Site icon Vistara News

Gold Bond Scheme 2023-24 : ಸಾವರಿನ್‌ ಗೋಲ್ಡ್‌ ಬಾಂಡ್‌ ಜೂನ್‌ 19-23ಕ್ಕೆ ಲಭ್ಯ, ಏನೇನು ಲಾಭ?

gold bond

ಬೆಂಗಳೂರು: ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ (Sovereign Gold Bond Scheme- 2023-24) series 1 (SGB) ಜೂನ್‌ 19ರಿಂದ ಹೂಡಿಕೆದಾರರಿಗೆ ಸಬ್‌ಸ್ಕ್ರಿಪ್ಷನ್‌ಗೆ ಲಭ್ಯವಿದೆ. ಈ ಬಾಂಡ್‌ನ issue price ಪ್ರತಿ ಗ್ರಾಮ್‌ಗೆ 5,926 ರೂ. ಆಗಿದೆ. ಆನ್‌ಲೈನ್‌ನಲ್ಲಿ ಸಬ್‌ಸ್ಕ್ರಿಪ್ಷನ್‌ ಅವಧಿ ಶುಕ್ರವಾರ (ಜೂನ್‌ 23) ಮುಕ್ತಾಯವಾಗಲಿದೆ. 2023ರ ಸೆಪ್ಟೆಂಬರ್‌ 11-15ಕ್ಕೆ ಮತ್ತೊಂದು ಸುತ್ತಿನಲ್ಲಿ ಗೋಲ್ಡ್‌ ಬಾಂಡ್‌ ಬಿಡುಗಡೆಯಾಗಲಿದೆ.

ಬಾಂಡ್‌ನ ಮೌಲ್ಯವು India Bullion and Jewellers Association ltd ಪ್ರಕಟಿಸುವ, 999 ಪ್ಯೂರಿಟಿ ಇರುವ ಚಿನ್ನದ (24 ಕ್ಯಾರಟ್) ಕಳೆದ ಮೂರು ದಿನಗಳ ಸರಾಸರಿ ಕ್ಲೋಸಿಂಗ್‌ ರೇಟ್‌ನ ಆಧಾರದಲ್ಲಿ ನಿಗದಿಯಾಗುತ್ತದೆ. ಹಲವು ವಿಧಗಳಲ್ಲಿ ಎಸ್‌ಜಿಬಿಯಿಂದ ಪ್ರಯೋಜನಗಳಿವೆ. ಮೊದಲನೆಯದಾಗಿ ಚಿನ್ನದ ದರ ಏರಿಕೆಯ ಲಾಭ ಸಿಗುತ್ತದೆ. ಎರಡನೆಯದಾಗಿ ವಾರ್ಷಿಕ 2.5% ಬಡ್ಡಿ ಸಿಗುತ್ತದೆ ಎನ್ನುತ್ತಾರೆ ವೈಯಕ್ತಿಕ ಹಣಕಾಸು ತಜ್ಞ ಜಿತೇಂದ್ರ ಸೋಲಂಕಿ. ಮೂರನೆಯದಾಗಿ 8 ವರ್ಷಗಳ ತನಕ ವ್ಯಕ್ತಿಯೊಬ್ಬ ಹೂಡಿಕೆ ಮಾಡಿದರೆ ಲಭಿಸುವ ಆದಾಯಕ್ಕೆ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಇರುವುದಿಲ್ಲ. ಎಸ್‌ಜಿಬಿಯು ಲಿಕ್ವಿಡಿಟಿಯನ್ನು ಹೊಂದಿದ್ದು, ಎಕ್ಸ್‌ಚೇಂಜ್‌ಗಳಲ್ಲಿ ಇದರ ವಹಿವಾಟು ನಡೆಯುತ್ತದೆ. ಸಾವರಿನ್‌ ಗ್ಯಾರಂಟಿ ಇರುವುದರಿಂದ ಡಿಫಾಲ್ಟ್‌ ಆಗುವ ಅಪಾಯ ಇರುವುದಿಲ್ಲ. ನಿರ್ವಹಣೆಗೆ ಯಾವುದೇ ವೆಚ್ಚ ತಗಲುವುದಿಲ್ಲ ಎಂದು ತಜ್ಞರು ವಿವರಿಸುತ್ತಾರೆ.

