ನವದೆಹಲಿ: ಪ್ಯಾನ್ – ಆಧಾರ್ ಲಿಂಕ್ ಮಾಡಲು ಗಡುವನ್ನು 2022ರ ಮಾರ್ಚ್ 31 ರಿಂದ 2023ರ ಮಾರ್ಚ್ 31ರ ತನಕ ವಿಸ್ತರಿಸಲಾಗಿದೆ. ಹೀಗಿದ್ದರೂ, 2022ರ ಜುಲೈ 1 ರ ಬಳಿಕ ಇವುಗಳನ್ನು ಲಿಂಕ್ ಮಾಡುವುದಕ್ಕೆ 1,000 ರೂ. ಶುಲ್ಕವನ್ನೂ ನೀಡಬೇಕಾಗುತ್ತದೆ.
ಪ್ಯಾನ್-ಆಧಾರ್ ಲಿಂಕ್ ಮಾಡಲು 2022ರ ಜೂನ್ 30ಕ್ಕೆ ಅಥವಾ ಮೊದಲು 500 ರೂ. ಶುಲ್ಕವಾದರೆ, ಜುಲೈ 1ರ ಬಳಿಕ 1,000 ರೂ. ತಗಲುತ್ತದೆ. ಈ ಬಗ್ಗೆ ಕಳೆದ ಮಾರ್ಚ್ 29ರಂದು ಅಧಿಸೂಚನೆ ಹೊರಡಿಸಲಾಗಿತ್ತು.
ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?
- ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಲು ಹಲವು ವಿಧಾನಗಳನ್ನು ಕಲ್ಪಿಸಿದೆ.
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಮೂಲಕ ಲಿಂಕ್ ಮಾಡಬಹುದು.
- ಎಸ್ಸೆಮ್ಮೆಸ್ ಅಥವಾ NSDL/UTIIL ಕಚೇರಿಗೆ ತೆರಳಿ ಪ್ಯಾನ್- ಆಧಾರ್ ಲಿಂಕ್ ಮಾಡಬಹುದು.
- ಪ್ಯಾನ್ -ಆಧಾರ್ ಲಿಂಕ್ ಮಾಡಲು ಗಡುವು ತಪ್ಪಿದರೆ ಬಳಿಕ ಪ್ಯಾನ್ ನಿಷ್ಕ್ರಿಯ ಎನ್ನಿಸುವುದು.