ನವ ದೆಹಲಿ: ಕಳೆದ 2022-23ರಲ್ಲಿ ಇಪಿಎಫ್‌ಒ (EPFO) ಅಡಿಯಲ್ಲಿ ಫಾರ್ಮಲ್ ಸೆಕ್ಟರ್ ವಲಯದ ಉದ್ಯೋಗಿಗಳ ಸಂಖ್ಯೆ 13% ಹೆಚ್ಚಳವಾಗಿದೆ. ಅಂದರೆ 2022-23ರಲ್ಲಿ 1.39 ಕೋಟಿಗೆ ಏರಿಕೆಯಾಗಿದೆ. ಇದು 2021-22ರಲ್ಲಿ 1.22 ಕೋಟಿಯಷ್ಟಿತ್ತು. (Formal sector jobs) ಹೀಗಿದ್ದರೂ ಮಾಸಿಕ ಸರಾಸರಿ ಏರಿಕೆಯ ಹೋಲಿಕೆಯಲ್ಲಿ ನೋಡುವುದಿದ್ದರೆ 2022ರಲ್ಲಿ 15.3 ಲಕ್ಷ ಹಾಗೂ 2023ರ ಮಾರ್ಚ್‌ನಲ್ಲಿ 13.4 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ.
2023ರ ಮಾರ್ಚ್‌ನಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗಿರುವ 13.4 ಲಕ್ಷ ಕಾರ್ಮಿಕರ ಪೈಕಿ ಸುಮಾರು 7.5 ಲಕ್ಷ ಮಂದಿ ಹೊಸ ಸದಸ್ಯರಾಗಿದ್ದಾರೆ. 2.3 ಲಕ್ಷ ಮಂದಿ 18-21 ವರ್ಷ ವಯೋಮಿತಿಯವರಾಗಿದ್ದಾರೆ. 1.9 ಲಕ್ಷ ಮಂದಿ 22-25 ವರ್ಷ ವಯೋಮಿತಿಯವರಾಗಿದ್ದಾರೆ.
ಮಾರ್ಚ್‌ನಲ್ಲಿ ಇಪಿಎಫ್‌ಒಗೆ ನಿವ್ವಳ ಸೇರ್ಪಡೆಯಾದವರಲ್ಲಿ 18-25 ವರ್ಷ ವಯೋಮಿತಿಯವರು 56.6% ರಷ್ಟಿದ್ದಾರೆ ಎಂದು ಕಾರ್ಮಿಕ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. 10 ಲಕ್ಷ ಮಂದಿ ಇಪಿಎಫ್‌ಒಗೆ ಮರು ಸೇರ್ಪಡೆಯಾಗಿದ್ದಾರೆ.
ಉತ್ತರಾಖಂಡ್, ಉತ್ತರಪ್ರದೇಶ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ, ಮಿಜೋರಾಂ ಮತ್ತಿತರ ರಾಜ್ಯಗಳಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಮಂದಿ ಹೊಸತಾಗಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: EPF e-passbook : ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಇ-ಪಾಸ್‌ಬುಕ್ ಮತ್ತೆ ಲಭ್ಯ