ನೀವು ಏಕೆ ಗೋಲ್ಡ್‌ ಬಾಂಡ್‌ ಖರೀದಿಸಬೇಕು?

  1. ಎಸ್‌ಜಿಬಿ ಅಥವಾ ಗೋಲ್ಡ್‌ ಬಾಂಡ್‌ ಸ್ಕೀಮ್‌ 2023-24 ಎನ್ನುವುದು ಲಾಂಗ್‌ ಟರ್ಮ್‌ ಹೂಡಿಕೆಯ ಯೋಜನೆಯಾಗಿದ್ದು, ವ್ಯಕ್ತಿಯೊಬ್ಬ 8 ವರ್ಷಗಳ ಹೂಡಿಕೆಯಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
  2. ಚಿನ್ನದ ಪರಿಶುದ್ಧತೆಯ ರಿಸ್ಕ್‌ ಇಲ್ಲ.
  3. ಸಾವರಿನ್‌ ಗ್ಯಾರಂಟಿ ಇರುವುದರಿಂದ ಡಿಫಾಲ್ಟ್‌ ಆಗುವ ಅಪಾಯ ಇರುವುದಿಲ್ಲ.
  4. 8 ವರ್ಷ ಹೂಡಿಕೆಗೆ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಇರುವುದಿಲ್ಲ.
  5. ವಾರ್ಷಿಕ 2.5% ಬಡ್ಡಿ ದರದ ಆದಾಯವೂ ಸಿಗುತ್ತದೆ.
  6. ಇದನ್ನು ಅಡಮಾನ ಇಟ್ಟು ಸಾಲ ಪಡೆಯಬಹುದು.
  7. ರಿಟೇಲ್‌ ಹೂಡಿಕೆದಾರರು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದಿದ್ದರೆ ಡಿಸ್ಕೌಂಟ್‌ ಪಡೆಯಲಿದ್ದಾರೆ.

ಏನಿದು ಸಾವರಿನ್‌ ಗೋಲ್ಡ್‌ ಬಾಂಡ್‌ ? ಬಿಡುಗಡೆ ಮಾಡುವವರು ಯಾರು?

ಸಾವರಿನ್‌ ಗೋಲ್ಡ್‌ ಬಾಂಡ್‌ ಸರ್ಕಾರಿ ಸೆಕ್ಯುರಿಟೀಸ್‌ಗಳಾಗಿದ್ದು, ಚಿನ್ನದ ಗ್ರಾಮ್‌ ಲೆಕ್ಕದಲ್ಲಿ ವಿಕ್ರಯವಾಗುತ್ತದೆ. ಫಿಸಿಕಲ್‌ ಗೋಲ್ಡ್‌ ಅನ್ನು ಇಟ್ಟುಕೊಳ್ಳುವುದಕ್ಕೆ ಇದು ಪರ್ಯಾಯವಾಗಿರುತ್ತದೆ. ಹೂಡಿಕೆದಾರರು ಹಣ ಕೊಟ್ಟು ಸಾವರಿನ್‌ ಗೋಲ್ಡ್‌ ಬಾಂಡ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಮೆಚ್ಯೂರಿಟಿ ಮೊತ್ತವನ್ನೂ ಹಣದಲ್ಲಿಯೇ ಪಡೆಯುತ್ತಾರೆ. ಸರ್ಕಾರದ ಪರವಾಗಿ ಆರ್‌ಬಿಐ ಬಿಡುಗಡೆ ಮಾಡುತ್ತದೆ. ಭೌತಿಕ ಬಂಗಾರವನ್ನು ಕಳೆದುಕೊಳ್ಳುವ ರಿಸ್ಕ್‌ ಇರುತ್ತದೆ. ಆದರೆ ಗೋಲ್ಡ್‌ ಬಾಂಡ್‌ಗೆ ಅಂಥ ರಿಸ್ಕ್‌ ಇಲ್ಲ. ಆದರೆ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದರೆ ಮಾತ್ರ ಹೂಡಿಕೆ ಮೌಲ್ಯ ತಗ್ಗಬಹುದು. ಆದರೆ ಇತಿಹಾಸ ಗಮನಿಸಿದರೆ 8 ವರ್ಷಗಳ ಅವಧಿಯಲ್ಲಿ ಬಂಗಾರದ ದರ ಇಳಿದ ಉದಾಹರಣೆ ಇಲ್ಲ.

