ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಬಂಗಾರದ ಬೆಲೆ (Gold Rate Today)ಇಂದು ಕಡಿಮೆಯಾಗಿದೆ. ಪ್ರಾರಂಭಿಕ ವ್ಯವಹಾರದಲ್ಲಿ 10 ಗ್ರಾಂ. ಚಿನ್ನದ ಬೆಲೆ 58,136 ರೂಪಾಯಿ ಇತ್ತು. ಮಧ್ಯಾಹ್ನದ ಹೊತ್ತಿಗೆ 58,096 ರೂ.ಗೆ ತಲುಪಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟ್ರಾಯ್ ಔನ್ಸ್ಗೆ 1,914.10ಯುಎಸ್ ಡಾಲರ್ನಷ್ಟಿತ್ತು. ಹಾಗೇ, ಬಹು ಸರಕು ವಿನಿಮಯ ಕೇಂದ್ರದಲ್ಲಿ ಬೆಳ್ಳಿ ಬೆಲೆ (Silver Price)ಪ್ರಾರಂಭಿಕ ಹಂತದಲ್ಲಿ ಕೆಜಿಗೆ 67,784 ರೂ.ಇದ್ದಿದ್ದು, ಮಧ್ಯಾಹ್ನದ ವೇಳೆಗೆ ಇಳಿಕೆಯಾಗಿ 61,531 ರೂ.ಆಗಿದೆ. ಅಂತಾರಾಷ್ಟ್ರೀಯ ಮಾರ್ಕೆಟ್ನಲ್ಲಿ ಪ್ರತಿ ಟ್ರಾಯ್ ಔನ್ಸ್ಗೆ 22.14 ಡಾಲರ್ಗಳಷ್ಟಿತ್ತು.
ಗುಡ್ರಿಟರ್ನ್ಸ್ ಪ್ರಕಾರ ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತಲೂ 400 ರೂ. ಇಳಿಕೆಯಾಗಿದೆ. 1 ಗ್ರಾಂ.ಗೆ 5410 ರೂ., 8 ಗ್ರಾಂ.ಗೆ 43,280 ರೂ., 10 ಗ್ರಾಂ.ಗೆ 54,100 ರೂ. ಮತ್ತು 100 ಗ್ರಾಂಗೆ 5,41,000 ರೂ. ಆಗಿದೆ. ಇನ್ನು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತಲೂ 430 ರೂಪಾಯಿ ಕಡಿಮೆಯಾಗಿದೆ. ನಿನ್ನೆ 59,450 ರೂ. ಇದ್ದಿದ್ದು, ಇಂದು 59,020ಕ್ಕೆ ಇಳಿಕೆಯಾಗಿದೆ. 1 ಗ್ರಾಂ.ಗೆ 5,902 ರೂ., 8 ಗ್ರಾಂ.ಗೆ 47,216 ರೂ., 100 ಗ್ರಾಂ.ಗೆ 5,90,200 ರೂ. ಇದೆ. ಇನ್ನು ಬೆಳ್ಳಿ ದರ ಕೂಡ ಇಳಿಮುಖವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ 715 ರೂ., 100 ಗ್ರಾಂ.ಗೆ 7150 ರೂ., ಒಂದು ಕೆಜೆಗೆ 71,500ರೂ. ಇದೆ. ಇದು ನಿನ್ನೆಗಿಂತಲೂ 500 ರೂ.ಕಡಿಮೆ.
ಇದನ್ನೂ ಓದಿ: Gold rate today : wow ಖರೀದಿದಾರರು ಗಮನಿಸಿ, ಬಂಗಾರದ ದರದಲ್ಲಿ 4 ದಿನದಲ್ಲಿ 710 ರೂ. ಇಳಿಕೆ
ಬೆಂಗಳೂರು ಚಿನ್ನ-ಬೆಳ್ಳಿ ದರ
ಬೆಂಗಳೂರಿನಲ್ಲಿ ಚಿನ್ನದ ದರ ನಿನ್ನೆಗಿಂತಲೂ ಕಡಿಮೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ.ಗೆ 5410 ರೂ., 8 ಗ್ರಾಂ.ಗೆ 43,280 ರೂ., 10 ಗ್ರಾಂ.ಗೆ 54,100ರೂ. ಮತ್ತು 100 ಗ್ರಾಂ.ಗೆ 5,41,000ರೂ.ಆಗಿದೆ. ಆಗೇ. 24 ಕ್ಯಾರೆಟ್ನ 1 ಗ್ರಾಂ. ಬಂಗಾರದ ಬೆಲೆ 5,902 ರೂ., 8 ಗ್ರಾಂ. ಗೆ 47,216ರೂ., 10ಗ್ರಾಂ.ಗೆ 59,020 ರೂ.ಮತ್ತು 100 ಗ್ರಾಂ.ಗೆ 5,90,200 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಮುಖವಾಗಿದೆ. ಕೆಜಿ ಬೆಳ್ಳಿಗೆ 1250 ರೂ.ಕಡಿಮೆಯಾಗಿದ್ದು ಇಂದು 79,750ರೂ.ಗೆ ಮಾರಾಟವಾಗಿದೆ. 10 ಗ್ರಾಂ.ಗೆ 707.50 ರೂ., 100 ಗ್ರಾಂ.ಗೆ 7075 ರೂಪಾಯಿ ಆಗಿದೆ.