ಚಿನ್ನದ ದರ ಇಂದು (Gold Rate Today) ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳವಾಗಿದೆ. (Silver Rate Today) ಗುಡ್ರಿಟರ್ನ್ಸ್ ಪ್ರಕಾರ ಬೆಂಗಳೂರಲ್ಲಿ (Gold Rate in Bangalore) 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಇಂದು 59,510 ರೂಪಾಯಿ ಆಗಿದೆ. ನಿನ್ನೆ ಇದು 59,070 ರೂ. ಇತ್ತು. ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಮಧ್ಯಾಹ್ನದ ವೇಳೆಗೆ ಸುಮಾರು 440 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರದಲ್ಲಿ 400 ರೂ.ಹೆಚ್ಚಳವಾಗಿದ್ದು, ಇಂದು ಬೆಲೆ 54,550 ರೂಪಾಯಿ ಇದೆ.
ಹಾಗೇ, ಬೆಂಗಳೂರಲ್ಲಿ 22 ಕ್ಯಾರೆಟ್, 1 ಗ್ರಾಂ ಚಿನ್ನದ ದರ 5,455ರೂ., 8 ಗ್ರಾಂ. ಚಿನ್ನದ ಬೆಲೆ 43,640 ರೂ., 100 ಗ್ರಾಂ ಚಿನ್ನದ ದರ 5,45,500 ರೂಪಾಯಿ ಇದೆ. 24 ಕ್ಯಾರೆಟ್ನ 1 ಗ್ರಾಂ ಚಿನ್ನಕ್ಕೆ ಬೆಲೆ 5,951 ರೂ. ಆಗಿದೆ. 8 ಗ್ರಾಂ ಚಿನ್ನದ ಬೆಲೆ 47,608 ರೂ., 100 ಗ್ರಾಂ ಚಿನ್ನದ ದರ 5,95,100 ರೂ. ಆಗಿದೆ. ಇನ್ನು ಬೆಳ್ಳಿ ಬೆಲೆಯೂ ಕಳೆದ ಎರಡು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ ಇಂದು 1050 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ 1 ಗ್ರಾಂ.ಗೆ 72.75 ರೂ., 8 ಗ್ರಾಂ.ಗೆ 582 ರೂ., 10 ಗ್ರಾಂ. 727.50 ರೂ., 100 ಗ್ರಾಂ.ಗೆ 7275ರೂ., 1 ಕೆಜಿಗೆ 72, 750 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 100 ರೂ. ಇಳಿಕೆ, ಬೆಳ್ಳಿ 1,750 ರೂ. ಅಗ್ಗ
ಭಾರತದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಅತ್ಯುತ್ತಮ ಹೂಡಿಕೆ ಮಾರ್ಗವಾಗಿಯೂ ಬಂಗಾರವನ್ನು ಪರಿಗಣಿಸಲಾಗುತ್ತದೆ. ಹಾಗೇ, ಅಲಂಕಾರದ ವಿಚಾರದಲ್ಲೂ ಬಂಗಾರ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿನ ಜನ ಕೈಯಲ್ಲಿ ಸ್ವಲ್ಪ ಹಣವಾದರೆ ಸಾಕು ಚಿನ್ನ ಖರೀದಿಸಲು ಮೊದಲ ಆದ್ಯತೆ ಕೊಡುತ್ತಾರೆ. ಬಾರ್, ಕಾಯ್ನ್, ಆಭರಣ ರೂಪದಲ್ಲಿ ಚಿನ್ನ ಕೊಳ್ಳುವಿಕೆ ನಡೆಯುತ್ತದೆ. ಇನ್ನು ಚಿನ್ನದಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂದು ಎರಡು ವಿಧವಿದ್ದು, 24 ಕ್ಯಾರೆಟ್ನ್ನು ಅಪರಂಜಿ ಚಿನ್ನ ಎಂದೇ ಹೇಳಲಾಗುತ್ತದೆ. ಅಂದರೆ ಇದರಲ್ಲಿ ಶೇ.99.9ರಷ್ಟು ಚಿನ್ನವಿರುತ್ತದೆ. ಇದು ಒಡವೆ ರೂಪದಲ್ಲಿ ಸಿಗುವುದಿಲ್ಲ. ಇನ್ನು 22 ಕ್ಯಾರೆಟ್ ಚಿನ್ನವೆಂದರೆ ಅದರಲ್ಲಿ ತಾಮ್ರ, ಸತು ಸೇರಿ ಇನ್ನಿತರ ಲೋಹಗಳ ಅಂಶವಿರುತ್ತದೆ. ಆಭರಣಗಳಲ್ಲಿ ಬಳಕೆ ಮಾಡುವ ಚಿನ್ನ ಇದು.