ಬೆಂಗಳೂರು: ಭಾರತದಲ್ಲಿ ಲಕ್ಸುರಿ ಹೋಮ್ಸ್ ಸೇಲ್ಸ್ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ 3,100 ಯುನಿಟ್‌ಗೆ ಏರಿಕೆಯಾಗಿದೆ. (Luxury homes) ಕಳೆದ ವರ್ಷ 1,400 ಯುನಿಟ್‌ಗಳು ಮಾರಾಟವಾಗಿತ್ತು ಎಂದು ಸಿಬಿಆರ್‌ಇ ವರದಿ ತಿಳಿಸಿದೆ. (CBRE report) ಬೆಂಗಳೂರು, ಹೈದರಾಬಾದ್, ದಿಲ್ಲಿ-ಎನ್‌ಸಿಆರ್, ಪುಣೆ, ಚೆನ್ನೈ, ಕೋಲ್ಕತಾ ಮತ್ತು ಮುಂಬಯಿನಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ಲಕ್ಸುರಿ ಹೋಮ್ಸ್ ಎಂದರೆ 4 ಕೋಟಿ ರೂ.ಗಿಂತ ಹೆಚ್ಚಿನ ದರ ಇರುವ ಮನೆಗಳು. ಇಂಥ 3,100 ಲಕ್ಸುರಿ ಹೋಮ್ಸ್ ಏಪ್ರಿಲ್-ಜೂನ್‌ನಲ್ಲಿ ಮಾರಾಟವಾಗಿವೆ. ಹೈದರಾಬಾದ್‌ನಲ್ಲಿ 1,000 ಯುನಿಟ್‌ಗಳು ಮಾರಾಟವಾಗಿದೆ. 20 ಪಟ್ಟು ವೃದ್ಧಿಸಿದೆ. ದಿಲ್ಲಿ-ಎನ್‌ಸಿಆರ್ ವಲಯದಲ್ಲಿ 1,050 ಯುನಿಟ್‌ಗಳು ವಿಕ್ರಯವಾಗಿದೆ.
ಪುಣೆಯಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ 150 ಲಕ್ಸುರಿ ಹೋಮ್ಸ್ ಮಾರಾಟವಾಗಿದೆ. ಚೆನ್ನೈ-ಕೋಲ್ಕೊತಾದಲ್ಲಿ 50 ಐಷಾರಾಮಿ ಮನೆಗಳು ವಿಕ್ರಯವಾಗಿವೆ. ಆದರೆ ಮುಂಬಯಿ ಮತ್ತು ಬೆಂಗಳೂರಿನಲ್ಲಿ ಚಿತ್ರಣ ಭಿನ್ನವಾಗಿದೆ. ಈ ಎರಡೂ ನಗರಗಳಲ್ಲಿ ಲಕ್ಸುರಿ ಹೋಮ್ಸ್ ಮಾರಾಟ ಇಳಿಕೆಯಾಗಿದೆ. ಮುಂಬಯಿನಲ್ಲಿ ಲಕ್ಸುರಿ ಹೋಮ್ಸ್ ವ್ಯಾಪಾರ 800ರಿಂದ 750ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 100ರಿಂದ 50ಕ್ಕೆ ಇಳಿದಿದೆ.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ನಾವು ಲಕ್ಸುರಿ ಹೌಸಿಂಗ್ ವಲಯದಲ್ಲಿ ಗಮನಾರ್ಹ ಪ್ರಗತಿ ದಾಖಲಿಸಿದ್ದೇವೆ. 2023ರ ದ್ವಿತೀಯಾರ್ಧದಲ್ಲಿ ಈ ವಲಯ ಮತ್ತಷ್ಟು ವಹಿವಾಟು ದಾಖಲಿಸುವ ನಿರೀಕ್ಷೆ ಇದೆ ಎಂದು ಸಿಬಿಆರ್‌ಇ ಚೇರ್ಮನ್ ತಿಳಿಸಿದ್ದಾರೆ. ಎನ್‌ಸಿಆರ್ ವಲಯದ ಮಟ್ಟಿಗೆ ಗುರುಗ್ರಾಮದಲ್ಲಿ ಉತ್ತಮ ಬೇಡಿಕೆ ಇದೆ ಎಂದು ಡಿಎಲ್‌ಎಫ್ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕ ಆಕಾಶ್ ಓಹ್ರಿ ತಿಳಿಸಿದ್ದಾರೆ.