ನವ ದೆಹಲಿ: ಕಳೆದ 2021-22ರಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ (Direct tax) ಮಹಾರಾಷ್ಟ್ರ, ದಿಲ್ಲಿ ಬಳಿಕ 3 ನೇ ಸ್ಥಾನವನ್ನು ಕರ್ನಾಟಕ ಗಳಿಸಿದೆ. ಕರ್ನಾಟಕದ ಬಳಿಕ ತಮಿಳುನಾಡು, ಗುಜರಾತ್ ಪಟ್ಟಿಯಲ್ಲಿವೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) 2022-23ರಲ್ಲಿ 19.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿಸಿದೆ. 2013-14ರಲ್ಲಿ ಇದು 6.4 ಲಕ್ಷ ಕೋಟಿ ರೂ.ಗಳಾಗಿತ್ತು. ಅಂದರೆ 121% ಏರಿಕೆಯಾಗಿದೆ.
ಮಹಾರಾಷ್ಟ್ರ | 5.2 ಲಕ್ಷ ಕೋಟಿ ರೂ. |
ದಿಲ್ಲಿ | 1.8 ಲಕ್ಷ ಕೋಟಿ ರೂ. |
ಕರ್ನಾಟಕ | 1.7 ಲಕ್ಷ ಕೋಟಿ ರೂ. |
ತಮಿಳುನಾಡು | 0.9 ಲಕ್ಷ ಕೋಟಿ ರೂ. |
ಗುಜರಾತ್ | 0.7 ಲಕ್ಷ ಕೋಟಿ ರೂ. |
ಜನತೆ ವೈಯಕ್ತಿಕ ಆದಾಯ ತೆರಿಗೆಯನ್ನು ಪಾವತಿಸುತ್ತಿರುವುದು, ಆರ್ಥಿಕ ಚಟುವಟಿಕೆಗಳ ವಿಸ್ತರಣೆ ನೇರ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ.
ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು, ನೇರ ತೆರಿಗೆ ಸಂಗ್ರಹದಲ್ಲಿ ದಿಲ್ಲಿ, ಮುಂಬಯಿ ಬಳಿಕ ಮೂರನೇ ಸ್ಥಾನದಲ್ಲಿ ಇದೆ. ಪಟ್ಟಿ ಇಂತಿದೆ.
ಮುಂಬಯಿ | 4.95 ಲಕ್ಷ ಕೋಟಿ ರೂ. |
ಬೆಂಗಳೂರು | 2.04 ಲಕ್ಷ ಕೋಟಿ ರೂ. |
ದಿಲ್ಲಿ | 2.07 ಲಕ್ಷ ಕೋಟಿ ರೂ. |
ಚೆನ್ನೈ | 1.05 ಲಕ್ಷ ಕೋಟಿ ರೂ. |
ಹೈದರಾಬಾದ್ | 88,438 ಕೋಟಿ ರೂ. |