ನವ ದೆಹಲಿ: ಕೇಂದ್ರ ನೇರ ತೆರಿಗೆಗಳ ಮಂಡಳಿಯು (CBDT) ವೇತನಯೇತರ ವರ್ಗಾವಣೆಗಳಿಗೆ ಸಂಬಂಧಿಸಿದ ಟಿಡಿಎಸ್ ರಿಟರ್ನ್ ಸಲ್ಲಿಕೆಯ ಗಡುವನ್ನು 2022ರ ನವೆಂಬರ್ 30ಕ್ಕೆ ವಿಸ್ತರಿಸಿದೆ.
ಫಾರ್ಮ್ 26 Q ಅಡಿಯಲ್ಲಿ ಟಿಡಿಎಸ್ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ವಿಸ್ತರಿಸಲಾಗಿದೆ. ತೆರಿಗೆದಾರರು ಇತ್ತೀಚೆಗೆ ಚಲನ್‌ನಲ್ಲಿ ಹೊಂದಾಣಿಕೆ ಆಗದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಡುವನ್ನು ಮುಂದೂಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಷೇರುಗಳ ಡಿವಿಡೆಂಡ್ ಮೂಲಕ ಗಳಿಸಿದ ಆದಾಯ, ಲಾಟರಿಯಲ್ಲಿ ಗೆದ್ದ ಹಣ, ಬಾಡಿಗೆ, ಸೆಕ್ಯುರಿಟೀಸ್‌ಗಳಲ್ಲಿನ ಹೂಡಿಕೆಯಿಂದ ಸಿಕ್ಕಿದ ಆದಾಯ, ವೃತ್ತಿಪರ ಸೇವೆ, ತಾಂತ್ರಿಕ ಸೇವೆಗಳಿಗೆ ಪಡೆಯುವ ಶುಲ್ಕ ಇತ್ಯಾದಿಗಳ ವಿವರವನ್ನು ಫಾರ್ಮ್ 26 Q ಅಡಿಯಲ್ಲಿ ಸಲ್ಲಿಸಬಹುದು.