಾಗುತ್ತದೆ.


ಇಶಾ ಅಂಬಾನಿಗಾಗಿ ಮದುವೆಗೆ 100 ಮಿಲಿಯನ್ ಡಾಲರ್ ಖರ್ಚು

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ವಿವಾಹ 2018 ರಲ್ಲಿ ನಡೆದಿದೆ. ಇದವಿಶ್ವದ ಅತ್ಯಂತ ಅದ್ದೂರಿ ವಿವಾಹಗಳಲ್ಲಿ ಒಂದಾಗಿದೆ. ಇದಕ್ಕಾಗಿ ಅಂಬಾನಿ ಕುಟುಂಬ ಸುಮಾರು 100 ಮಿಲಿಯನ್ ಡಾಲರ್ ಅಂದಾಜು 830 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಯೊಂದೂ ಆಮಂತ್ರಣ ಕಾರ್ಡ್ ನ ಬೆಲೆ 3 ಲಕ್ಷ ರೂ. ಎನ್ನಲಾಗಿದೆ. ಬಿಯಾನ್ಸ್ ಅವರ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ 4 – 6 ಮಿಲಿಯನ್ ಸುಮಾರು ಅಂದಾಜು 33 – 50 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈ ಕಾರ್ಯಕ್ರಮಗಳು ಪ್ರಪಂಚದಾದ್ಯಂತದ ಪ್ರಸಿದ್ಧ ವ್ಯಕ್ತಿಗಳು ಮತ್ತು ಗಣ್ಯರನ್ನು ಆಕರ್ಷಿಸಿತು.

Exit mobile version