ಗೋಲ್ಡ್‌ ಬಾಂಡ್‌ ಎಲ್ಲಿ ಲಭ್ಯ? ಬ್ಯಾಂಕ್‌ ಕಚೇರಿಗಳು, ಅಂಚೆ ಇಲಾಖೆಯ ನಿರ್ದಿಷ್ಟ ಕಚೇರಿಗಳಲ್ಲಿ ಸಾವರಿನ್‌ ಗೋಲ್ಡ್‌ ಬಾಂಡ್‌ ಅರ್ಜಿ ಸಿಗುತ್ತದೆ. ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಬಿಎಸ್‌ಒ, ಎನ್‌ಎಸ್‌ಇನಲ್ಲಿ ಖರೀದಿಸಬಹುದು. ಪ್ರತಿ ಅರ್ಜಿಯ ಜತೆಗೆ PAN Number ಕಡ್ಡಾಯವಾಗಿ ಇರಬೇಕು. ವೈಯಕ್ತಿಕವಾಗಿ ಬಾಂಡ್‌ ಅನ್ನು ಕನಿಷ್ಠ 1 ಗ್ರಾಮ್‌ ಲೆಕ್ಕದಲ್ಲಿ ಖರೀದಿಸಬಹುದು. ಗರಿಷ್ಠ 4 ಕೆ.ಜಿ ತನಕ ಖರೀದಿಸಬಹುದು. ಆರ್‌ಇಐ 2015ರಲ್ಲಿ ಎಸ್‌ಜಿಬಿಗಳನ್ನು ಬಿಡುಗಡೆಗೊಳಿಸಿದ ಬಳಿಕ ಇದುವರೆಗೆ 30,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಆನ್‌ಲೈನ್‌ನಲ್ಲಿ ಸಾವರಿನ್‌ ಗೋಲ್ಡ್‌ ಬಾಂಡ್‌ ಖರೀದಿಸುವುದು ಹೇಗೆ? ಸಂಬಂಧಿಸಿದ ಬ್ಯಾಂಕ್‌ಗಳ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ. ಇ-ಸರ್ವೀಸ್‌ ಆಯ್ಕೆ ಕ್ಲಿಕ್ಕಿಸಿ (e-service) ಬಳಿಕ sovereign gold bond ಒತ್ತಿರಿ. ಟರ್ಮ್‌ & ಕಂಡೀಶನ್‌ ಓದಿರಿ, ಬಳಿಕ Proceed ಕ್ಲಿಕ್ಕಿಸಿ. ರಿಜಿಸ್ಟ್ರೇಶನ್‌ ಫಾರ್ಮ್‌ ತುಂಬಿಸಿ ಸಬ್‌ಮಿಟ್‌ ಒತ್ತಿರಿ. ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ವಿವರ ನೀಡಬೇಕಾಗುತ್ತದೆ.

ಇದನ್ನೂ ಓದಿ: Gold bonds return : ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿದವರಿಗೆ ಕಳೆದ 8 ವರ್ಷಗಳಲ್ಲಿ 13.7% ಆದಾಯ

Exit mobile version